ಅನಾರೋಗ್ಯದ ಕಾರಣ ಕೊಟ್ಟು ‘ಜನ ನಾಯಗನ್’ ನೋಡೋದನ್ನು ಮುಂದಕ್ಕೆ ಹಾಕಿದ ರಿವಿಶನ್ ಸಮಿತಿ

ಅನಾರೋಗ್ಯದ ಕಾರಣ ಕೊಟ್ಟು ‘ಜನ ನಾಯಗನ್’ ನೋಡೋದನ್ನು ಮುಂದಕ್ಕೆ ಹಾಕಿದ ರಿವಿಶನ್ ಸಮಿತಿ

‘ಜನ ನಾಯಗನ್’ ಸಿನಿಮಾ (Jana Nayagan Movie)  ಜನವರಿ 9ಕ್ಕೆ ರಿಲೀಸ್ ಆಗಬೇಕಿತ್ತು. ಆದರೆ, ಸಾಧ್ಯವಾಗಿಲ್ಲ. ಮೂಲ ದಿನಾಂಕ ಮುಗಿದು ಎರಡು ತಿಂಗಳು ಕಳೆದರೂ ಸಿನಿಮಾಗೆ ರಿಲೀಸ್ ಭಾಗ್ಯ ಸಿಗುತ್ತಿಲ್ಲ. ಈ ಮಧ್ಯೆ, ‘ಜನ ನಾಯಗನ್’ ಸಿನಿಮಾ ಮಾರ್ಚ್ 19ರ ರಿಲೀಸ್ ಮೇಲೆ ಕಣ್ಣಿಟ್ಟಿದೆ ಎಂದು ಹೇಳಲಾಗಿತ್ತು. ಆದರೆ, ಇದಕ್ಕೂ ಅವಕಾಶ ಸಿಗಬಾರದು ಎಂದು ಎಲ್ಲರೂ ನಿರ್ಧರಿಸಿದಂತೆ ಇದೆ. ಏಕೆಂದರೆ, ಸಿನಿಮಾ ವಿಮರ್ಶೆ ಮಾಡೋದಕ್ಕೆ ಪುರನ್ ವಿಮರ್ಶೆ ಸಮಿತಿ ರೆಡಿ ಇದ್ದಂತೆ ಕಾಣಿಸುತ್ತಿಲ್ಲ.

‘ಜನ ನಾಯಗನ್’ ಚಿತ್ರವನ್ನು ವಿಮರ್ಶೆ ಮಾಡಲು ಕೆವಿಎನ್ ಸಂಸ್ಥೆ ಡಿಸೆಂಬರ್​​​ನಲ್ಲಿಯೇ ಸೆನ್ಸಾರ್ ಮಂಡಳಿಗೆ ಅರ್ಜಿ ಸಲ್ಲಿಸಿತ್ತು. ಸಿನಿಮಾ ಮಂಡಳಿ ಪ್ರಮಾಣಪತ್ರ ನೀಡಲು ನಿರಾಕರಿಸಿತ್ತು. ಪುನರ್ ವಿಮರ್ಶೆ ಸಮಿತಿಗೆ ಸಿನಿಮಾ ಸಲ್ಲಿಕೆ ಮಾಡುವ ಬಗ್ಗೆ ಚಿಂತನೆ ನಡೆಸಿದ್ದಾಗಿ ಹೇಳಿತ್ತು. ಇದರಿಂದ ಸಿಟ್ಟಾದ ಕೆವಿಎನ್​ ಕೋರ್ಟ್ ಮೆಟ್ಟಿಲೇರಿತ್ತು. ಸ್ಥಳೀಯ ಕೋರ್ಟ್​​ನಿಂದ ಹಿಡಿದು ಸುಪ್ರೀಂಕೋರ್ಟ್​​ವರೆಗೆ ತಂಡ ಅರ್ಜಿ ಸಲ್ಲಿಸಿತ್ತು.

ಆದರೆ, ಕೋರ್ಟ್​​​ನಲ್ಲಿ ಇದಕ್ಕೆ ಪರಿಹಾರ ಸಿಗುವುದಿಲ್ಲ ಎಂಬ ಸ್ಪಷ್ಟತೆ ಸಿಕ್ಕ ಬಳಿಕ ‘ಜನ ನಾಯಗನ್’ ತಂಡ ಕೋರ್ಟ್​​ನಿಂದ ಅರ್ಜಿ ಹಿಂಪಡೆದು, ಪುನರ್ ವಿಮರ್ಶೆ ಸಮಿತಿಗೆ ಅರ್ಜಿ ಸಲ್ಲಿಕೆ ಮಾಡಿತ್ತು. ಇಂದು (ಮಾರ್ಚ್ 9) ಮಧ್ಯಾಹ್ನ ‘ಜನ ನಾಯಗನ್’ ಸಿನಿಮಾ ನೋಡುವುದಾಗಿ ಪುನರ್ ವಿಮರ್ಶೆ ಸಮಿತಿ ಹೇಳಿದ್ದಾಗಿ ವರದಿ ಆಗಿತ್ತು. ಆದರೆ, ಈಗ ಈ ಪ್ರಕ್ರಿಯೆಯೂ ವಿಳಂಬ ಆಗುತ್ತಿದೆ.

ಸಮಿತಿಯಲ್ಲಿರುವ ಒಬ್ಬರಿಗೆ ತೀವ್ರ ಅನಾರೋಗ್ಯ ಉಂಟಾಗಿದೆಯಂತೆ. ಇದೇ ಕಾರಣ ನೀಡಿ ಸಿನಿಮಾ ವಿಮರ್ಶೆಯನ್ನು ಮುಂದಕ್ಕೆ ಹಾಕಲಾಗಿದೆ. ಇದು ತಂಡದ ಅಸಮಾಧಾನಕ್ಕೆ ಕಾರಣ ಆಗಿದೆ. ಇನ್ನು ಅಭಿಮಾನಿಗಳಿಗೂ ಸಾಕಷ್ಟು ನೋವುಂಟು ಮಾಡಿದೆ. ಈ ಬೆಳವಣಿಗೆಯಿಂದ ಮಾರ್ಚ್ 19ರ ದಿನಾಂಕ ಕೂಡ ಮಿಸ್ ಆಗುವ ಸೂಚನೆ ಸಿಕ್ಕಿದೆ.

ಇದನ್ನೂ ಓದಿ: ಮಾರ್ಚ್ 9ಕ್ಕೆ ನಿರ್ಧಾರವಾಗಲಿದೆ ‘ಜನ ನಾಯಗನ್’ ಭವಿಷ್ಯ: ಆತಂಕದಲ್ಲಿ ಕೆವಿಎನ್

‘ಜನ ನಾಯಗನ್’ ಚಿತ್ರವನ್ನು ವಿನೋದ್ ನಿರ್ದೇಶನ ಮಾಡಿದ್ದಾರೆ. ಕೆಲವು ಆ್ಯಕ್ಷನ್ ಚಿತ್ರಗಳನ್ನು ಅವರು ನೀರ್ದೇಶನ ಮಾಡಿದ್ದರು. ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಇದನ್ನು ನಿರ್ಮಾಣ ಮಾಡಿದೆ. ಅನಿರುದ್ಧ್ ರವಿಚಂದರ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

Leave a Reply

Your email address will not be published. Required fields are marked *