Headlines

ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಪತನವಾಗಿದ್ದು ಹೇಗೆ? ತನಿಖೆಯಲ್ಲಿ ಬಯಲಾದ ಸಂಗತಿಗಳಿವು – Kannada News | Ajit Pawar Death Preliminary probe into plane crash flags low visibility at Baramati Airport

ಮುಂಬೈ, ಫೆಬ್ರವರಿ 28: ಜನವರಿ 28ರಂದು ಮಹಾರಾಷ್ಟ್ರದ ಬಾರಾಮತಿ ಬಳಿ ನಡೆದ ವಿಮಾನ ಅಪಘಾತದಲ್ಲಿ ಮಾಜಿ ಡಿಸಿಎಂ ಅಜಿತ್ ಪವಾರ್ (Ajit Pawar) ಸಾವನ್ನಪ್ಪಿದ್ದರು. ಈ ಅಪಘಾತ ನಡೆದ ಒಂದು ತಿಂಗಳ ನಂತರ, ಅಪಘಾತದ ಪ್ರಾಥಮಿಕ ತನಿಖಾ ವರದಿ ಹೊರಬಿದ್ದಿದೆ. ಅಜಿತ್ ಪವಾರ್ ಅವರ ವಿಮಾನ ಏಕೆ ಅಪಘಾತಕ್ಕೀಡಾಯಿತು ಎಂಬುದರ ಕುರಿತು ಇದು ಮಾಹಿತಿಯನ್ನು ನೀಡಿದೆ. 22 ಪುಟಗಳ ಈ ವರದಿಯು ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ. ಈ ವಿಮಾನವು ನೆಲಕ್ಕೆ ಅಪ್ಪಳಿಸುವ ಮೊದಲು ಮರಕ್ಕೆ ಡಿಕ್ಕಿ ಹೊಡೆದು ನಂತರ ನೆಲಕ್ಕೆ ಅಪ್ಪಳಿಸಿದೆ ಎಂದು ವರದಿ ಹೇಳಿದೆ.

ಅಜಿತ್ ಪವಾರ್ ಅವರ ವಿಮಾನದ ಅಪಘಾತದ ತನಿಖೆಯನ್ನು ವಾಯು ಅಪಘಾತ ತನಿಖಾ ಬ್ಯೂರೋ (AAIB) ನಡೆಸುತ್ತಿದೆ. ಈ ಸಂಸ್ಥೆ ತನ್ನ ಪ್ರಾಥಮಿಕ ವರದಿಯನ್ನು ಬಿಡುಗಡೆ ಮಾಡಿದೆ. ಅಪಘಾತವು ಒಂದೇ ಕಾರಣದಿಂದ ಆಗಿಲ್ಲ. ಹವಾಮಾನ, ಮೂಲಸೌಕರ್ಯ, ಕಾರ್ಯಾಚರಣೆಯ ನಿರ್ಧಾರಗಳೆಲ್ಲವೂ ಸೇರೊ ಆಗಿರುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ. CVR/FDR ನ ವಿವರವಾದ ವಿಶ್ಲೇಷಣೆಯ ನಂತರ ಅಪಘಾತದ ಅಂತಿಮ ಕಾರಣಗಳು ಸ್ಪಷ್ಟವಾಗುತ್ತವೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ಅಜಿತ್ ಪವಾರ್ ಇದ್ದ ವಿಮಾನ ಅಪಘಾತ: ಕೊನೇ ಸಮಯದಲ್ಲಿ ಪೈಲಟ್ ಬದಲಾವಣೆ ಮಾಡಲಾಗಿತ್ತೇ?

ಬಾರಾಮತಿಯಲ್ಲಿ ಪ್ರತ್ಯೇಕ MET (ಹವಾಮಾನ) ಸೌಲಭ್ಯವಿಲ್ಲ. ವಿಮಾನ ನಿಲ್ದಾಣದ ಗೋಪುರವು ಗೋಚರತೆಯನ್ನು 3000 ಮೀಟರ್ ಎಂದು ಹೇಳಿತ್ತು. ಆದರೆ VFR ಕಾರ್ಯಾಚರಣೆಗಳಿಗೆ ಕನಿಷ್ಠ 5000 ಮೀಟರ್ ಅಗತ್ಯವಿದೆ. ಆದರೆ, ವಿಮಾನ ಅಪಘಾತದ ಸಮಯದಲ್ಲಿ ಗೋಚರತೆ ಕೇವಲ 2000 ಮೀಟರ್ ಆಗಿತ್ತು. ಆದ್ದರಿಂದ, ಹವಾಮಾನ ಮತ್ತು ಗೋಚರತೆಯು ಈ ವಿಮಾನ ಅಪಘಾತಕ್ಕೆ ಹೆಚ್ಚಿನ ಕಾರಣವಾಗಿರಬಹುದು ಎಂದು ವರದಿ ಬಹಿರಂಗಪಡಿಸಿದೆ.

ಇದನ್ನೂ ಓದಿ: ಎನ್​ಸಿಪಿ ಮತ್ತೆ ವಿಲೀನವಾಗುತ್ತಾ? ಅಜಿತ್ ಪವಾರ್ ಕೊನೆಯ ಆಸೆಯ ಬಗ್ಗೆ ಶುರುವಾಯ್ತು ಚರ್ಚೆ

VFR ಮಿತಿಗಿಂತ ಕಡಿಮೆ ಗೋಚರತೆಯಲ್ಲಿ ಇಳಿಯಲು ಪ್ರಯತ್ನಿಸುವುದು ಒಂದು ಪ್ರಮುಖ ಅಪಾಯಕಾರಿ ಅಂಶವಾಗಿದೆ. ಅಲ್ಲದೆ, ಅಜಿತ್ ಪವಾರ್ ಅವರ ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ತಾಂತ್ರಿಕ ವೈಫಲ್ಯದ ಯಾವುದೇ ನೇರ ಪುರಾವೆಗಳು ಇಲ್ಲಿಯವರೆಗೆ ಬೆಳಕಿಗೆ ಬಂದಿಲ್ಲ. ಆದ್ದರಿಂದ ಈಗ CVR/FDR ವಿಶ್ಲೇಷಣೆ ನಿರ್ಣಾಯಕವಾಗಿರುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *