ಹಾಸನ, ಜುಲೈ 30: ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಮಾವಿನಕೆರೆ ಬೆಟ್ಟದ ರಂಗನಾಥಸ್ವಾಮಿ ದೇಗುಲದ ತಪ್ಪಲಿನಲ್ಲಿ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ಪತ್ನಿ ಚೆನ್ನಮ್ಮರ 11ನೇ ದಿನದ ಉತ್ತರ ಕ್ರಿಯಾದಿ ಕಾರ್ಯ ಮಾಡಲಾಯಿತು. ಎಡೆಯನ್ನ ಹೊಲದಲ್ಲಿ ಇಟ್ಟು ಪೂಜೆ ಸಲ್ಲಿಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಭವಾನಿ ರೇವಣ್ಣ, ‘ಅಮ್ಮ ಹಾಸನಕ್ಕೆ ಬಂದಾಗ ನನ್ನ ಜೊತೆಯೇ ಇರುತ್ತಿದ್ದರು. ದೇವರ ಮನೆಗೆ ಹೋದರೆ ಎರಡು ಮೂರು ಗಂಟೆಯಾದರೂ ಪೂಜೆ ಮುಗುಯುತ್ತಿರಲಿಲ್ಲ. ನಾವು ಅಮ್ಮ ಯಾವ ದೇವರ ಜೊತೆ ಮಾತಾಡಿದ್ರಿ ಎಂದರೆ ನಕ್ಕು ಸುಮ್ಮನಾಗುತ್ತಿದ್ದರು. ರೇವಣ್ಣ ಅವರ ಪಾಲಿಗೆ ತಂದೆ-ತಾಯಿ ಎಂದರೆ ದೇವರ ಸಮಾನ. ದೇವಾಲಯಕ್ಕೆ ಹೋಗಿ ಪೂಜೆ ಮಾಡಿಸಿ ಬಂದರೆ ನಾನಿದ್ದರೂ ಮೊದಲು ಅಮ್ಮನಿಗೆ ಪ್ರಸಾದ ಕೊಡುತ್ತಿದ್ದರು. ನಮಗೆ ಎಲ್ಲಾ ವಿಷಯದಲ್ಲಿ ಅವರೇ ಮಾರ್ಗದರ್ಶನ ಮಾಡುತ್ತಿದ್ದರು. ಅವರು ಯಾವುದೇ ರಾಜಕಾರಣಿ ಅಲ್ಲ, ಸಿನಿಮಾ ಸ್ಟಾರ್ ಅಲ್ಲ, ಆದರೂ ಅವರು ಗಳಿಸಿರುವ ಪ್ರೀತಿ ದೊಡ್ಡದು. ಅತ್ತೆಗೆ ಚಕ್ಕುಲಿ, ಮೈಸೂರು ಪಾಕ್ ಅಂದ್ರೆ ತುಂಬಾ ಇಷ್ಟ’ ಎಂದು ಭಾವುಕರಾದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.