ಬೆಂಗಳೂರು, ಫೆಬ್ರವರಿ 16: ಬೆಂಗಳೂರಿನಲ್ಲಿ (Bengaluru) ಕಡಿಮೆ ಬಾಡಿಗೆಯುಳ್ಳ ಮನೆ ಸಿಗುವುದೇ ಕಷ್ಟ. ಹೌದು, ಉದ್ಯೋಗ ಗಿಟ್ಟಿಸಿಕೊಂಡು ಬಾಡಿಗೆ ಮನೆ ಮಾಡಿ ನೆಮ್ಮದಿಯಿಂದ ಇರೋಣ ಅಂದ್ರೆ ಮನೆ ಮಾಲೀಕರ ಡಿಮ್ಯಾಂಡ್ ಹೆಚ್ಚಾಗಿದೆ. ನೀವೇನಾದ್ರೂ ಬೆಂಗಳೂರಿನಲ್ಲಿ ಮನೆ ಹುಡುಕುತ್ತಿದ್ರೆ ಮನೆ ಮಾಲೀಕರ ಡಿಮ್ಯಾಂಡ್ ನೋಡಿಯೇ ತಲೆ ಗ್ರಿರ್ ಎನ್ನುತ್ತೆ. ಇದೀಗ ಬೆಂಗಳೂರಿನ ಮನೆ ಮಾಲೀಕರು ಆಸೆ ಬುರುಕರು ಎನ್ನುವುದಕ್ಕೆ ಈ ಪೋಸ್ಟ್‌ಯೇ ಸಾಕ್ಷಿ. ಬೆಂಗಳೂರಿನಲ್ಲಿ ಬಾಡಿಗೆ ಮನೆ ನೋಡಲು ಹೋದ ಮಹಿಳೆಗೆ ಮನೆ ಮಾಲೀಕರು ನೈಸರ್ಗಿಕ ಬೆಳಕು ಮತ್ತು ಬಿಸಿಲು ಬರುತ್ತದೆ ಎನ್ನುವ ಕಾರಣ ನೀಡಿ 80,000 ರೂಪಾಯಿ ಬಾಡಿಗೆ ಎಂದು ಕೇಳಿದ್ದಾರೆ. ಮನೆ ಮಾಲೀಕರು ಹೇಳಿದ್ದನ್ನು ನೋಡಿ ಶಾಕ್ ಆದ ಮಹಿಳೆಯು ಪೋಸ್ಟ್ ಮಾಡಿ, ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅನು (Anu) ಹೆಸರಿನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಈ ಪೋಸ್ಟ್‌ನಲ್ಲಿ ಬೆಂಗಳೂರು ಬಾಡಿಗೆ ನನಗೆ ಅಚ್ಚರಿ ಮೂಡಿಸುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ. ಮೇಡಂ, ಮನೆಯೊಳಗೆ ಸೂರ್ಯನ ಬೆಳಕು ಬೀಳುತ್ತೆ ಹೀಗಾಗಿ ಅದರ ಬಾಡಿಗೆ 80,000 ರೂ ಅಂದರೆ ಏನರ್ಥ ಎಂದು ಪ್ರಶ್ನೆ ಮಾಡಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ
Bangalore Rent would never stop surprising me.
What do you mean “ma’am is room me sunlight bhi aati hai to iska rent ₹80,000 hai” 😭
— Anu (@Escapeplace__) February 13, 2026
ಇದನ್ನೂ ಓದಿ: ತಿಂಗಳ ಸಂಬಳ 3 ಲಕ್ಷ ರೂ, ಖರ್ಚು ಆಗೋದು 2 ಲಕ್ಷಕ್ಕೂ ಹೆಚ್ಚು; ತನ್ನ ಖರ್ಚು ವೆಚ್ಚಗಳನ್ನು ವಿವರಿಸಿದ ಇಂಜಿನಿಯರ್
ಫೆಬ್ರವರಿ 13 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಐದು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಪ್ರಮುಖ ನಗರಗಳಲ್ಲಿಯೂ ಇದೇ ಪರಿಸ್ಥಿತಿ. ಬಾಡಿಗೆ ಹೆಚ್ಚಿಸಲು ಅವರು ಹೊಸ ನವೀನ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಕೆಲವರು ಇಲ್ಲಿ ಬಾಲ್ಕನಿ ಇದೆ, ಬಾಡಿಗೆ 1 ಲಕ್ಷ ಅಂತ ಹೇಳ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಬಾಡಿಗೆಯಲ್ಲಿ ವಿಟಮಿನ್ ಡಿ ಕೂಡ ಸೇರಿದೆಯಂತೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ