Video: ಮೊಮ್ಮಗನಿಗೆ ಕಾರು ನಿಲ್ಲಿಸಲು ಸಹಾಯ ಮಾಡಲು ಹೋಗಿ ಸಾವಿನ ಮನೆ ಕದ ತಟ್ಟಿದ ಮಹಿಳೆ

Video: ಮೊಮ್ಮಗನಿಗೆ ಕಾರು ನಿಲ್ಲಿಸಲು ಸಹಾಯ ಮಾಡಲು ಹೋಗಿ ಸಾವಿನ ಮನೆ ಕದ ತಟ್ಟಿದ ಮಹಿಳೆ

ಫಾರೂಕಾಬಾದ್, ಮಾರ್ಚ್​ 05: ಮೊಮ್ಮನಿಗೆ ಕಾರು ನಿಲ್ಲಿಸಲು ಸಹಾಯ ಮಾಡಲು ಹೋಗಿ ಮಹಿಳೆ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಫಾರೂಕಾಬಾದ್​ನಲ್ಲಿ ನಡೆದಿದೆ. ಈ ಭಯಾನಕ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆತ ಕಾರಿನ ಒಳಗೆ ಕುಳಿತ ಬಳಿಕ ಆಕೆ ಮನೆಯ ಗೇಟ್ ಮುಚ್ಚಲು ಹೋಗಿದ್ದರು. ಆಗ ಚಾಲಕ ನಿಯಂತ್ರಣ ಕಳೆದುಕೊಂಡ ಕಾರಣ ಕಾರು ಹಿಂದಕ್ಕೆ ಚಲಿಸಿತ್ತು. ಇಳಿಜಾರಿದ್ದ ಕಾರಣ ವೇಗವಾಗಿ ಹಿಂದೆ ಬಂದಿದ್ದು, ಮಹಿಳೆ ಕಾರು ಹಾಗೂ ಕಾಂಪೌಂಡ್ ನಡುವೆ ಸಿಲುಕಿಕೊಂಡು ಸಾವನ್ನಪ್ಪಿದ್ದಾರೆ. ಥಾರ್ ಸದ್ದು ಮಾಡುತ್ತಾ ಕೆಳಗೆ ಬರುತ್ತಿದ್ದಂತೆ ವೃದ್ಧ ಮಹಿಳೆ ಸಹಾಯಕ್ಕಾಗಿ ಕೂಗುತ್ತಲೇ ಇದ್ದರು.ಕುಟುಂಬ ಸದಸ್ಯರು ಆಕೆಯನ್ನು ರಕ್ಷಿಸಲು ಧಾವಿಸಿ ಸ್ಥಳಕ್ಕೆ ಧಾವಿಸಿದರು. ಆದರೆ ಅವರಿಗೆ ತೀವ್ರ ಗಾಯಗಳಾಗಿದ್ದ ಕಾರಣ ಪ್ರಾಣಬಿಟ್ಟಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *