Headlines

Viral: 3 ಬಿಹೆಚ್‌ಕೆ ಮನೆಗೆ 16,883 ರೂ ವಿದ್ಯುತ್ ಬಿಲ್, ಮನೆಮಾಲೀಕ ಫುಲ್ ಶಾಕ್ – Kannada News | Bengaluru: Electricity bill of Rs 16,883 for 3 BHK house in Bengaluru

ಬೆಂಗಳೂರು, ಫೆಬ್ರವರಿ 15: ಬೆಂಗಳೂರು (Bengaluru) ಅಂದ್ರೆ ಸಾಕು, ದುಡಿಮೆಗಿಂತ ಖರ್ಚೆ ಹೆಚ್ಚು. ಊರು ಬಿಟ್ಟು ಬಂದು ಕಷ್ಟ ಪಟ್ಟು ದುಡಿದು ಅಲ್ಪ ಸ್ವಲ್ಪ ಉಳಿತಾಯ ಮಾಡೋಣ ಅಂದ್ರೆ ಖರ್ಚು ಮಾತ್ರ ಹೆಚ್ಚಾಗುತ್ತೆ ಹೊರತು ಕಡಿಮೆಯಾಗಲ್ಲ ಅನ್ನೋದು ಎಷ್ಟೋ ಜನರ ಅಭಿಪ್ರಾಯ. ಆದರೆ ಬೆಂಗಳೂರಿನಲ್ಲಿ ವಾಸಿಸುವ ನಿವಾಸಿ ಎಷ್ಟೇ ದುಬಾರಿಯಾಗಿದ್ರು ಇಲ್ಲಿ ಜೀವನ ನಡೆಸಲೇಬೇಕು. ಆದರೆ ಬೆಂಗಳೂರಿಗನೊಬ್ಬ ವಿದ್ಯುತ್ ಬಿಲ್ ನೋಡಿಯೇ ಶಾಕ್ ಆಗಿದ್ದಾನೆ. 3 ಬಿಎಚ್‌ಕೆ ಮನೆಯಲ್ಲಿ ವಾಸಿಸುತ್ತಿರುವ ವ್ಯಕ್ತಿಯೊಬ್ಬನಿಗೆ 16,883 ರೂಪಾಯಿಗಳ ವಿದ್ಯುತ್ ಬಿಲ್ (Electricity Bill) ಮನೆ ಬಾಗಿಲಿಗೆ ಬಂದಿದೆ. ರೆಡ್ಡಿಟ್‌ನಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡು ನೆಟ್ಟಿಗರ ಸಲಹೆ ಕೇಳಿದ್ದಾನೆ.

ಸ್ಕ್ರೀನ್‌ಗ್ರಾಬ್ ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಬೆಂಗಳೂರಿಗನೊಬ್ಬ ವಿದ್ಯುತ್ ಬಿಲ್ ಡೀಟೇಲ್ಸ್ ಹಂಚಿಕೊಂಡಿದ್ದಾನೆ. ಈ ಪೋಸ್ಟ್‌ಗೆ ಬೆಂಗಳೂರಿನಲ್ಲಿ ಇಷ್ಟೊಂದು ವಿದ್ಯುತ್ ಬಿಲ್ ಬರುವುದು ಸಾಮಾನ್ಯವೇ? ಎಂದು ಪ್ರಶ್ನಿಸಿದ್ದಾನೆ. ನಾನು 3 ಬಿಎಚ್‌ಕೆ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದೇನೆ. ಮನೆಯಲ್ಲಿ ಒಟ್ಟು ನಾಲ್ಕು ಜನರಿದ್ದೇವೆ. ನಮ್ಮ ಮನೆಯಲ್ಲಿರುವುದು ಕೇವಲ ಒಂದೇ ಒಂದು ಎಸಿ. ದಿನಕ್ಕೆ ಗರಿಷ್ಠ 5 ರಿಂದ 7 ಗಂಟೆಗಳ ಕಾಲ ಬಳಸುತ್ತೇವೆ. ಒಂದು 650w ಗೇಮಿಂಗ್ ಪಿಸಿ, ಸಣ್ಣ ಅಡುಗೆ ಇಂಡಕ್ಷನ್ ಒಲೆ, ಒಂದು ಏರ್ ಫ್ರೈಯರ್ ಹಾಗೂ ಹಗಲಿನಲ್ಲಿ 4 ಫ್ಯಾನ್‌ಗಳು ತಿರುಗುತ್ತವೆ. ಇದು ನಮ್ಮ ದಿನನಿತ್ಯದ ವಿದ್ಯುತ್ ಬಳಕೆ. ಆದರೆ ತಿಂಗಳಿಗೆ ಹೆಚ್ಚೆಂದರೆ ಐದರಿಂದ ಒಂಬತ್ತು ಸಾವಿರ ರೂಪಾಯಿ ಬಿಲ್ ಬರುತ್ತಿತ್ತು. ದಿನನಿತ್ಯ ಬಳಸುವ ವಿದ್ಯುತ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ,  ಆದರೆ ನೋಡ ನೋಡುತ್ತಿದ್ದಂತೆ 16 ಸಾವಿರಕ್ಕೂ ಅಧಿಕ ಬಿಲ್ ಬಂದಿರುವುದು ಶಾಕ್ ಆಗಿದೆ. ಬಿಲ್ ಇಷ್ಟೊಂದು ಬರಲು ಸಾಧ್ಯವೇ ಇಲ್ಲ. ಈ ಬಗ್ಗೆ ಎಲ್ಲಿ ದೂರು ನೀಡಬೇಕು? ಎಂದು ಕೇಳಿದ್ದಾನೆ.

ವೈರಲ್ ಪೋಸ್ಟ್ ಇಲ್ಲಿದೆ

Reddit Post

ಇದನ್ನೂ ಓದಿ: ಕೋರಮಂಗಲದಲ್ಲಿ 70 ಸಾವಿರ ರೂ, ಬಾಡಿಗೆ ಕೇಳಲು ನಾಚಿಕೆ ಆಗುವುದಿಲ್ವಾ?: ಬರಿ ತೆರೆದ ಒಳಚರಂಡಿ, ರಸ್ತೆಯ ಗುಂಡಿ, ಸಿಡಿದೆದ್ದ ಮಹಿಳೆ

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರ, ನಾವು ಇರುವುದು ನಾಲ್ಕು ಜನ. ನಮಗೆ ತಿಂಗಳಿಗೆ 2,000ರೂ. ಬಿಲ್ ಬಂದರೆ ಅದುವೇ ಹೆಚ್ಚು . ಆದರೆ ನಿಮ್ಮ ಬಿಲ್ ನೋಡಿ ನಮಗೆ ಶಾಕ್ ಆಯ್ತು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಬೆಸ್ಕಾಂನಲ್ಲಿ ಈ ಬಗ್ಗೆ ವಿಚಾರಿಸಿ ನೋಡುವುದು ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ. ಇನ್ನೊಬ್ಬರು, ಇಷ್ಟೊಂದು ಬಿಲ್ ಬಂದ್ರೆ ದೇವರೇ ಗತಿ, ಬಿಲ್ ಕಟ್ಟೋದ ಅಥವಾ ಹೊಟ್ಟೆ ತುಂಬಿಸಿಕೊಳ್ಳೋದಾ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *