
ಯುಪಿ ವಾರಿಯರ್ಸ್ ತಂಡ ನೀಡಿರುವ 144 ರನ್ಗಳ ಗುರಿ ಬೆನ್ನಟ್ಟಿದ ಆರ್ಸಿಬಿ ಭರ್ಜರಿ ಆರಂಭ ಕಂಡಿತು. ಆರಂಭಿಕರಾದ ಸ್ಮೃತಿ ಮಂಧಾನ ಹಾಗೂ ಸ್ಫೋಟಕ ಬ್ಯಾಟರ್ ಗ್ರೇಸ್ ಹ್ಯಾರಿಸ್ ಅಜೇಯ ಶತಕದ ಜೊತೆಯಾಟ ಕಟ್ಟಿದ್ದಾರೆ. ಅದರಲ್ಲೂ ಕೇವಲ 8 ಓವರ್ಗಳಲ್ಲಿ ತಂಡ ಶತಕದ ಗಡಿ ದಾಟಿತು. ಈ ವೇಳೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಗ್ರೇಸ್ ಹ್ಯಾರಿಸ್ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ಅದರಲ್ಲೂ ವೆಸ್ಟ್ ಇಂಡೀಸ್ನ ಸ್ಟಾರ್ ಆಲ್ರೌಂಡರ್ ಡಿಯಾಂಡ್ರಾ ಡಾಟಿನ್ ಬೌಲ್ ಮಾಡಿದ ಪವರ್ ಪ್ಲೇನ ಕೊನೆಯ ಓವರ್ನಲ್ಲಿ ಅಂದರೆ 6ನೇ ಓವರ್ನಲ್ಲಿ ಉಗ್ರರೂಪ ತಾಳಿದ ಹ್ಯಾರಿಸ್ ಬೌಂಡರಿ ಹಾಗೂ ಸಿಕ್ಸರ್ಗಳ ಮಳೆಗರೆದು ಬರೋಬ್ಬರಿ 32 ರನ್ ಕಲೆಹಾಕಿದರು. ಈ ಮೂಲಕ ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಒಂದೇ ಓವರ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಜಂಟಿ ದಾಖಲೆ ನಿರ್ಮಿಸಿದರು. ನಿನ್ನೆಯಷ್ಟೇ ಮಾಜಿ ಆರ್ಸಿಬಿ ಆಟಗಾರ್ತಿ ಸೋಫಿ ಡಿವೈನ್ ಒಂದೇ ಓವರ್ನಲ್ಲಿ 32 ರನ್ ಕಲೆಹಾಕಿ ಈ ದಾಖಲೆ ನಿರ್ಮಿಸಿದ್ದರು.