ಚಿತ್ರದುರ್ಗ, ಫೆಬ್ರವರಿ 25): ಮೊಬೈಲ್ ಸ್ಕ್ರೀನ್ ಗಾರ್ಡ್ ವಿಚಾರವಾಗಿ ಮೊಬೈಲ್ ಅಂಗಡಿ (Mobile Shop) ಮಾಲೀಕ ಹಾಗೂ ಅನ್ಯಕೋಮಿನ ಯುವಕನ ನಡೆದ ಗಲಾಟೆ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದು, ಕೊನೆಗೆ ಯುವಕ, ಮೊಬೈಲ್ ಅಂಗಡಿ ಮಾಲೀಕನಿಗೆ ಚಾಕುವಿನಿಂದ ಇರಿದಿದ್ದಾನೆ. ಈ ಘಟನೆ ಚಿತ್ರದುರ್ಗ (Chitradruga) ನಗರದ ಸಂತೆ ಮೈದಾನ ಬಳಿ ನಡೆದಿದೆ. 100 ರೂ. ಹೆಚ್ಚುವರಿ ಹಣ ಕೇಳಿದ್ದಕ್ಕೆ ಸಿಟ್ಟಾದ ಯುವಕ, ಅಂಗಡಿ ಮಾಲೀಕ ವಿಕ್ರಮ್ ಚೌದ್ರಿಗೆ ಚಾಕು ಇರಿದಿದ್ದಾನೆ. ಯುವಕ ಚಾಕು ಇರಿಯುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ವಿಕ್ರಮ್ ಚೌದ್ರಿ ಅವರನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗದೆ. ಇನ್ನು ಈ ವಿಚಾರ ತಿಳಿಯುತ್ತಿದ್ದಂತೆಯೇ ಹಿಂದೂ ಸಂಘಟನೆಗಳು ಸಿಡಿದೆದ್ದಿದ್ದು, ಬೀದಿಗಿಳಿದು ಪ್ರತಿಭಟನೆ ನಡೆಸಿವೆ. ಮೊಬೈಲ್ ಸ್ಕ್ರೀನ್ ಗಾರ್ಡ್ ವಿಚಾರಕ್ಕೆ ನಡೆದ ಗಲಾಟೆ ಇದೀಗ ಕೋಮು ಸಂಘರ್ಷಕ್ಕೆ ತಿರುಗಿದ್ದು, ಯಾವುದೇ ಅಹಿತಕ ಘಟನೆಗಳು ಆಗದರಿಂದ ಪೊಲೀಸರು ಹೈಲರ್ಟ್ ಆಗಿದ್ದಾರೆ.
ವಿಕ್ರಮ್ ಚೌದ್ರಿ ಎಂಬವರ ಅಂಗಡಿಗೆ ಯುವಕನೊಬ್ಬ ಮೊಬೈಲ್ ಸ್ಕ್ರೀನ್ ಖರೀದಿಸಿದ್ದ. ಆದರೆ ಅದೇನಾಯ್ತೋ ಏನು ಯವಕ, ಈ ಸ್ಕ್ರೀನ್ ಗಾರ್ಡ್ ಬೇಡ ಬೇರೆಯದ್ದು ಕೊಡಿ ಎಂದಿದ್ದಾನೆ. ಈ ವೇಳೆ ಮೊಬೈಲ್ ಅಂಗಡಿ ಮಾಲೀಕ ವಿಕ್ರಮ್ ಚೌದ್ರಿ, ಬೇರೆ ಬ್ರ್ಯಾಂಡ್ ಸ್ಕ್ರೀನ್ ಗಾರ್ಡ್ಗೆ ಹೆಚ್ಚುವರಿ ಹಣ ಕೇಳಿದ್ದಾರೆ. 100 ರೂ. ಹೆಚ್ಚುವರಿ ಹಣ ಕೇಳಿದ್ದಕ್ಕೆ ಸಿಟ್ಟಾದ ಯುವಕ, ವಿಕ್ರಮ್ ಜೊತೆ ಜಗಳ ತೆಗೆದಿದ್ದಾನೆ. ಬಳಿಕ ಗಲಾಟೆ ಕೈಕೈ ಮಿಲಸಾಯಿಸುವ ಹಂತಕ್ಕೆ ಹೋಗಿದ್ದು, ಕೊನೆಗೆ ಯುವಕ ಚಾಕುವಿನಿಂದ ವಿಕ್ರಮ್ ಇರಿದಿದ್ದಾನೆ. ಚಾಕುವಿನಿಂದ ಇರಿಯುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಗಾಯಗೊಂಡಿರುವ ಮೊಬೈಲ್ ಅಂಗಡಿ ಮಾಲೀಕ ವಿಕ್ರಮ್ ಚೌದ್ರಿ ಅವರನ್ನ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಬಾಗಲಕೋಟೆ: ಕಲ್ಲು ತೂರಾಟದ ಕಾವು ಆರುವ ಮುನ್ನವೇ ಜಾಲತಾಣದಲ್ಲಿ ಮುಸ್ಲಿಂ ಯುವಕರಿಂದ ವಿವಾದಾತ್ಮಕ ಪೋಸ್ಟ್
ಈ ವಿಚಾರ ತಿಳಿದ ಕೂಡಲೇ ಹಿಂದೂ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾಸ್ಪತ್ರೆ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ವಿಕ್ರಮ್ ಚೌದ್ರಿ ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದಕ್ಕೆ ಚಾಕು ಇರಿಯಲಾಗಿದೆ. ಕೂಡಲೇ ಆರೋಪಿಯನ್ಗನು ಅರೆಸ್ಟ್ ಮಾಡಬೇಕು ಎಂದು ರಸ್ತೆ ಬಂದ್ ಮಾಡಿ ಟೈರ್ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು. ಒಂದು ವೇಳೆ ಆರೋಪಿಯನ್ನು ಬಂಧನ ಮಾಡದೇ ಇದ್ದರೆ ನಾಳೆ (ಫೆಬ್ರವರಿ 26) ಚಿತ್ರದುರ್ಗ ಬಂದ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು ಈ ಪ್ರಕರಣ ಕೋಮು ಸಂಘರ್ಷಕ್ಕೆ ತಿರುಗುವ ಮುನ್ಸೂಚನೆ ಸಿಗುತ್ತಿದ್ದಂತೆಯೇ ಜಿಲ್ಲಾಸ್ಪತ್ರೆಗೆ ಚಿತ್ರದುರ್ಗ ಎಸ್ಪಿ ರಂಜಿತ್ ಬಂಡಾರು ದೌಡಾಯಿಸಿ ಗಾಯಾಳು ವಿಕ್ರಮ ಚೌದರಿ ಆರೋಗ್ಯ ವಿಚಾರಿಸಿದರು. ಅಲ್ಲದೇ ಘಟನೆ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಆದ್ರೆ, ಈ ವೇಳೆ ಚಿತ್ರೀಕರಣಕ್ಕೆ ಹೋದ ಮಾಧ್ಯಮಗಳಿಗೆ ನಿರ್ಬಂಧಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಒಟ್ಟಿನಲ್ಲಿ ಒಂದು ಮೊಬೈಲ್ ಸ್ಕ್ರೀನ್ ಗಾರ್ಡ್ ಗಾಗಿ ನಡೆದ ಸಣ್ಣ ಗಲಾಟೆ ಇದೀಗ ಕೋಮು ಸಂಘರ್ಷ ಹಂತಕ್ಕೆ ಹೋಗಿದೆ.