Headlines

ಅನೈತಿಕ ಸಂಬಂಧ ಗುಟ್ಟು ರಟ್ಟು: ಒಂದೇ ಅವಾಜ್​​​ಗೆ ಯುವಕ ದುರಂತ ಸಾವು, ಆಗಿದ್ದೇನು? – Kannada News | A Youth Commits Suicide after threats from Man over extramarital affair with Woman at Tumakuru

ತುಮಕೂರು (ಫೆಬ್ರವರಿ .24): ವ್ಯಕ್ತಿಯೋರ್ವನ ಅಕ್ರಮ ಸಂಬಂಧದ (extramarital affair) ವಿಚಾರವನ್ನು ಆತನ ಹೆಂಡತಿಗೆ ತಿಳಿಸಿ ನ್ಯಾಯ ಕೊಡಿಸಲು ಹೋದ ಯುವಕನೊಬ್ಬ ದುರಂತ ಸಾವು ಕಂಡಿರುವ ದಾರುಣ ಘಟನೆ ತುಮಕೂರು (Tumakuru) ತಾಲೂಕಿನ ರಾಮೇನಹಳ್ಳಿಯಲ್ಲಿ ನಡೆದಿದೆ. ಹೌದು…ಚೇತನ್ ಎನ್ನುವ ಯುವಕ ನಾಗರಾಜ್ ಎನ್ನುವಾತನ ಮಹಿಳೆಯೊಂದಿಗಿನ ಅಕ್ರಮ ಸಂಬಂಧವನ್ನು ಆತನ ಹೆಂಡ್ತಿಗೆ ತಿಳಿಸಿದ್ದು, ಈ ವಿಚಾರವಾಗಿ ನಾಗರಾಜ್, ಚೇತನ್​​​ ಜತೆ ಗಲಾಟೆ ಮಾಡಿದ್ದಾನೆ. ಅಲ್ಲದೇ ಬೆದರಿಕೆ ಸಹ ಹಾಕಿದ್ದ. ಇದರಿಂದ ಮನನೊಂದ ಚೇತನ್​, ತನ್ನ ಮೊಬೈಲ್‌ನಲ್ಲಿ ಸೆಲ್ಫಿ ವಿಡಿಯೋ ರೆಕಾರ್ಡ್ ಮಾಡಿ ತನ್ನ ಸಾವಿಗೆ ನಾಗರಾಜ್ ಎಂದು ಹೇಳಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಅಕ್ರಮ ಸಂಬಂಧದ ಬಗ್ಗೆ ಆತನ ಪತ್ನಿ ಸುಮಾಗೆ ಮಾಹಿತಿ ನೀಡಿದ್ದ. ಕಟ್ಟೆ ನಾಗರಾಜು ಮತ್ತೋರ್ವ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವಿಚಾರವನ್ನು ಚೇತನ್, ಸುಮಾಗೆ ತಿಳಿಸಿದ್ದರಿಂದ, ದಂಪತಿಗಳ ನಡುವೆ ಮನೆಯಲ್ಲಿ ದೊಡ್ಡ ಗಲಾಟೆ ನಡೆದಿತ್ತು. ಈ ವೇಳೆ ಸುಮಾ, ಚೇತನ್ ತನಗೆ ಈ ವಿಚಾರ ತಿಳಿಸಿದ್ದಾಗಿ ಗಂಡನಿಗೆ ಹೇಳಿದ್ದಾಳೆ. ಇದರಿಂದ ಆಕ್ರೋಶಗೊಂಡ ನಾಗರಾಜ್, ಚೇತನ್ ಮೇಲೆ ಜಗಳ ಮಾಡಿದ್ದಾನೆ. ಅಲ್ಲದೇ ಪ್ರಾಣ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಇದರಿಂದ ಹೆದರಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆದ್ರೆ, ಆತ್ಮಹತ್ಯೆಗೂ ಮುನ್ನ ತನ್ನ ಮೊಬೈಲ್‌ನಲ್ಲಿ ಸೆಲ್ಫಿ ವಿಡಿಯೋ ಮಾಡಿರುವ ಚೇತನ್, ತನ್ನ ಸಾವಿಗೆ ಕಟ್ಟೆ ನಾಗರಾಜು ಎಂದು ಹೇಳಿದ್ದಾನೆ.

ಇದನ್ನೂ ಓದಿ: ಸಾಕು ಮಗ-ತಂಗಿಯಿಂದಲೇ ಮಹಿಳೆಯ ಹತ್ಯೆ: ಓರ್ವ ವ್ಯಕ್ತಿಯಿಂದ ಬಯಲಾಯ್ತು ಕೊಲೆ ರಹಸ್ಯ

ಮೊದಲು ಹೆಬ್ಬೂರು ಠಾಣೆ ಪೊಲೀಸರು ಆತ್ಮಹತ್ಯೆ ಎಂದು ದೂರು ದಾಖಲಿಸಿಕೊಂಡಿದ್ದರು. ಆದ್ರೆ, ಚೇತನ್​​ ಮೊಬೈಲ್ ನಲ್ಲಿದ್ದ ವಿಡಿಯೋ ನೋಡಿದ ತಂದೆ ಕೂಡಲೇ ಹೆಬ್ಬೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಎಫ್​​​ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ಚೇತನ್​​ ವಿಡಿಯೋನಲ್ಲಿ ಹೇಳಿದ್ದ ನಾಗರಾಜನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *