
ಗಾಜಿಯಾಬಾದ್, ಮೇ 19: ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿದ್ದ ಹಿಂದೂ ಯುವ ವಾಹಿನಿಯ ಗಾಜಿಯಾಬಾದ್ (Ghaziabad) ಘಟಕದ ಮುಖ್ಯಸ್ಥ ಸುಶೀಲ್ ಪ್ರಜಾಪತಿ ಇಂದು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಎಲ್ಎಲ್ಬಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿದ್ದ ಸುಶೀಲ್ಗೆ ಅವರ ಬೆಂಬಲಿಗರು ಅದ್ದೂರಿಯಾಗಿ ಸ್ವಾಗತಿಸಿದರು. ಕಳೆದ ವರ್ಷ ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾದ ನಂತರ ಅವರು ಸುಮಾರು 9 ತಿಂಗಳು ಜೈಲಿನಲ್ಲಿ ಕಳೆದಿದ್ದರು. ಪ್ರಜಾಪತಿಯನ್ನು ಹಲವಾರು ದೊಡ್ಡ ಹೂವಿನ ಹಾರಗಳಿಂದ ಸ್ವಾಗತಿಸಿ, ಬೆಂಬಲಿಗರು ಹೆಗಲ ಮೇಲೆ ಬೀದಿಗಳಲ್ಲಿ ಕರೆದೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶ ಮತ್ತು ಟೀಕೆಗೆ ಕಾರಣವಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ