
ಬುಧನ ಆಧಿಪತ್ಯದ ಕನ್ಯಾ ರಾಶಿಗೆ 2026ರ ಏಪ್ರಿಲ್ ತಿಂಗಳಲ್ಲಿ ಶನಿ, ಕುಜ, ರವಿ, ಬುಧರ ದೃಷ್ಟಿಯೂ ನೇರವಾಗಿ ಇರುವುದರಿಂದ ಜೊತೆಗೆ ರಾಶಿಯ ಅಧಿಪತಿಯಾದ ಬುಧನು ನೀಚಸ್ಥಾನಕ್ಕೆ ಹೋಗಿ, ಅಲ್ಲಿಂದ ದೃಷ್ಟಿಯನ್ನು ಇಟ್ಟ ಕಾರಣ ನಾನಾರೀತಿಯ ತೊಂದರೆಗಳು ಆರಂಭದ ದಿನಗಳಲ್ಲಿ ಆಗಲಿದೆ. ಅನಂತರದಲ್ಲಿ ಒಂದೊಂದೇ ಭಾರಗಳು ಕಡಿಮೆಯಾಗಿ ನಿಶ್ಚಿಂತೆಯ ಬೆಳಕು ನಿಮ್ಮೊಂದಿಗೆ ಮುನ್ನಡೆಸಲಿದೆ.
ಉದ್ಯೋಗ ಮತ್ತು ವ್ಯವಹಾರ:
ಉದ್ಯೋಗದ ದೃಷ್ಟಿಯಿಂದ ಈ ತಿಂಗಳು ಶುಭ ಫಲಿತಾಂಶಗಳನ್ನು ನೀಡಲಿದೆ. ಶನಿಯು ಆರನೇ ಮನೆಯಲ್ಲಿರುವುದರಿಂದ ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ. ಶತ್ರುಗಳ ಮೇಲೆ ಜಯ ಸಾಧಿಸುವಿರಿ. ನಿಮ್ಮ ಶ್ರಮಕ್ಕೆ ತಕ್ಕ ಮನ್ನಣೆ ಸಿಗಲಿದೆ. ಹೂಡಿಕೆಯಲ್ಲಿ ಜಾಗರೂಕರಾಗಿರಿ. ತಿಂಗಳ ದ್ವಿತೀಯಾರ್ಧದಲ್ಲಿ ಹೊಸ ಒಪ್ಪಂದಗಳು ಕೈಗೂಡಬಹುದು.
ವಿದ್ಯಾಭ್ಯಾಸ:
ವಿದ್ಯಾರ್ಥಿಗಳಿಗೆ ಇದು ಮಧ್ಯಮ ಫಲದ ಕಾಲ. ಏಕಾಗ್ರತೆಯ ಕೊರತೆ ಕಾಡಬಹುದು. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಶನಿಯ ಅನುಗ್ರಹದಿಂದ ಉತ್ತಮ ಯಶಸ್ಸು ಸಿಗುವ ಸಾಧ್ಯತೆ ಇದೆ. ಉನ್ನತ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವವರು ಹೆಚ್ಚಿನ ಪರಿಶ್ರಮ ಹಾಕಬೇಕಾಗುತ್ತದೆ.
ಅರ್ಥಿಕತೆ:
ಆರ್ಥಿಕ ಸ್ಥಿತಿ ಏರಿಳಿತದಿಂದ ಕೂಡಿರುತ್ತದೆ. ಅನಗತ್ಯ ಖರ್ಚುಗಳ ಮೇಲೆ ನಿಯಂತ್ರಣವಿರಲಿ. ಆದಾಯದ ಮೂಲಗಳು ಉತ್ತಮವಾಗಿದ್ದರೂ, ಉಳಿತಾಯ ಮಾಡುವುದು ಸವಾಲಾಗಬಹುದು. ಹಳೆಯ ಸಾಲಗಳನ್ನು ತೀರಿಸಲು ಇದು ಸಕಾಲ. ಆದರೆ, ಈ ತಿಂಗಳು ಹೊಸದಾಗಿ ದೊಡ್ಡ ಮೊತ್ತದ ಸಾಲ ಮಾಡುವುದನ್ನು ತಪ್ಪಿಸುವುದು ಕ್ಷೇಮ.
ವಿವಾಹ ಮತ್ತು ಕೌಟುಂಬಿಕ ಜೀವನ:
ಕೌಟುಂಬಿಕವಾಗಿ ಕೆಲವು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡಬಹುದು. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರಲು ಸ್ವಲ್ಪ ವಿಳಂಬವಾಗಬಹುದು. ಸಂಗಾತಿಯೊಂದಿಗೆ ಮಾತನಾಡುವಾಗ ತಾಳ್ಮೆ ಇರಲಿ. ಮನೆಯ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ವಿದೇಶ ಪ್ರವಾಸ ಮತ್ತು ವಾಹನ ಖರೀದಿ:
ವಿದೇಶಕ್ಕೆ ಹೋಗುವ ಪ್ರಯತ್ನದಲ್ಲಿದ್ದವರಿಗೆ ಈ ತಿಂಗಳು ಸಾಧಾರಣ ಫಲ ನೀಡಲಿದೆ. ದಾಖಲಾತಿಗಳ ಕೆಲಸದಲ್ಲಿ ವಿಳಂಬವಾಗಬಹುದು. ಹೊಸ ವಾಹನ ಖರೀದಿಗೆ ತಿಂಗಳ ಮಧ್ಯಭಾಗದ ಅನಂತರದ ಸಮಯ ಶುಭವಾಗಿದೆ. ಚಾಲನೆಯಲ್ಲಿ ಜಾಗರೂಕತೆ ಅತ್ಯಗತ್ಯ.
ಭೂಮಿ ಖರೀದಿ ಮತ್ತು ಗೃಹ ನಿರ್ಮಾಣ:
ಆಸ್ತಿ ವಿಚಾರದಲ್ಲಿ ಈ ತಿಂಗಳು ಶುಭ ಸೂಚನೆಗಳಿವೆ. ಭೂಮಿ ಖರೀದಿ ಮಾಡುವ ಆಲೋಚನೆ ಇದ್ದರೆ ಕಾನೂನುಬದ್ಧವಾಗಿ ಎಲ್ಲವನ್ನೂ ಪರಿಶೀಲಿಸಿ ಮುಂದುವರಿಯಿರಿ. ಗೃಹನಿರ್ಮಾಣ ಕಾರ್ಯ ಪ್ರಾರಂಭಿಸಲು ಅಥವಾ ಅರ್ಧಕ್ಕೆ ನಿಂತ ಕೆಲಸಗಳನ್ನು ಮುಂದುವರಿಸಲು ಪೂರಕ ವಾತಾವರಣವಿದೆ.
ಶತ್ರುಕಾಟ ಮತ್ತು ನ್ಯಾಯಾಲಯದ ವಿಚಾರ:
ಏಳನೇ ಮನೆಯ ಶನಿಯು ನಿಮ್ಮ ಸಂಗಾತಿಯ ಬಗ್ಗೆ ನಿರ್ಲಕ್ಷ್ಯ ತೋರಿಸಿದ್ದು, ನಿಮ್ಮ ಮೇಲೆ ಶತ್ರುವಿನ ಭಾವ ಉಂಟಾಗಲು ಸಾಕು. ಗುಪ್ತ ಶತ್ರುಗಳ ಬಗ್ಗೆ ಭಯ ಬೇಡ, ನಿಮ್ಮ ವ್ಯಕ್ತಿತ್ವವೇ ಅವರಿಗೆ ಉತ್ತರವಾಗಲಿದೆ. ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ನಿಮಗೆ ಜಯ ಸಿಗುವ ಸಾಧ್ಯತೆ ಹೆಚ್ಚಿದೆ. ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಇದು ಉತ್ತಮ ಸಮಯ. ಬುಧವಾರದಂದು ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದರಿಂದ ಮಾನಸಿಕ ಶಾಂತಿ ಮತ್ತು ಕಾರ್ಯಸಿದ್ಧಿ ಲಭಿಸುತ್ತದೆ.
– ಲೋಹಿತ ಹೆಬ್ಬಾರ್
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ