Headlines

ಅಮಾನವೀಯ ಕೃತ್ಯ: ಊಟ ಕೊಡಿ ಎಂದಿದ್ದಕ್ಕೆ ಭಿಕ್ಷುಕ ದಂಪತಿಗೆ ಥಳಿಸಿದ ಹೋಟೆಲ್ ಮಾಲೀಕ – Kannada News | Hotel Owner Assaults Beggar Couple for Asking for Food, Sparks Outrage

ಪ್ರಾತಿನಿಧಿಕ ಚಿತ್ರImage Credit source: Getty images

ಕಾರವಾರ, ಜೂನ್​​ 22: ಹೋಟೆಲ್​ನಲ್ಲಿ ಊಟ ಕೇಳಿದ ಭಿಕ್ಷುಕ (Beggar) ದಂಪತಿಗೆ ಹೋಟೆಲ್​​ ಮಾಲೀಕ ಹಿಗ್ನಾಮುಗ್ಗ ಥಳಿಸಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ (uttara kannada) ಕುಮಟಾ ನಗರದಲ್ಲಿರುವ ಗೋವರ್ಧನ ಹೋಟೆಲ್​ನಲ್ಲಿ ನಡೆದಿದೆ. ರಮೇಶ್ ದ್ಯಾಮಣ್ಣ ಅಲೆಮಾರಿ (62) ಮತ್ತು ಅವರ ಪತ್ನಿ ದ್ಯಾಮವ್ವ ರಮೇಶ್ ಅಲೆಮಾರಿ (51) ಹಲ್ಲೆಗೊಳಗಾದವರು. ಸದ್ಯ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಖ್ಯಾಂಶಗಳು

  • ಕುಮಟಾದಲ್ಲಿ ಭಿಕ್ಷುಕ ದಂಪತಿ ಮೇಲೆ ಹಲ್ಲೆ
  • ಹೋಟೆಲ್ ಮಾಲೀಕನಿಂದ ದರ್ಪ
  • ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲು

ನಡೆದಿದ್ದೇನು?

ಹಲ್ಲೆಗೊಳಗಾದ ರಮೇಶ್ ದ್ಯಾಮಣ್ಣ ಮತ್ತು ಅವರ ಪತ್ನಿ ದ್ಯಾಮವ್ವ ರಮೇಶ್ ಅವರು ಶಿವಮೊಗ್ಗ ಜಿಲ್ಲೆಯ ಸೊರಬಾ ತಾಲೂಕಿನ ದೇವಿಕೆರೆ ಗ್ರಾಮದ ಅಲೆಮಾರಿ ದಂಪತಿ. ಭಿಕ್ಷಕರೆಂಬ ಕಾರಣಕ್ಕೆ ಊಟ ಕೊಡಲು ಹೋಟೆಲ್ ಮಾಲೀಕ ನಿರಾಕರಿಸಿದ್ದಾರೆ. ಬಹಳ ಹೊಟ್ಟೆ ಹಸಿದಿದೆ, ಊಟ ಕೊಡಿ ಎಂದಿದ್ದಕ್ಕೆ ಹೋಟೆಲ್​​ನಿಂದ ಹೊರಗೆ ತಳ್ಳಿದ್ದಾರೆ.

ಇದನ್ನೂ ಓದಿ: ಗಂಡನ ಮನೆಗಳ್ಳತನಕ್ಕೆ ಪತ್ನಿ ಸಾಥ್​: ಬಂದ ಹಣದಲ್ಲಿ ಗೋವಾದಲ್ಲಿ ಶೋಕಿ; ಸಿಕ್ಕಿಬಿದ್ದ ದಂಪತಿ

ಗೋವರ್ಧನ್ ಹೋಟೆಲ್ ಮಾಲೀಕ ಗಣೇಶ್​ ನಾಯ್ಕ್ ಹಾಗೂ ವಾಚ್‌ಮನ್ ಗಣೇಶ್​ ಗುರಕಾರಿಂದ ಭಿಕ್ಷಕ ದಂಪತಿ ಮೇಲೆ ಹಲ್ಲೆ ಮಾಡಲಾಗಿದೆ. ಹಲ್ಲೆಯಿಂದ ನಡು ರಸ್ತೆಯಲ್ಲೇ ರಕ್ತಸಿಕ್ತವಾಗಿ ಬಿದ್ದಿದ್ದ ದಂಪತಿಯನ್ನ ಪೊಲೀಸರು ಸರ್ಕಾರಿ ಆಸ್ಪತ್ರೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಇತ್ತ ಹೋಟೆಲ್ ಮಾಲೀಕರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮನೆಯಲ್ಲಿ ನಾಡಬಾಂಬ್​ ಸ್ಫೋಟ

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಕಾಳಗಿನಕೊಪ್ಪ ಗ್ರಾಮದಲ್ಲಿ ನಾಡಬಾಂಬ್ ಸ್ಫೋಟಗೊಂಡ ಘಟನೆ ನಡೆದಿದೆ. ವಸಂತ ಕೊರವರ ಎಂಬುವರ ಮನೆಯಲ್ಲಿ ಈ ಸ್ಫೋಟ ಸಂಭವಿಸಿದೆ. ನಾಡಬಾಂಬ್ ಸ್ಫೋಟಗೊಳ್ಳುತ್ತಿದ್ದಂತೆ ಮನೆಯಲ್ಲಿದ್ದವರು ಪರಾರಿ ಆಗಿದ್ದು, ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಇದನ್ನೂ ಓದಿ: ವಿಚಾರಣೆಗೆ ಕರೆದು ಪೊಲೀಸರಿಂದ ಹಲ್ಲೆ ಆರೋಪ: ಠಾಣೆಯಲ್ಲೇ ವೃದ್ಧ ಸಾವು

ಇನ್ನು ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ಹಲವು ಮನೆಗಳಿಗೆ ಹಾನಿಯಾಗಿದೆ. ಘಟನೆ ನಡೆದ ಸ್ಥಳಕ್ಕೆ ಹಳಿಯಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಕುರಿತು ಹಳಿಯಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *