Headlines

‘ಅಣ್ಣ ಫ್ರಮ್ ಮೆಕ್ಸಿಕೋ’ ಸಿನಿಮಾ ಟೀಸರ್ ನೋಡಿ ಮೆಚ್ಚಿಕೊಂಡ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ – Kannada News | Lakshmi Hebbalkar talks about Daali Dhananjay starrer Anna from Mexico movie teaser

ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಕುಟುಂಬ ಈ ಚಿತ್ರರಂಗಕ್ಕೂ ಕಾಲಿಟ್ಟಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಬಿ. ಹಟ್ಟಿಹೊಳಿ ಅವರು ‘ಐರಾ ಫಿಲ್ಮ್ಸ್’ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಈ ಸಂಸ್ಥೆಯ ಮೂಲಕ ‘ಅಣ್ಣ ಫ್ರಮ್ ಮೆಕ್ಸಿಕೋ’ (Anna From Mexico) ಸಿನಿಮಾ ನಿರ್ಮಾಣ ಆಗಿದೆ. ‘ದಿ ರಾಯಲ ಸ್ಟುಡಿಯೋಸ್’ ಕೈ ಜೋಡಿಸಿದೆ. ಈಗ ಈ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ನಟ ಡಾಲಿ ಧನಂಜಯ್ (Daali Dhananjay) ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ಭಾಗವಹಿಸಿ ಮಾತನಾಡಿದರು.

‘ಟೀಸರ್ ಚೆನ್ನಾಗಿದೆ, ಹೊಸತನದಿಂದ ಕೂಡಿದೆ. ಧನಂಜಯ್ ಅವರ ನಟನೆ ಸೂಪರ್. ಧನಂಜಯ್ ಧರಿಸಿದ ಕರ್ನಾಟಕ ಭೂಪಟದ ಲಾಕೆಟ್ ಬಹಳಷ್ಟು ಇಷ್ಟವಾಯ್ತು. ನಾವು ಚಿತ್ರರಂಗಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ಸಿನಿಮಾ ನಿರ್ಮಾಣಕ್ಕೆ ಬಂದಿದ್ದೇವೆ. ಕನ್ನಡ ಚಲನಚಿತ್ರಗಳನ್ನು ನೋಡಿಕೊಂಡು ಬೆಳೆದಿದ್ದೇವೆ. ಕನ್ನಡ ಚಿತ್ರರಂಗ ಸಾಕಷ್ಟು ಶ್ರೀಮಂತವಾಗಿದೆ. ಇದು ನಮ್ಮ ಪರಂಪರೆ. ಈ ಕ್ಷೇತ್ರಕ್ಕೆ ನಾನು ಹೊಸಬಳು’ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದರು.

ಸಿನಿಮಾ ಶುರುವಾದ ಬಗೆಯ ಬಗ್ಗೆ ಡಾಲಿ ಧನಂಜಯ್ ಮಾತನಾಡಿದರು. ‘ಹೊಯ್ಸಳ ಸಿನಿಮಾ ಶೂಟಿಂಗ್ ಬೆಳಗಾವಿಯಲ್ಲಿ ನಡೆಯುವಾಗ ಲಕ್ಷ್ಮಿ ಮೇಡಂ ಮನೆಗೆ ಹೋಗಿ ಊಟ ಮಾಡ್ಕೊಂಡು ಬರುವಾಗ ನಮ್ಮ ತಮ್ಮನಿಗೆ ಸಿನಿಮಾ ಮಾಡುವ ಆಸಕ್ತಿ ಇದೆ ಎಂದಿದ್ದರು. ಆ ಬಳಿಕ ಈ ಜರ್ನಿ ಶುರುವಾಯ್ತು. ಚನ್ನರಾಜು ಅವರು ಪ್ರೊಡಕ್ಷನ್ ‌ಮಾಡಿದ್ದಾರೆ ಎಂಬುವುದು ಗೊತ್ತಾಯ್ತು. ಸಖತ್ ಸ್ಟೈಲಿಶ್ ಆಗಿ, ಆ್ಯಕ್ಷನ್ ರೀತಿ ನನ್ನನ್ನು ತೋರಿಸಬೇಕು ಅಂತ ಅವರು ಎಂದುಕೊಂಡಿದ್ದರು. ಆದರೆ ಫ್ಯಾಮಿಲಿ ನೋಡುವಂತಹ ಸಿನಿಮಾ ಕೂಡ ಆಗಬೇಕು. ಹಾಗಾಗಿ ನಿರ್ದೇಶಕ ಶಂಕರ್ ಬಂದರು. ಒಳ್ಳೆಯ ಟೀಮ್ ಸಿದ್ಧವಾಯಿತು’ ಎಂದು ಡಾಲಿ ಹೇಳಿದರು.

‘ಅಣ್ಣ ಫ್ರಮ್ ಮೆಕ್ಸಿಕೋ’ ಸಿನಿಮಾ ಟೀಸರ್:

‘ಅಣ್ಣ ಫ್ರಮ್ ಮೆಕ್ಸಿಕೋ’ ಸಿನಿಮಾದಲ್ಲಿ ರೀಷ್ಮಾ ನಾಣಯ್ಯ ಅವರು ನಾಯಕಿ ಆಗಿದ್ದಾರೆ. ರಂಗಾಯಣ ರಘು, ನಾಗಭೂಷಣ, ಪೂರ್ಣಚಂದ್ರ ಮೈಸೂರು, ಉಮಾಶ್ರೀ, ಸಾಧು ಕೋಕಿಲ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ವಾಸುಕಿ ವೈಭವ್‌ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಅಜಯ್ ಅವರು ಸಂಕಲನ ಮಾಡಿದ್ದಾರೆ. ಗುಣ ಅವರ ಕಲಾ ನಿರ್ದೇಶನ ಈ ಸಿನಿಮಾಗಿದೆ.

ಇದನ್ನೂ ಓದಿ: ನಾನ್-ವೆಜ್ ತಿಂದಿದ್ದಕ್ಕೆ ಡಾಲಿ ಧನಂಜಯ ಟ್ರೋಲ್: ಮನೆಯವರ ಪ್ರತಿಕ್ರಿಯೆ ಏನು?

ವಾಸುಕಿ ವೈಭವ್, ನಿರ್ದೇಶಕ ಶಂಕರ್‌ ಗುರು, ಚನ್ನರಾಜ್ ಹಟ್ಟಿಹೊಳಿ, ನಯನಾ ಮೋಟಮ್ಮ, ಸಹ-ನಿರ್ಮಾಪಕರಾದ ಸತ್ಯ ರಾಯಲ, ಜೀ ಸ್ಟುಡಿಯೋಸ್​ನ ದಿವ್ಯಾ, ಆನಂದ್ ಆಡಿಯೋದ ಶ್ಯಾಮ್ ಮುಂತಾದವರು ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಹಾಜರಿದ್ದರು. ಅಭಿಮಾನಿಗಳಿಂದ ‘ಅಣ್ಣ ಫ್ರಮ್ ಮೆಕ್ಸಿಕೋ’ ಟೀಸರ್​ಗೆ ಮೆಚ್ಚುಗೆ ವ್ಯಕ್ತವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *