W,W,W,W,W: 254 ವರ್ಷಗಳ ಕ್ರಿಕೆಟ್​ ಇತಿಹಾಸದಲ್ಲೇ ಹೊಸ ವಿಶ್ವ ದಾಖಲೆ

W,W,W,W,W: 254 ವರ್ಷಗಳ ಕ್ರಿಕೆಟ್​ ಇತಿಹಾಸದಲ್ಲೇ ಹೊಸ ವಿಶ್ವ ದಾಖಲೆ

254 ವರ್ಷಗಳ ಕ್ರಿಕೆಟ್​ ಇತಿಹಾಸ ಹೊಂದಿರುವ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದೆ. ಅದು ಕೂಡ 5 ಎಸೆತಗಳಲ್ಲಿ ಎಂಬುದು ವಿಶೇಷ. ಅಂದರೆ ಇದೇ ಮೊದಲ ಬಾರಿಗೆ ಫಸ್ಟ್​ ಕ್ಲಾಸ್​ ಕ್ರಿಕೆಟ್​ನಲ್ಲಿ ಬೌಲರ್​ರೊಬ್ಬರು 5 ಎಸೆತಗಳಲ್ಲಿ ಸತತ 5 ವಿಕೆಟ್ ಕಬಳಿಸಿದ್ದಾರೆ. ಈ ಸಾಧನೆ ಮಾಡಿದ ಬೌಲರ್ ಹೆಸರು ಬ್ರೆಟ್ ರಾಂಡೆಲ್.

ನ್ಯೂಝಿಲೆಂಡ್​ನ ಪ್ಲಂಕೆಟ್ ಶೀಲ್ಡ್  ಪ್ರಥಮ ದರ್ಜೆ ಕ್ರಿಕೆಟ್ ಟೂರ್ನಿಯಲ್ಲಿ ನಡೆದ ಪಂದ್ಯದಲ್ಲಿ ಸೆಂಟ್ರಲ್ ಡಿಸ್ಟ್ರಿಕ್ಟ್ಸ್ ಹಾಗೂ ನಾರ್ದನ್ ಡಿಸ್ಟ್ರಿಕ್ಟ್ಸ್ ತಂಡಗಳು ಮುಖಾಮುಖಿಯಾಗಿದ್ದವು.

ಈ ಮ್ಯಾಚ್​ನಲ್ಲಿ ಸೆಂಟ್ರಲ್ ಡಿಸ್ಟ್ರಿಕ್ಟ್ಸ್ ಪರ ಕಣಕ್ಕಿಳಿದ ಬ್ರೆಟ್ ರಾಂಡೆಲ್  ಕೇವಲ 5 ಎಸೆತಗಳಲ್ಲಿ 5 ವಿಕೆಟ್ ಪಡೆಯುವ ಮೂಲಕ ಕ್ರಿಕೆಟ್ ಜಗತ್ತನ್ನು ಬೆರಗುಗೊಳಿಸಿದ್ದಾರೆ.

ರಾಂಡೆಲ್ ಅವರು ತಮ್ಮ ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ಒಂದು ವಿಕೆಟ್ ಪಡೆದಿದ್ದರು. ಆ ನಂತರ ತಮ್ಮ ಮುಂದಿನ ಓವರ್‌ನ ಮೊದಲ ನಾಲ್ಕು ಎಸೆತಗಳಲ್ಲಿ ಸತತವಾಗಿ 4 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಐದು ಎಸೆತಗಳಲ್ಲಿ ಐದು ವಿಕೆಟ್ ಕಬಳಿಸಿದ ವಿಶ್ವದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಕೇವಲ 25 ರನ್ ನೀಡಿದ ಬ್ರೆಟ್ ರಾಂಡೆಲ್ 7 ವಿಕೆಟ್ ಕಬಳಿಸಿ ಮಿಂಚಿದರು. ಪರಿಣಾಮ ನಾರ್ದನ್ ಡಿಸ್ಟ್ರಿಕ್ಟ್ಸ್ ತಂಡವು ಮೊದಲ ಇನಿಂಗ್ಸ್​ನಲ್ಲಿ ಕೇವಲ 82 ರನ್​ಗಳಿಗೆ ಆಲೌಟ್ ಆಗಿದೆ.

 

Source link

Leave a Reply

Your email address will not be published. Required fields are marked *