Headlines

Vasthu Tips: ಸಾಲ,ಹಣದ ಸಮಸ್ಯೆ ಅಂತ ಕೊರಗಬೇಡಿ; ನಿಮ್ಮ ಪರ್ಸ್​​ನಲ್ಲಿ ಈ ಚಿಕ್ಕ ಬದಲಾವಣೆ ಮಾಡಿ – Kannada News | Vastu Tips for Wallet Prosperity: Attract Wealth and Avoid Financial Loss

ಹಣ ನಮ್ಮ ಜೀವನದಲ್ಲಿ ಭದ್ರತೆ ಮತ್ತು ಸಮೃದ್ಧಿಯ ಸಂಕೇತ. ಆದರೆ ಕೆಲವೊಮ್ಮೆ ನಾವು ತಿಳಿಯದೇ ಮಾಡುವ ಸಣ್ಣ ತಪ್ಪುಗಳೇ ಆರ್ಥಿಕ ಸ್ಥಿತಿಗೆ ಅಡ್ಡಿಯಾಗುತ್ತವೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಅವುಗಳಲ್ಲಿ ಪ್ರಮುಖವಾದದ್ದು ಹರಿದ ಅಥವಾ ಕೊಳಕಾದ ಪರ್ಸ್ ಬಳಸುವುದು. ಪರ್ಸ್ ಕೇವಲ ಹಣ ಇಡುವ ವಸ್ತುವಲ್ಲ, ಅದು ನಮ್ಮ ಆರ್ಥಿಕ ಶಕ್ತಿಯನ್ನು ಪ್ರತಿನಿಧಿಸುತ್ತದೆ ಎಂಬ ನಂಬಿಕೆಯಿದೆ. ಆದ್ದರಿಂದ ಪರ್ಸ್ ಸ್ವಚ್ಛ, ಸರಿಯಾಗಿರುವುದು ಮತ್ತು ವ್ಯವಸ್ಥಿತವಾಗಿರುವುದು ಮುಖ್ಯವೆಂದು ವಾಸ್ತು ಸೂಚಿಸುತ್ತದೆ.

ಹೆಚ್ಚಿನವರು ತಮ್ಮ ಪರ್ಸ್‌ನಲ್ಲಿ ಹಳೆಯ ಬಿಲ್‌ಗಳು, ಅನಗತ್ಯ ರಶೀದಿಗಳು, ಹರಿದ ನೋಟುಗಳು ಹಾಗೂ ಬಳಸದೇ ಇರುವ ಚೀಟಿಗಳನ್ನು ಸಂಗ್ರಹಿಸಿಕೊಂಡಿರುತ್ತಾರೆ. ವಾಸ್ತು ಪ್ರಕಾರ, ಇಂತಹ ಅವ್ಯವಸ್ಥೆ ಆರ್ಥಿಕ ಪ್ರವಾಹವನ್ನು ತಡೆಯುತ್ತದೆ ಎಂದು ನಂಬಲಾಗಿದೆ. ವಿಶೇಷವಾಗಿ ಹರಿದ ಪರ್ಸ್ ಬಳಸುವುದು ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು . ಹೀಗಾಗಿ ಪರ್ಸ್ ಸ್ವಲ್ಪ ಹರಿದಿದ್ದರೂ ಅದನ್ನು ತಕ್ಷಣ ಬದಲಾಯಿಸುವುದು ಉತ್ತಮ. ಸ್ವಚ್ಛತೆ ಮತ್ತು ಸರಳತೆ ಆರ್ಥಿಕ ಶ್ರೇಯಸ್ಸಿಗೆ ದಾರಿ ಮಾಡಿಕೊಡುತ್ತವೆ.

ಪರ್ಸ್‌ನ ಬಣ್ಣವೂ ಆರ್ಥಿಕ ಸ್ಥಿತಿಗೆ ಪ್ರಭಾವ ಬೀರುತ್ತದೆ ಎಂಬ ನಂಬಿಕೆಯಿದೆ. ತುಂಬಾ ಗಾಢವಾದ ಕಪ್ಪು ಅಥವಾ ನೀಲಿ ಬಣ್ಣಗಳು ಕೆಲವೊಮ್ಮೆ ಹಣದ ಅಡೆತಡೆಗಳನ್ನು ಸೂಚಿಸುತ್ತವೆ ಎಂದು ಹೇಳಲಾಗುತ್ತದೆ. ಅದರ ಬದಲಾಗಿ ಹಸಿರು, ಕಂದು ಅಥವಾ ಕ್ರೀಮ್ ಬಣ್ಣದ ಪರ್ಸ್ ಸಮತೋಲನ ಮತ್ತು ಸ್ಥಿರತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇವುಗಳು ಆರ್ಥಿಕ ಶಕ್ತಿ ಹೆಚ್ಚಿಸಲು ಸಹಕಾರಿ ಎಂದು ನಂಬಲಾಗಿದೆ.

ಇದನ್ನೂ ಓದಿ: ಈ ರಾಶಿಯವರು ತಪ್ಪಿಯೂ ಬೆಳ್ಳಿ ಧರಿಸಬೇಡಿ, ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು!

ಕೆಲವರು ತಮ್ಮ ಪರ್ಸ್‌ನಲ್ಲಿ ಲಕ್ಷ್ಮೀ ದೇವಿ ಅಥವಾ ಕುಬೇರರ ಚಿತ್ರಗಳನ್ನು ಇಟ್ಟುಕೊಳ್ಳುತ್ತಾರೆ. ಆದರೆ ವಾಸ್ತು ಪ್ರಕಾರ ದೇವರ ಚಿತ್ರಗಳನ್ನು ಪರ್ಸ್‌ನಲ್ಲಿ ಇಡುವುದು ಶ್ರೇಯಸ್ಕರವಲ್ಲ ಎಂದು ಹೇಳಲಾಗುತ್ತದೆ. ಬದಲಾಗಿ, ಶುಭ ಸಂಕೇತವಾದ ಸೂರ್ಯ ಯಂತ್ರವನ್ನು ಕೆಂಪು ಕಾಗದದಲ್ಲಿ ಇಟ್ಟುಕೊಳ್ಳಬಹುದು ಎಂಬ ಸಲಹೆ ನೀಡಲಾಗುತ್ತದೆ. ಇದು ಧನಪ್ರವಾಹವನ್ನು ಬಲಪಡಿಸುತ್ತದೆ ಎಂದು ನಂಬಲಾಗಿದೆ.

ಇದಲ್ಲದೆ, ನವಿಲು ಗರಿ ಪರ್ಸ್‌ನಲ್ಲಿ ಇಟ್ಟುಕೊಳ್ಳುವುದು ಶುಭಕರವೆಂದು ವಾಸ್ತು ಮತ್ತು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ. ಇದು ನಕಾರಾತ್ಮಕ ಶಕ್ತಿಯನ್ನು ದೂರ ಮಾಡುತ್ತದೆ ಮತ್ತು ಆರ್ಥಿಕ ಲಾಭದ ಅವಕಾಶಗಳನ್ನು ಹೆಚ್ಚಿಸುತ್ತದೆ ಎನ್ನಲಾಗುತ್ತದೆ. ಹಳದಿ ಬಟ್ಟೆಯಲ್ಲಿ ಸ್ವಲ್ಪ ಅಕ್ಕಿ ಕಾಳುಗಳು ಮತ್ತು ಅರಿಶಿನವನ್ನು ಕಟ್ಟಿಕೊಂಡು ಪರ್ಸ್‌ನಲ್ಲಿ ಇಡುವುದೂ ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *