ಮನುಷ್ಯರಿಗಿಂತ ಪ್ರಾಣಿ ಪಕ್ಷಿಗಳೇ (animals and birds) ಲೇಸು. ಒಂದು ತುತ್ತು ಅನ್ನ ಹಾಕಿದರೆ ಸಾಕು, ದಿನನಿತ್ಯ ಮನೆ ಮುಂದೆ ಬರುತ್ತವೆ. ಮನುಷ್ಯ ಹಾಗೂ ಪಕ್ಷಿಯ (Bird) ಸ್ನೇಹಪರ ಸಂಬಂಧಕ್ಕೆ ಈ ವಿಡಿಯೋನೇ ಸಾಕ್ಷಿ. ಮನೆಯ ಹತ್ತಿರ ಹಾರಿ ಬಂದು ಬಾಲ್ಕನಿಯಲ್ಲಿ ಕುಳಿತುಕೊಂಡಿದ್ದ ಹಕ್ಕಿಗಳೆರಡು ಜಗಳವಾಡುತ್ತಿದ್ದು, ಮಹಿಳೆಯೊಬ್ಬಳು ಈ ಹಕ್ಕಿಗಳ ನಡುವಿನ ಜಗಳವನ್ನು ಬಿಡಿಸಿದ್ದಾಳೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಈ ದೃಶ್ಯ ನೋಡಿ ನೆಟ್ಟಿಗರು ಅಚ್ಚರಿ ಪಟ್ಟುಕೊಂಡಿದ್ದಾರೆ.
Puja mondal ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ಹಕ್ಕಿಗಳ ನಡುವಿನ ಜಗಳವನ್ನು ಬಿಡಿಸಿದ್ದಾಳೆ. ಮಹಿಳೆಯೂ ಮನೆಯ ಬಾಲ್ಕನಿಯಲ್ಲಿ ಕಿತ್ತಾಡಿಕೊಳ್ಳುತ್ತಿದ್ದ ಹಕ್ಕಿಗಳ ನಡುವೆ ರಾಜಿ ಸಂಧಾನ ಮಾಡಿಸಿರುವ ದೃಶ್ಯವನ್ನು ನೀವು ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ
ಇದನ್ನೂ ಓದಿ: ಶ್ವಾನವನ್ನು ಕಂಡೊಡನೆ ತಬ್ಬಿ ಮುದ್ದಾಡಿದ ಗೊರಿಲ್ಲಾ
ಈ ವಿಡಿಯೋ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಮತ್ತೆ ಮತ್ತೆ ನೋಡಬೇಕೆನಿಸುವ ದೃಶ್ಯ ಎಂದರೆ, ಮತ್ತೊಬ್ಬರು, ತುಂಬಾ ಮುದ್ದಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಈ ಹಕ್ಕಿಗಳು ತುಂಬಾನೇ ಜಗಳ ಆಡುತ್ತವೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ