Headlines

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಅಜಿಂಕ್ಯ ರಹಾನೆ – Kannada News | Ajinkya Rahane announces retirement from international Cricket

ಭಾರತೀಯ ಕ್ರಿಕೆಟ್‌ನ ಅತ್ಯಂತ ಶಾಂತ, ಸಂಯಮ ಹಾಗೂ ನಂಬಿಕಸ್ಥ ಬ್ಯಾಟರ್‌ಗಳಲ್ಲಿ ಒಬ್ಬರಾದ ಅಜಿಂಕ್ಯ ರಹಾನೆ ಅವರು ಇಂದು (ಜುಲೈ 30, 2026) ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್‌ ಬದುಕಿಗೆ ಅಧಿಕೃತವಾಗಿ ವಿದಾಯ ಘೋಷಿಸಿದ್ದಾರೆ. ಈ ಮೂಲಕ ಭಾರತೀಯ ಕ್ರಿಕೆಟ್‌ನ ಒಂದು ಸುವರ್ಣ ಅಧ್ಯಾಯ ಅಂತ್ಯಗೊಂಡಂತಾಗಿದೆ.

ಈ ಬಗ್ಗೆ ಸೋಷಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿರುವ ರಹಾನೆ,  ಸಾಮಾನ್ಯ ಹಿನ್ನೆಲೆಯಿಂದ ಬಂದು ಜಗತ್ತಿನ ಬೃಹತ್ ವೇದಿಕೆಗಳಲ್ಲಿ ನನ್ನ ದೇಶವನ್ನು ಪ್ರತಿನಿಧಿಸುವ ಹಂತಕ್ಕೆ ಬೆಳೆದಿದ್ದು ನನ್ನ ಪಾಲಿಗೆ ಸಿಕ್ಕ ಅತ್ಯಂತ ದೊಡ್ಡ ಸೌಭಾಗ್ಯ. ನನ್ನನ್ನು ಇಂದು ಈ ಮಟ್ಟದ ವ್ಯಕ್ತಿಯನ್ನಾಗಿ ರೂಪಿಸಲು ಮೌಲ್ಯಯುತ ಕೊಡುಗೆ ನೀಡಿದ ನನ್ನ ಎಲ್ಲಾ ತರಬೇತುದಾರರು, ಮಾರ್ಗದರ್ಶಕರು, ಸಹ ಆಟಗಾರರು ಮತ್ತು ಪೋಷಕ ಸಿಬ್ಬಂದಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.

ರಹಾನೆ ವೃತ್ತಿಜೀವನ:

ಭಾರತ ತಂಡದ ಮಧ್ಯಮ ಕ್ರಮಾಂಕದ ಆಧಾರಸ್ತಂಭವಾಗಿದ್ದ ರಹಾನೆ, ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ದೇಶಕ್ಕಾಗಿ ಅದ್ಭುತ ಕೊಡುಗೆ ನೀಡಿದ್ದಾರೆ. ಅವರ ಅಂತರರಾಷ್ಟ್ರೀಯ ವೃತ್ತಿಜೀವನದ ಅಂಕಿ-ಅಂಶಗಳು ಹೀಗಿವೆ:

ಮಾದರಿ ಪಂದ್ಯಗಳು ರನ್  ಸರಾಸರಿ ಶತಕ / ಅರ್ಧಶತಕ ಗರಿಷ್ಠ ಸ್ಕೋರ್
ಟೆಸ್ಟ್ 85 5,077  38.46 12 / 26 188
ಏಕದಿನ 90 2,962  35.26 3 / 24 111
ಟಿ20  20 375  20.83 0 / 1 61

ಐತಿಹಾಸಿಕ ಸಾಧನೆಗಳು:

  • ಮೆಲ್ಬೋರ್ನ್ ವೀರಾವೇಶ: 2020-21ರ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ, ಅಡಿಲೇಡ್ ಟೆಸ್ಟ್‌ನ ಹೀನಾಯ ಸೋಲಿನ ಬಳಿಕ ತಂಡ ಮುನ್ನಡೆಸಿದ ರಹಾನೆ, ಮೆಲ್ಬೋರ್ನ್‌ನಲ್ಲಿ ಶತಕ ಸಿಡಿಸಿ ಭಾರತ ಐತಿಹಾಸಿಕ ಗೆಲುವು ದಾಖಲಿಸಲು ಕಾರಣರಾದರು.
  • ಸೋಲದ ಸರದಾರ: ರಹಾನೆ ನಾಯಕತ್ವ ವಹಿಸಿದ ಯಾವುದೇ ಟೆಸ್ಟ್ ಪಂದ್ಯದಲ್ಲೂ ಭಾರತ ಸೋಲನ್ನೇ ಕಂಡಿಲ್ಲ. ಗಾಯಾಳುಗಳಿಂದ ಜರ್ಜರಿತವಾಗಿದ್ದ ಯುವ ಭಾರತ ತಂಡವನ್ನು ಮುನ್ನಡೆಸಿ ಆಸ್ಟ್ರೇಲಿಯಾ ನೆಲದಲ್ಲೇ ಸರಣಿ ಗೆದ್ದದ್ದು ಅವರ ಶ್ರೇಷ್ಠ ನಾಯಕತ್ವಕ್ಕೆ ಹಿಡಿದ ಕನ್ನಡಿ.
  • ವಿದೇಶಿ ನೆಲದ ಆಪತ್ಬಾಂಧವ: ಇಂಗ್ಲೆಂಡ್, ಸೌತ್ ಆಫ್ರಿಕಾ ಮತ್ತು ಆಸ್ಟ್ರೇಲಿಯಾದ ಕಠಿಣ ಪಿಚ್‌ಗಳಲ್ಲಿ ಅಜಿಂಕ್ಯ ರಹಾನೆ ಬಾರಿಸಿದ ರನ್‌ಗಳಿಂದ ಅದೆಷ್ಟೋ ಬಾರಿ ಭಾರತ ತಂಡ ಗೆಲುವು ಸಾಧಿಸಿದೆ.

ಇದನ್ನೂ ಓದಿ: ಅರ್ಜೆಂಟೀನಾ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾದ ಫಿಫಾ!

2023ರ ಜುಲೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೊನೆಯ ಬಾರಿಗೆ ಟೀಮ್ ಇಂಡಿಯಾ ಪರ ಕಣಕ್ಕಿಳಿದಿದ್ದ 38 ವರ್ಷದ ಅಜಿಂಕ್ಯ ರಹಾನೆ, ಇದೀಗ ಅಂತರರಾಷ್ಟ್ರೀಯ ವೇದಿಕೆಯಿಂದ ಅಧಿಕೃತವಾಗಿ ನಿರ್ಗಮಿಸಿದ್ದಾರೆ. ಈ ಮೂಲಕ 15 ವರ್ಷಗಳ ತಮ್ಮ ಇಂಟರ್​ನ್ಯಾಷನಲ್ ಕ್ರಿಕೆಟ್ ಕೆರಿಯರ್ ಅನ್ನು ಅಂತ್ಯಗೊಳಿಸಿದ್ದಾರೆ.

Source link

Leave a Reply

Your email address will not be published. Required fields are marked *