ಇರಾನ್, ಜನವರಿ 09: ಇರಾನ್ ಸರ್ಕಾರ ತನ್ನ ವಿರೋಧಿ ಪ್ರತಿಭಟನೆಗಳನ್ನು ಹತ್ತಿಕ್ಕುವ ಪ್ರಯತ್ನಗಳನ್ನು ತೀವ್ರಗೊಳಿಸುತ್ತಿದ್ದಂತೆ, ಇರಾನ್ ಮಹಿಳೆಯೊಬ್ಬರು ಇಸ್ಲಾಮಿಕ್ ಆಡಳಿತವನ್ನು ಧಿಕ್ಕರಿಸುತ್ತಾ ರಕ್ತ ಸಿಕ್ತವಾದ ಸ್ಥಿತಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ. ಬಾಯಿಯಿಂದ ರಕ್ತ ಸುರಿಯುತ್ತಿದ್ದರೂ ಮಹಿಳೆ ಟೆಹ್ರಾನ್ನ ಬೀದಿಯಲ್ಲಿ ಮಹಿಳೆ ಘೋಷಣೆ ಕೂಗುತ್ತಾ ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ನನಗೆ ಭಯವಿಲ್ಲ, ನಾನು ಸತ್ತು 47 ವರ್ಷಗಳಾಯಿತು ಎಂದು ಆಕೆ ಕೂಗುತ್ತಿದ್ದರು.ಇರಾನ್ನ ಇಸ್ಲಾಮಿಕ್ ಆಡಳಿತವು 47 ವರ್ಷಗಳ ಹಿಂದೆ 1979 ರ ಇಸ್ಲಾಮಿಕ್ ಕ್ರಾಂತಿಯೊಂದಿಗೆ ಪ್ರಾರಂಭವಾಯಿತು.ಪಾಶ್ಚಿಮಾತ್ಯ ಪರ ಶಾ ಮೊಹಮ್ಮದ್ ರೆಜಾ ಪಹ್ಲವಿಯನ್ನು ಪದಚ್ಯುತಗೊಳಿಸಿ ಅಯತೊಲ್ಲಾ ರುಹೊಲ್ಲಾ ಖೊಮೇನಿ ನೇತೃತ್ವದ ಶಿಯಾ ಇಸ್ಲಾಮಿಕ್ ಪ್ರಭುತ್ವವನ್ನು ಸ್ಥಾಪಿಸಿತು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ