Headlines

ಅಕ್ಕನ ಮಗಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಆರೋಪಿ ಎನ್​ಕೌಂಟರ್​ನಲ್ಲಿ ಸಾವು – Kannada News | Ghaziabad Encounter: Man Accused in Child’s Murder Case Shot Dead

ಗಾಜಿಯಾಬಾದ್, ಏಪ್ರಿಲ್ 20: ಅಕ್ಕನ ಮಗಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಎನ್​ಕೌಂಟರ್​ನಲ್ಲಿ ಹತ್ಯೆ(Murder) ಮಾಡಿರುವ ಘಟನೆ ಗಾಜಿಯಾಬಾದ್​ನಲ್ಲಿ ನಡೆದಿದೆ. ಜಸೀಮ್ ಅಲಿಯಾಸ್ ಛೋಟು ಎಂಬ ಆರೋಪಿಗಾಗಿ ವಾರಗಟ್ಟಲೆ ಹುಡುಕಾಟ ನಡೆಸಿದ ನಂತರ ನಗರದ ಬಂತ್ಲಾ ಕಾಲುವೆ ಕಟ್ ಬಳಿ ಈ ಎನ್‌ಕೌಂಟರ್ ನಡೆದಿದೆ. ಮೃತ ಬಾಲಕಿಗೆ ಕೇವಲ ನಾಲ್ಕು ವರ್ಷ ವಯಸ್ಸು. ಏಪ್ರಿಲ್ 11 ರಂದು ಬಾಲಕಿ ತನ್ನ ಮನೆಯಿಂದ ನಾಪತ್ತೆಯಾಗಿದ್ದಳು. ದಿನಗೂಲಿ ಕಾರ್ಮಿಕರಾಗಿದ್ದ ಬಾಲಕಿಯ ಪೋಷಕರು ಕೆಲಸಕ್ಕೆ ಹೋಗಿದ್ದಾಗ, ಆರೋಪಿ, ಸಂತ್ರಸ್ತೆಯ ಮಾವ, ಏನೋ ತಿಂಡಿಕೊಡುತ್ತೇನೆ ಬಾ ಎಂದು ಕರೆದೊಯ್ದಿದ್ದ.

ನಂತರ ಒಂದು ತಿಂಗಳ ಹಿಂದಷ್ಟೆ ತಾನು ಸ್ಥಳಾಂತರಗೊಂಡಿದ್ದ ಬಾಡಿಗೆ ಕೋಣೆಗೆ ಕರೆದೊಯ್ದು, ಆಕೆಯ ಮೇಲೆ ಅತ್ಯಾಚಾರ ಎಸಗಿ ಕತ್ತು ಹಿಸುಕಿ ಕೊಲೆ ಮಾಡಿದ್ದ. ನಂತರ ಆ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರಿನ ಬಳಿ ಬಾಲಕಿಯ ಶವ ಪತ್ತೆಯಾಗಿದೆ. ಈ ಘಟನೆಯಿಂದಾಗಿ ಪೊಲೀಸರು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 103(1), 65(2) ಮತ್ತು 238 ರ ಅಡಿಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿಕೊಂಡು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದರು.

ಮತ್ತಷ್ಟು ಓದಿ: ಹಣ, ಚಿನ್ನಾಭರಣಕ್ಕಾಗಿ ಚಿಕ್ಕಮ್ಮನ ಕೊಲೆ ಮಾಡಿ ಶವ ಸುಟ್ಟಿದ್ದ ಲೇಡಿ: ವರ್ಷದ ಬಳಿಕ ಹತ್ಯೆ ರಿವೀಲ್​

ಜಸೀಮ್ ಬಗ್ಗೆ ಮಾಹಿತಿ ನೀಡಿದವರಿಗೆ ಪೊಲೀಸರು 50,000 ರೂ. ನಗದು ಬಹುಮಾನವನ್ನೂ ಘೋಷಿಸಿದ್ದರು. ಏಪ್ರಿಲ್ ಗಾಜಿಯಾಬಾದ್‌ನ ತಿಲಾ ಮಾಡ್ ಪ್ರದೇಶದಲ್ಲಿ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು. ಪೊಲೀಸರು ತಕ್ಷಣವೇ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಬಾಲಕಿಯ ಮಾವ ಜಸೀಮ್ ಅಲಿಯಾಸ್ ಛೋಟು ಈ ಅಪರಾಧ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಆತನನ್ನು ತಕ್ಷಣವೇ ವಾಂಟೆಡ್ ಎಂದು ಘೋಷಿಸಲಾಯಿತು ಎಂದು ಉಪ ಪೊಲೀಸ್ ಆಯುಕ್ತ (ಡಿಸಿಪಿ) ಧವಲ್ ಜೈಸ್ವಾಲ್ ಅವರನ್ನು ಸುದ್ದಿ ಸಂಸ್ಥೆ ಎಎನ್‌ಐ ಉಲ್ಲೇಖಿಸಿದೆ.

ಭಾನುವಾರ ರಾತ್ರಿ ಬಂತ್ಲಾ ಕಾಲುವೆ ಬಳಿ ಜಸೀಮ್ ಕಾಣಿಸಿಕೊಂಡಿದ್ದಾಗಿ ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ. ಒಂದು ತಂಡ ತಡೆಯಲು ಪ್ರಯತ್ನಿಸಿದಾಗ ಆತ ಪೊಲೀಸರ ಮೇಲೆ ಗುಂಡು ಹಾರಿಸಿದ್ದ. ಗುಂಡಿನ ದಾಳಿಯಲ್ಲಿ, ಜಸೀಮ್‌ಗೆ ಗುಂಡು ತಗುಲಿದ್ದು, ನಂತರ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಆತ ಮೃತಪಟ್ಟಿರುವುದಾಗಿ ತಿಳಿಸಿದ್ದರು.

ಆದಾಗ್ಯೂ, ಅವನ ಇಬ್ಬರು ಸಹಚರರು ಪರಾರಿಯಾಗಿದ್ದಾರೆ ಎಂದು ಪೊಲೀಸರು ಗಮನಿಸಿದರು. ನಮ್ಮ ತಂಡದ ಇಬ್ಬರು ಕಾನ್‌ಸ್ಟೆಬಲ್‌ಗಳು ಸಹ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಪ್ರಥಮ ಚಿಕಿತ್ಸೆಗೆ ಕಳುಹಿಸಲಾಗಿದೆ. ಆತನಿಂದ ಕೆಲವು ಅಕ್ರಮ ಪಿಸ್ತೂಲ್‌ಗಳು ಮತ್ತು ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆತನಿಗೆ ಹಿಂದಿನ ಅಪರಾಧ ಇತಿಹಾಸವೂ ಇದೆ. ಆತ ಮೂಲತಃ ಮುಜಫರ್‌ನಗರ ಪ್ರದೇಶದ ನಿವಾಸಿ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *