Headlines

‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ – Kannada News | Comedy Khiladigalu Manthana allegations on WTC Utsava organisers

ಇತ್ತೀಚೆಗೆ WTC ಉತ್ಸವ (WTC Utsava) ಎಂಬ ಹೆಸರಿನಲ್ಲಿ ಮಹಿಳೆಯರ ಕ್ರಿಕೆಟ್ ಟೂರ್ನಮೆಂಟ್ ನಡೆದಿತ್ತು. ಅದರಲ್ಲಿ ಹಲವು ನಟಿಯರು ಭಾಗಿಯಾಗಿದ್ದರು. ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಂಥನಾ ಕೂಡ ಆಟ ಆಡಿದ್ದರು. ಆ ಟೂರ್ನಿ ಮುಗಿಸಿ ಮನೆಗೆ ತೆರಳುವಾಗ ಮಂಥನಾ ಅವರ ಕಾರಿಗೆ ಅಪಘಾತ (Accident) ಆಯಿತು. ‘WTC ಉತ್ಸವ’ ಆಯೋಜಕರು ಆ ಸಂದರ್ಭದಲ್ಲಿ ಕಾಳಜಿ ತೋರಿಸಿಲ್ಲ ಎಂದು ಮಂಥನಾ (Manthana) ಆರೋಪಿಸಿದ್ದಾರೆ. ‘ಅಪಘಾತ ಆದ ಬಳಿಕ ನಾವು ಪೊಲೀಸ್ ಠಾಣೆಗೆ ಹೋಗಿದ್ದೆವು. ಆ ಸಮಯದಲ್ಲಿ ಆಯೋಜಕರು ಯಾರೂ ಕೂಡ ನಮ್ಮ ಬಗ್ಗೆ ಕಾಳಜಿ ವಹಿಸಿಲ್ಲ. ಹಣದ ಸಲುವಾಗಿ ನಾನು ಧ್ವನಿ ಎತ್ತಿಲ್ಲ. ಅವರು ಮಾನವೀಯತೆಯ ದೃಷ್ಟಿಯಿಂದಲೂ ಒಂದು ಮಾತು ವಿಚಾರಿಸಿಲ್ಲ. ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ. ಸುರಕ್ಷತೆ ಇಲ್ಲ ಎಂದರೆ ಇವರು ಈ ರೀತಿ ಟೂರ್ನಮೆಂಟ್ ಮಾಡಬಾರದು’ ಎಂದು ಮಂಥನಾ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *