Headlines

ಅಪ್ಪ ಬೈತಾರೆ ಅಂತ ತಡರಾತ್ರಿ ವಾಟರ್ ಟ್ಯಾಂಕ್ ಏರಿ ಬಾಲಕನ ಹುಚ್ಚಾಟ! – Kannada News | Boy Threatened to commit self harm jumping from water tank, rescued

ಚಾಮರಾಜನಗರ, ಏಪ್ರಿಲ್ 17: ಅಪ್ಪ ಬೈತಾರೆ ಎಂಬ ಕಾರಣಕ್ಕೆ ಕೋಪಗೊಂಡ ಬಾಲಕನೊಬ್ಬ ವಾಟರ್ ಟ್ಯಾಂಕ್ ಏರಿ ಆತ್ಮಹತ್ಯೆ ಬೆದರಿಕೆ ಹಾಕಿದ ಘಟನೆ ಗುಂಡ್ಲುಪೇಟೆ ಪಟ್ಟಣದ ನಾಗರತ್ಮಮ್ಮ ಬಡಾವಣೆಯಲ್ಲಿ ನಡೆದಿದೆ. ಶ್ರೀನಿವಾಸ್ ಎಂಬ ಬಾಲಕ ತಡರಾತ್ರಿ ಏಕಾಏಕಿ ನೀರಿನ ಟ್ಯಾಂಕ್ ಮೇಲೆ ಹತ್ತಿ ಆತಂಕ ಸೃಷ್ಟಿಸಿದ್ದಾನೆ. ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬಾಲಕನನ್ನು ಮನವೊಲಿಸಲು ಪ್ರಯತ್ನಿಸಿದ್ದು, ಸುಮಾರು ಒಂದೂವರೆ ಗಂಟೆಗಳ ಹೈಡ್ರಾಮ ನಂತರ ಬಾಲಕನನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ. ನಂತರ ಪಾಲಕರು ಮತ್ತು ಸ್ಥಳೀಯರು ಬಾಲಕನಿಗೆ ಬುದ್ದಿವಾದ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *