Headlines

‘ಅಮೃತಧಾರೆ’: ಭೂಮಿಕಾಗೆ ಈಗ ಕ್ಯಾನ್ಸರ್​; ಇದರಲ್ಲಿದೆ ಬೇರೆ ಟ್ವಿಸ್ಟ್? – Kannada News | Amruthadhare Shocking Twist: Bhoomika Diagnosed with Breast Cancer, Viewers Suspect Shakuntala Plot

ಧಾರಾವಾಹಿಯ ಕಥಾನಾಯಕಿ ಭೂಮಿಕಾ ಮತ್ತು ಗೌತಮ್ ಇಬ್ಬರೂ ಒಬ್ಬರನ್ನೊಬ್ಬರು ಅತಿಯಾಗಿ ಹಚ್ಚಿಕೊಂಡು, ಸುಂದರವಾದ ಸಂಸಾರ ನಡೆಸುತ್ತಿದ್ದರು. ಪ್ರೇಕ್ಷಕರಿಗೂ ಈ ಜೋಡಿ ಅಚ್ಚುಮೆಚ್ಚಾಗಿತ್ತು. ಆದರೆ, ಈಗ ಭೂಮಿಕಾಗೆ ಸ್ತನ ಕ್ಯಾನ್ಸರ್ ಇರುವುದು ದೃಢಪಟ್ಟಿದ್ದು, ಈ ಶಾಕಿಂಗ್ ನ್ಯೂಸ್ ಇಡೀ ಕಥೆಯ ದಿಕ್ಕನ್ನೇ ಬದಲಿಸಿದೆ. ಇದರ ಹಿಂದೆ ಶಕುಂತಲಾಳ ಗಿಮಿಕ್ ಕೂಡ ಇರಬಹದು.

ಪ್ರೇಕ್ಷಕರಲ್ಲಿ ಮೂಡಿದ ಅಸಮಾಧಾನ ಮತ್ತು ಆತಂಕ

ಈ ಟ್ವಿಸ್ಟ್ ಪ್ರೇಕ್ಷಕರಿಗೆ ಮತ್ತು ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸದಾ ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಭೂಮಿಕಾಗೆ ಇಂತಹ ಕಾಯಿಲೆ ಬರಬಾರದಿತ್ತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಫ್ಯಾನ್ಸ್ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ನೆಮ್ಮದಿಯಾಗಿದ್ದ ಸಂಸಾರದಲ್ಲಿ ಮತ್ತೆ ಯಾಕೆ ಇಂತಹ ದುಃಖದ ಸಂಗತಿ ತರಬೇಕಿತ್ತು ಎನ್ನುವುದು ವೀಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ.

ಇದು ಶಾಕುಂತಲಾದೇವಿ ಹೊಸ ಪ್ಲ್ಯಾನ್ ಇರಬಹುದೇ?

ವೀಕ್ಷಕರಲ್ಲಿ ಈಗ ಮತ್ತೊಂದು ದೊಡ್ಡ ಅನುಮಾನ ಶುರುವಾಗಿದೆ. ಗೌತಮ್ ಮಲತಾಯಿ ಶಾಕುಂತಲಾದೇವಿ ಮೊದಲಿನಿಂದಲೂ ಭೂಮಿಕಾ ಮತ್ತು ಗೌತಮ್ ಒಂದಾಗುವುದನ್ನು ಇಷ್ಟಪಟ್ಟವಳಲ್ಲ. ಇತ್ತೀಚೆಗೆ ಅವಳು ಒಳ್ಳೆಯವಳಂತೆ ನಟಿಸುತ್ತಿದ್ದರೂ, ಈಗ ಅವಳ ಅಸಲಿ ಮುಖ ಮತ್ತೆ ಬಯಲಾಗಿದೆ. ಭೂಮಿಕಾಗೆ ನಿಜವಾಗಿಯೂ ಕ್ಯಾನ್ಸರ್ ಇಲ್ಲದಿದ್ದರೂ, ವೈದ್ಯರೊಂದಿಗೆ ಕೈಜೋಡಿಸಿ ಶಾಕುಂತಲಾ ಈ ಸುಳ್ಳು ವರದಿಯನ್ನು ಸೃಷ್ಟಿಸಿರಬಹುದು ಎಂಬ ಬಲವಾದ ಅನುಮಾನ ವೀಕ್ಷಕರಲ್ಲಿದೆ.

ಇದನ್ನೂ ಓದಿ: ಅಮೃತಧಾರೆ: ಕೊನೆಗೂ ಬಯಲಾಯ್ತು ಶಾಕುಂತಲಾ ಅಸಲಿ ಮುಖ; ವೀಕ್ಷಕರಿಗೆ ನಿರಾಸೆ

ಭೂಮಿಕಾ ಮಾನಸಿಕವಾಗಿ ಕುಗ್ಗಿ, ಗೌತಮ್‌ನಿಂದ ದೂರಾಗಲಿ ಎಂದೇ ಈ ಪ್ಲ್ಯಾನ್ ಮಾಡಿರಬಹುದು ಎಂದು ಊಹಿಸಲಾಗುತ್ತಿದೆ. ಭೂಮಿಕಾ ಈ ದೊಡ್ಡ ಸವಾಲನ್ನು ಹೇಗೆ ಎದುರಿಸುತ್ತಾಳೆ? ಈ ಕಠಿಣ ಪರಿಸ್ಥಿತಿಯಲ್ಲಿ ಗೌತಮ್ ಅವಳಿಗೆ ಹೇಗೆ ಬೆಂಬಲವಾಗಿ ನಿಲ್ಲುತ್ತಾನೆ? ನಿಜವಾಗಿಯೂ ಇದು ಶಾಕುಂತಲಾ ಮಾಡಿದ ತಂತ್ರವೇ ಅಥವಾ ವಿಧಿಯ ಆಟವೇ ಎಂಬುದು ಮುಂದಿನ ಸಂಚಿಕೆಗಳಲ್ಲಿ ತಿಳಿಯಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:15 am, Sat, 11 July 26

Source link

Leave a Reply

Your email address will not be published. Required fields are marked *