Headlines

ಅಮೆರಿಕದಲ್ಲಿ ಜನವರಿಯಲ್ಲಿ ಅತಿಹೆಚ್ಚು ಉದ್ಯೋಗನಷ್ಟ; ಗಂಭೀರ ಸಮಸ್ಯೆಯ ಮುನ್ಸೂಚನೆಯಾ? – Kannada News | Number of US job cuts in January rise to over lakh, highest since 2009, multiple data suggest deeper crisis

ವಾಷಿಂಗ್ಟನ್, ಫೆಬ್ರುವರಿ 6: ಅಮೆರಿಕದಲ್ಲಿ ನಿರುದ್ಯೋಗ ಪರಿಸ್ಥಿತಿ (US unemployment) ಆತಂಕಕಾರಿ ಮಟ್ಟ ತಲುಪಿರುವಂತಿದೆ. ಆರ್ಥಿಕ ತಜ್ಞರು ನಿರೀಕ್ಷಿಸಿಸುದಕ್ಕಿಂತಲೂ ಹೆಚ್ಚು ಕಳವಳಕಾರಿಯಾಗಿದೆ ಅಲ್ಲಿಯ ಉದ್ಯೋಗನಷ್ಟದ ತೀವ್ರತೆ ಎಂದು ಹೇಳಲಾಗುತ್ತಿದೆ. ಚಾಲೆಂಜರ್, ಗ್ರೇ ಅಂಡ್ ಕ್ರಿಸ್ಮಸ್ (ಸಿಜಿಸಿ) ಎನ್ನುವ ಎಂಪ್ಲಾಯ್ಮೆಂಟ್ ಸರ್ವಿಸ್ ಕಂಪನಿ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಜನವರಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಉದ್ಯೋಗ ಕಡಿತ ಮಾಡಲಾಗಿದೆಯಂತೆ. ಇದು 2009ರ ನಂತರ ಯಾವುದೇ ಜನವರಿ ತಿಂಗಳಲ್ಲಿ ಅಮೆರಿಕದಲ್ಲಿ ಕಂಡ ಅತಿಹೆಚ್ಚು ಉದ್ಯೋಗ ಕಡಿತದ ಸಂಖ್ಯೆ ಎನ್ನಲಾಗಿದೆ.

ಚಾಲೆಂಜರ್ ರಿಪೋರ್ಟ್ ಪ್ರಕಾರ 2026ರ ಜನವರಿಯಲ್ಲಿ 1,08,435 ಉದ್ಯೋಗಕಡಿತ ಆಗಿದೆ. ಅಮೆರಿಕದ ಕಾರ್ಮಿಕ ಕ್ಷೇತ್ರ ಈ ಹಿಂದೆ ಮಾಡಿದ್ದ ಅಂದಾಜಿಗಿಂತಲೂ ಹೆಚ್ಚು ದುರ್ಬಲ ಸ್ಥಿತಿಯಲ್ಲಿರುವುದರ ಸೂಚಕ ಇದು ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಎಂಪ್ಲಾಯ್ಮೆಂಟ್ ಸರ್ವಿಸಸ್ ಕಂಪನಿಯ ಈ ವರದಿ ಮಾತ್ರವಲ್ಲ, ಸರ್ಕಾರದ ಲೇಬರ್ ಸ್ಟಾಟಿಸ್ಟಿಕ್ಸ್ ಬ್ಯೂರೋ ಬಿಡುಗಡೆ ಮಾಡಿದ ದತ್ತಾಂಶವೂ ಕೂಡ ಇಂಥದ್ದೇ ಸ್ಥಿತಿಯತ್ತ ಬೊಟ್ಟು ಮಾಡಿದೆ.

ಇದನ್ನೂ ಓದಿ: ರಿಪೋ ಬಡ್ಡಿದರ ಶೇ. 5.25ರಲ್ಲಿ ಮುಂದುವರಿಸಿದ ಆರ್​ಬಿಐ

ಲೇಬರ್ ಡಿಪಾರ್ಟ್ಮೆಂಟ್​ನ ಡಿಸೆಂಬರ್ ಡಾಟಾ

ಅಮೆರಿಕದ ಬ್ಯೂರೋ ಆಫ್ ಲೇಬರ್ ಸ್ಟಾಟಿಸ್ಟಿಕ್ಸ್ ಬಿಡುಗಡೆ ಮಾಡಿದ ಮತ್ತೊಂದು ದತ್ತಾಂಶದ ಪ್ರಕಾರ ಡಿಸೆಂಬರ್ ತಿಂಗಳಲ್ಲಿ ಜಾಬ್ ಓಪನಿಂಗ್ಸ್ 65 ಲಕ್ಷಕ್ಕೆ ಇಳಿಕೆ ಆಗಿದೆ. ನವೆಂಬರ್​ನಲ್ಲಿ ಇದು 69 ಲಕ್ಷ ಇತ್ತು. ಡಿಸೆಂಬರ್​ನಲ್ಲಿ ಜಾಬ್ ಓಪನಿಂಗ್ಸ್ ಅಥವಾ ಹೊಸ ಉದ್ಯೋಗಾವಕಾಶ ಪ್ರಮಾಣದಲ್ಲಿ 4 ಲಕ್ಷ ಕಡಿಮೆ ಆಗಿದೆ. 2020ರ ನಂತರ ಇದು ಅತ್ಯಂತ ಕಡಿಮೆ ಮಟ್ಟದ ಜಾಬ್ ಓಪನಿಂಗ್ಸ್ ಎಂದು ಹೇಳಲಾಗುತ್ತಿದೆ.

ಎಡಿಪಿ ಎನ್ನುವ ಖಾಸಗಿ ಎಚ್​ಆರ್ ಸರ್ವಿಸ್ ಕಂಪನಿ ಬಿಡುಗಡೆ ಮಾಡಿದ ಮತ್ತೊಂದು ದತ್ತಾಂಶ ಕೂಡ ಅಮೆರಿಕದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಿನ ಮಟ್ಟದಲ್ಲಿರುವುದನ್ನು ಸೂಚಿಸಿದೆ. ಎಡಿಪಿ ಬಿಡುಗಡೆ ಮಾಡಿದ ಡಾಟಾ ಪ್ರಕಾರ, ಖಾಸಗಿ ವಲಯದ ಕಂಪನಿಗಳು ಜನವರಿಯಲ್ಲಿ 22,000 ನೇಮಕಾತಿ ಮಾತ್ರ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ವಾಣಿಜ್ಯಾತ್ಮಕವಾಗಿ ಲಾಭವಿದ್ದರೆ ವೆನೆಜುವೆಲಾದಿಂದಲೂ ತೈಲ ಪಡೆಯುತ್ತೇವೆ: ಭಾರತ ಸರ್ಕಾರದ ಹೇಳಿಕೆ

ಹಾಗೆಯೇ, ಮತ್ತೊಂದು ದತ್ತಾಂಶದ ಪ್ರಕಾರ ಜನವರಿಯಲ್ಲಿ ನಿರುದ್ಯೋಗ ವಿಮೆಗೆ ಅರ್ಜಿ ಸಲ್ಲಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಇವೆಲ್ಲವೂ ಕೂಡ ಅಮೆರಿಕದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚು ಗಂಭೀರ ಸ್ಥಿತಿಗೆ ಜಾರುವ ಲಕ್ಷಣಗಳನ್ನು ಸೂಚಿಸುತ್ತಿವೆ. ಆದರೆ, ಈ ದತ್ತಾಂಶಗಳು ನಿರುದ್ಯೋಗ ಹೆಚ್ಚುತ್ತಿರುವುದನ್ನು ಸಂಕೇತಿಸಿದರೆ, ಡಿಸೆಂಬರ್ ತಿಂಗಳ ನಿರುದ್ಯೋಗ ದರ ಶೇ. 4.4ರಷ್ಟು ಮಾತ್ರವೇ ಇದೆ. ಇದು ಕಳವಳಕಾರಿ ಎಂದು ಹೇಳುವಷ್ಟು ದೊಡ್ಡ ಮಟ್ಟದ ನಿರುದ್ಯೋಗ ಸಮಸ್ಯೆಯಲ್ಲ. ಆದರೆ, ಜನವರಿಯಿಂದ ಅಮೆರಿಕದಲ್ಲಿ ನಿರುದ್ಯೋಗ ದರ ಏರಿಕೆಯ ಟ್ರೆಂಡ್​ಗೆ ಹೋಗುತ್ತಾ ಕಾದು ನೋಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *