Headlines

ಅಪೋಲೋ ಆಸ್ಪತ್ರೆಗಳು 24×7 ಆರೋಗ್ಯ ಸೇವೆಗೆ ಬದ್ಧ: ಐಎಚ್​ಡಿ ಸಮಾವೇಶದಲ್ಲಿ ಘೋಷಣೆ – Kannada News | Apollo Hyderabad: 24/7 Healthcare and Future Hospital Vision from Int’l Health Dialogue

ಹೈದರಾಬಾದ್, ಫೆಬ್ರುವರಿ 01: ಅಪೋಲೋ ಹಾಸ್ಪಿಟಲ್ಸ್ (Apollo Hospitals)​​ ವತಿಯಿಂದ ಹೈದರಾಬಾದ್​​​ನಲ್ಲಿ ಆಯೋಜಿಸಲಾಗಿದ್ದ ಇಂಟರ್ನ್ಯಾಷನಲ್ ಹೆಲ್ತ್ ಡೈಲೋಗ್ (International Health Dialogue)​​ ಸಂವಾದ ಕಾರ್ಯಕ್ರಮ ಇಂದು ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ವರ್ಷದ 365 ದಿನವೂ ತನ್ನ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಮೂಲಕ ಭವಿಷ್ಯದ ಆಸ್ಪತ್ರೆ ನಿರ್ಮಿಸುವ ಯೋಜನೆಯನ್ನು ಅಪೋಲೋ ಘೋಷಿಸಿದೆ. ಎರಡು ದಿನಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಸ್ಥಳೀಯವಾಗಿ ಹಾಗೂ ಆನ್‌ಲೈನ್ ಮೂಲಕ 27,000ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

ಜನರು ಅನಾರೋಗ್ಯಕ್ಕೆ ಒಳಗಾದಾಗ ಆರೋಗ್ಯ ಕ್ಷೇತ್ರ ನಿದ್ರಿಸಲು ಸಾಧ್ಯವಿಲ್ಲ: ಡಾ. ಪ್ರತಾಪ್ ಸಿ. ರೆಡ್ಡಿ

ಅಪೋಲೋ ಅಧ್ಯಕ್ಷ ಡಾ. ಪ್ರತಾಪ್ ಸಿ. ರೆಡ್ಡಿ ಮಾತನಾಡಿ, ಅಪೋಲೋ ಆಸ್ಪತ್ರೆಗಳು ರಜಾದಿನಗಳು ಸೇರಿದಂತೆ ವರ್ಷದ 365 ದಿನಗಳು 24×7 ಕಾರ್ಯನಿರ್ವಹಿಸಲಿವೆ ಎಂದು ಘೋಷಿಸಿದರು. ಜನರು ಅನಾರೋಗ್ಯಕ್ಕೆ ಒಳಗಾದಾಗ ಆರೋಗ್ಯ ಕ್ಷೇತ್ರ ನಿದ್ರಿಸಲು ಸಾಧ್ಯವಿಲ್ಲ. ಕೆಲಸದ ದಿನಗಳಲ್ಲಿ ಮಾತ್ರವಲ್ಲದೆ ಪ್ರತಿದಿನವೂ ಆರೋಗ್ಯ ರಕ್ಷಣೆಗೆಗಾಗಿ ಆಸ್ಪತ್ರೆಗಳು ಕಾರ್ಯನಿರ್ವಹಿಸಬೇಕು. ಆರೋಗ್ಯ ರಕ್ಷಣೆ ಆಸ್ಪತ್ರೆಗಳಲ್ಲಿ ಮಾತ್ರ ಅಲ್ಲ, ನಮ್ಮ ದೈನಂದಿನ ಜೀವನದಲ್ಲಿದೆ ಎಂದು ಹೇಳಿದ್ದಾರೆ.

ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಡಾ. ಸಂಗೀತಾ ರೆಡ್ಡಿ ಹೇಳಿದ್ದಿಷ್ಟು 

ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಡಾ. ಸಂಗೀತಾ ರೆಡ್ಡಿ ಮಾತನಾಡಿ, ಅಪೋಲೋ ಸಂಸ್ಥೆಯ ತಂತ್ರಜ್ಞಾನ ಮಾರ್ಗಸೂಚಿಯನ್ನು ವಿವರಿಸಿದರು. ಆಸ್ಪತ್ರೆಗಳೊಳಗಿನ ಸೀಮಿತ ಚಿಕಿತ್ಸೆಯಿಂದ ಹೊರಬಂದು, ನಿರಂತರ ಆರೋಗ್ಯ ನಿರ್ವಹಣೆಯತ್ತ ಸಾಗುವ ವ್ಯವಸ್ಥೆಯೇ ಅಪೋಲೋದ ಗುರಿ ಎಂದರು. ಹೈದರಾಬಾದ್‌ನಲ್ಲಿ ನಿರ್ಮಾಣವಾಗಲಿರುವ ಹೊಸ ಸೌಲಭ್ಯವುಳ್ಳ ಆಸ್ಪತ್ರೆ ವಿಶಾಲ ಆರೋಗ್ಯ ವ್ಯವಸ್ಥೆ ನಿರ್ಮಿಸುವ ಪ್ರಯತ್ನದ ಒಂದು ಭಾಗವಾಗಿರುತ್ತದೆ ಎಂದಿದ್ದಾರೆ.

ಆರೋಗ್ಯ ಕ್ಷೇತ್ರಕ್ಕೆ ಗಣನೀಯವಾಗಿ ಬೆಳೆಯುವ, ಹೊಸ ರೀತಿಯ ಪರಿಹಾರಗಳು ಅಗತ್ಯ. ಈ ನಿಟ್ಟಿನಲ್ಲಿ ಈಗಾಗಲೇ ಹಲವು ಉಪಕ್ರಮಗಳು ಆರಂಭವಾಗಿವೆ. ವೈದ್ಯಕೀಯವಲ್ಲದ ರೋಗಿಗಳ ಬೇಡಿಕೆಗಳನ್ನು ನಿರ್ವಹಿಸುವ ‘ಡಯಲ್50’ ಸೇವೆ, ಅಪಾಯ ಮೌಲ್ಯಮಾಪನ ಮತ್ತು ಆರೋಗ್ಯ ಮಾರ್ಗಸೂಚಿಗಳ ಮೂಲಕ ತಡೆಗಟ್ಟುವ ಚಿಕಿತ್ಸೆಗೆ ನೆರವಾಗುವ ಕೃತಕ ಬುದ್ಧಿಮತ್ತೆ ಆಧಾರಿತ ವೇದಿಕೆ, ಇವು ಈಗ ಲಕ್ಷಾಂತರ ಎಪಿಐ ಕರೆಗಳನ್ನು ಸಂಸ್ಕರಿಸುತ್ತಿವೆ. ಅದೇ ರೀತಿ, ಅಪೋಲೋ 24/7 ಎಂಬ ಟೆಲಿಹೆಲ್ತ್ ವೇದಿಕೆ ಈಗಾಗಲೇ 4 ಕೋಟಿಗೂ ಅಧಿಕ ಬಳಕೆದಾರರಿಗೆ ಸೇವೆ ನೀಡುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

‘ಗ್ಲೋಬಲ್ ವಾಯ್ಸಸ್, ಒನ್ ವಿಶನ್’ ಎಂಬ ಥೀಮ್‌ನಡಿ ನಡೆದ ಈ ಸಮ್ಮೇಳನವು ಭಾರತ ಹಾಗೂ ವಿದೇಶಗಳಿಂದ ವೈದ್ಯರು, ತಜ್ಞರು, ಪರಿಣತರು, ತಂತ್ರಜ್ಞಾನ ತಜ್ಞರು ಮತ್ತು ಆರೋಗ್ಯ ಸಂಘ ಸಂಸ್ಥೆಗಳು ಒಂದೇ ವೇದಿಕೆಯಲ್ಲಿ ಮುಖಾಮುಖಿಯಾದರು. ಜವಾಬ್ದಾರಿಯುತ ಡಿಜಿಟಲ್ ಪರಿವರ್ತನೆ ಕುರಿತು ಆಳವಾದ ಮತ್ತು ವೈವಿಧ್ಯಮಯ ಚರ್ಚೆಗಳು ನಡೆದವು. ಈ ವೇಳೆ ವಿಶ್ವದ 75ಕ್ಕೂ ಹೆಚ್ಚು ಸಂಸ್ಥೆಗಳಿಂದ 300ಕ್ಕೂ ಅಧಿಕ ಸಂಶೋಧನಾ ಪ್ರಬಂಧಗಳು ಹಾಗೂ 120ಕ್ಕೂ ಹೆಚ್ಚು ಪ್ರಶಸ್ತಿ ಅರ್ಜಿಗಳು ಸಲ್ಲಿಸಲಾಗಿತ್ತು.

ಇದನ್ನೂ ಓದಿ: ಜನವರಿ 30-31ರಂದು ಹೈದರಾಬಾದ್​ನಲ್ಲಿ ಅಪೋಲೋ ಹಾಸ್ಪಿಟಲ್ಸ್​ನಿಂದ ‘ಇಂಟರ್ನ್ಯಾಷನಲ್ ಹೆಲ್ತ್ ಡೈಲೋಗ್’

ತೆಲಂಗಾಣ ಲೋಕಸಭಾ ಸದಸ್ಯ ಕೊಂಡಾ ವಿಶ್ವೇಶ್ವರ ರೆಡ್ಡಿ, ಅಂತಾರಾಷ್ಟ್ರೀಯ (ಜೆಸಿಐ) ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೊನಾಥನ್ ಬಿ. ಪರ್ಲಿನ್, ಅಂತಾರಾಷ್ಟ್ರೀಯ ಸೊಸೈಟಿ (ಐಎಸ್‌ಕ್ಯೂಎ)ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾರ್ಸ್ಟನ್ ಎಂಗೆಲ್, ರಾಷ್ಟ್ರೀಯ ಮಾನ್ಯತೆ ಮಂಡಳಿಯ (ಎನ್‌ಎಬಿಹೆಚ್) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅತುಲ್ ಮೋಹನ್ ಕೊಚ್ಚರ್, ಕಾಂಗೋ ಗಣರಾಜ್ಯದ ಆರೋಗ್ಯ ಮತ್ತು ಜನಸಂಖ್ಯೆಯ ಗೌರವಾನ್ವಿತ ಸಚಿವ ಜೀನ್ ರೋಸೈರ್ ಇಬಾರಾ, ಘಾನಾದ ಉಪಮಂತ್ರಿ ಗ್ರೇಸ್ ಅಯೆನ್ಸು-ಡನ್ಕ್ವಾ, ದಕ್ಷಿಣ ಸುಡಾನ್ ಆರೋಗ್ಯ ಸಚಿವ ಸಾರಾ ಕ್ಲೆಟೊ ರಿಯಾಲ್ ಮತ್ತು ಟೋಂಗಾದ ಆರೋಗ್ಯ ಸಚಿವ ಹುಕಾವಮೆಲಿಕು ಸಿಯೋಸಿ ಸೊವಾಲೆನಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 3:37 pm, Sun, 1 February 26

Source link

Leave a Reply

Your email address will not be published. Required fields are marked *