‘ಅನನ್ಯಾ ಪಾಂಡೆ ಡ್ಯಾನ್ಸ್ ನೋಡಿ ಕಣ್ಣಲ್ಲಿ ರಕ್ತ ಬಂತು’ – Kannada News | Ananya Panday’s Bharatanatyam In Chand Mera Dil Sparks Online Backlash

ಬಾಲಿವುಡ್ (Bollywood) ನಟಿ ಅನನ್ಯಾ ಪಾಂಡೆ, ನಟನೆ ಬಿಟ್ಟು ಬೇರೆ ಕಾರಣಗಳಿಗೆ ಸದಾ ಸುದ್ದಿಯಲ್ಲಿರುತ್ತಾರೆ. ಸಂದರ್ಶನಗಳಲ್ಲಿ ಚಿತ್ರ-ವಿಚಿತ್ರ ಮಾತುಗಳು, ಬಿಕಿನಿ ಚಿತ್ರಗಳು, ಬದಲಾಗುವ ಬಾಯ್​​ಫ್ರೆಂಡ್ ಇಂಥಹುದೇ ಕಾರಣಕ್ಕೆ ಸುದ್ದಿಯಲ್ಲಿರುವ ಅನನ್ಯಾ, ನಟನೆಯ ಕಾರಣಕ್ಕೆ ಸುದ್ದಿಗೆ ಬರುವುದೇ ಅಪರೂಪ. ಕೇವಲ ನೆಪೊಟಿಸಮ್​​ನಿಂದ ವೃತ್ತಿ ಜೀವನ ನಡೆಸುತ್ತಿರುವ ಅನನ್ಯಾ ಪಾಂಡೆ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ಸುದ್ದಿಯಲ್ಲಿರುವುದು ಅವರ ಕೆಟ್ಟ ನೃತ್ಯ ಪ್ರದರ್ಶನದಿಂದ. ಅನನ್ಯಾ ಪಾಂಡೆ ನಟಿಸಿರುವ ಸಿನಿಮಾ ಒಂದು ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಸಿನಿಮಾನಲ್ಲಿ ಅನನ್ಯಾ ಪಾಂಡೆ ಮಾಡಿರುವ ಡ್ಯಾನ್ಸ್ ನೋಡಿ ನೆಟ್ಟಿಗರು ಹಣೆ-ಹಣೆ ಚಚ್ಚಿಕೊಂಡಿದ್ದಾರೆ. ಕೆಲವರು ಚಿತ್ರಮಂದಿರದಲ್ಲೇ ಉರುಳಾಡಿ ನಕ್ಕಿದ್ದಾರೆ. ಆದರೆ ಕೆಲ ಭರತನಾಟ್ಯ ನೃತ್ಯಪಟುಗಳು ಅನನ್ಯಾರ ಡ್ಯಾನ್ಸ್​​ ಅನ್ನು ವಿಮರ್ಶಿಸಿದ್ದು ಟೀಕೆ ವ್ಯಕ್ತಪಡಿಸಿದ್ದಾರೆ.

ಅನನ್ಯಾ ಪಾಂಡೆ ಮತ್ತು ಲಕ್ಷ್ಯ್ ನಟನೆಯ ‘ಚಾಂದ್ ಮೇರಾ ದಿಲ್’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಸಿನಿಮಾನಲ್ಲಿ ಅನನ್ಯಾ ಪಾಂಡೆ ಬಹುಮುಖ ಪ್ರತಿಭೆ ಹೊಂದಿರುವ ಕಾಲೇಜು ಯುವತಿಯ ಪಾತ್ರದಲ್ಲಿ ನಟಿಸಿದ್ದಾರೆ. ಕ್ರೀಡೆ, ಓದು, ಗಾಯನ, ನೃತ್ಯ, ವಿಜ್ಞಾನ ಪ್ರಯೋಗ ಎಲ್ಲದರಲ್ಲೂ ಮುಂದಿರುವ ಯುವತಿ ಚಾಂದಿನಿ ಪಾತ್ರದಲ್ಲಿ ಅನನ್ಯಾ ನಟಿಸಿದ್ದು, ಕಾಲೇಜು ಕಾರ್ಯಕ್ರಮದಲ್ಲಿ ಅನನ್ಯಾ ಭರತನಾಟ್ಯ ಮಾಡುವ ದೃಶ್ಯವೊಂದು ಸಿನಿಮಾನಲ್ಲಿದೆ. ಡ್ಯಾನ್ಸ್ ದೃಶ್ಯದಲ್ಲಿ ಅನನ್ಯಾ ಅವರು ಭರತನಾಟ್ಯ ಮತ್ತು ಹಿಪ್-ಹಾಪ್ ಮಿಶ್ರಿತ ‘ಫ್ಯೂಷನ್’ ನೃತ್ಯ ಮಾಡಿದ್ದಾರೆ. ಅನನ್ಯಾರ ಆ ನೃತ್ಯಕ್ಕೆ ತೀವ್ರ ವಿರೋಧ ಮತ್ತು ವ್ಯಂಗ್ಯ ವ್ಯಕ್ತವಾಗಿದೆ.

ಇದನ್ನೂ ಓದಿ:ಡ್ಯಾನ್ಸ್​ಗಾಗಿ ಎಂತ ರಿಸ್ಕ್ ತಗೊಂಡ್ರಾ ನೋಡಿ ಅನನ್ಯಾ ಅಮರ್

ಅನನ್ಯಾ ಅವರು ಸಿನಿಮಾನಲ್ಲಿ ಮಾಡಿರುವ ನೃತ್ಯ ಬಹಳ ಕೆಟ್ಟದಾಗಿದ್ದು, ಭರತನಾಟ್ಯದ ಗಂಧ-ಗಾಳಿಯೂ ಇಲ್ಲದ ವ್ಯಕ್ತಿಯೊಬ್ಬರು ಸುಮ್ಮನೆ, ಕೈ-ಕಾಲು ಆಡಿಸಿದಂತಿದೆ ಅನನ್ಯಾ ಮಾಡಿರುವ ನೃತ್ಯ ಪ್ರದರ್ಶನ. ಸಿನಿಮಾನಲ್ಲಿ ತೋರಿಸಿರುವಂತೆ ಆ ನೃತ್ಯ ಪ್ರದರ್ಶನ ನೋಡಿ ನಾಯಕ ಮಂತ್ರ ಮುಗ್ಧನಾಗುವಂತೆ ತೋರಿಸಲಾಗಿದೆ. ಆ ದೃಶ್ಯವನ್ನಂತೂ ನೆಟ್ಟಿಗರು ಇದೀಗ ವಿಪರೀತ ಟ್ರೋಲ್ ಮಾಡುತ್ತಿದ್ದಾರೆ. ಭರತನಾಟ್ಯದ ಮರ್ಯಾದೆಯನ್ನೇ ಅನನ್ಯಾ ಕಳೆದಿದ್ದಾರೆ ಎಂದೆಲ್ಲ ಆಕ್ರೋಶ ಹೊರಹಾಕಿದ್ದಾರೆ.

‘ಭರತನಾಟ್ಯವು ಕ್ರಿಸ್ತಪೂರ್ವ 200 ರಲ್ಲಿ ಹುಟ್ಟಿಕೊಂಡಿತು ಮತ್ತು 2026 ರಲ್ಲಿ ಅನನ್ಯಾ ಪಾಂಡೆ ಅವರಿಂದ ಕೊನೆಗೊಂಡಿತು’ ಎಂದು ನೆಟ್ಟಿಗನೊಬ್ಬ ಪೋಸ್ಟ್ ಹಾಕಿದ್ದಾನೆ. ಮತ್ತೊಬ್ಬ ನೆಟ್ಟಿಗ ತೀವ್ರವಾಗಿ ಪ್ರತಿಕ್ರಿಯಿಸಿ, ‘ಅನನ್ಯಾ ಪಾಂಡೆ ಭರತನಾಟ್ಯವನ್ನು ಸಂಪೂರ್ಣವಾಗಿ ‘ಭರ್ತಾ’ (ಗೊಜ್ಜು) ಮಾಡಿದ್ದಾರೆ. ಅವರ ಹಸ್ತಮುದ್ರೆಗಳು ರೋಬೋಟ್‌ನಂತೆ ಕಾಣುತ್ತಿವೆ ಮತ್ತು ಮುಖದ ಭಾವನೆಗಳು ಕೇವಲ ಆಶ್ಚರ್ಯದ ಇಮೋಜಿಯಂತೆ ಇವೆ. ಇದನ್ನು ನೋಡುತ್ತಿದ್ದರೆ ನನ್ನ ಕಣ್ಣುಗಳಿಂದ ರಕ್ತ ಬರುತ್ತಿರುವಂತಿದೆ” ಎಂದು ಬರೆದುಕೊಂಡಿದ್ದಾರೆ.

ಖ್ಯಾತ ಭರತನಾಟ್ಯ ನೃತ್ಯಗಾರ್ತಿ ಅನಿತಾ ರತ್ನಂ ಅವರು ಕೂಡ ಈ ನೃತ್ಯದ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ‘ಈ ವಿಡಿಯೋ ಕ್ಲಿಪ್ ನೋಡುತ್ತಿದ್ದರೆ ಭರತನಾಟ್ಯ ಕಲೆಯನ್ನೇ ಯಾರೋ ಅಪಹರಿಸಿ, ಅದರ ತಪ್ಪು ಗ್ರಹಿಕೆಯನ್ನು ಮಾತ್ರವೇ ಪ್ರದರ್ಶಿಸಿದಂತೆ ಭಾಸವಾಗುತ್ತಿದೆ. ಕೈಗಳನ್ನು ಮನಬಂದಂತೆ ಆಡಿಸುವುದು ಮತ್ತು ಅಸ್ತವ್ಯಸ್ತವಾದ ಕ್ಯಾಮೆರಾ ಮೂವ್‌ಮೆಂಟ್‌ಗಳ ನಡುವೆ, ಭರತನಾಟ್ಯವು ಸದ್ದಿಲ್ಲದೆ ಪಲಾಯನ ಮಾಡಿದಂತೆ ಕಾಣುತ್ತಿದೆ. ಭರತನಾಟ್ಯವು ಸಂಯಮ, ಸಂಪ್ರದಾಯ ಮತ್ತು ಭಾವನೆಗಳ ಮೇಲೆ ನಿಂತಿರುತ್ತದೆ. ಆದರೆ ಈ ಕ್ಲಿಪ್‌ನಲ್ಲಿ ಅದನ್ನು ಲಘು ಭೂಕಂಪದ ಸಮಯದಲ್ಲಿ ನಡೆಯುವ ಮದುವೆ ಸಂಭ್ರಮದ ನೃತ್ಯದಂತೆ ಬಿಂಬಿಸಲಾಗಿದೆ’ ಎಂದು ಅವರು ವಿಮರ್ಶಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *