ಬೆಂಗಳೂರು, ಜುಲೈ 16: ಅಯೋಧ್ಯೆ ರಾಮಮಂದಿರ ಹುಂಡಿ ಅವ್ಯವಹಾರದ ಬೆನ್ನಲ್ಲೇ ಅಲರ್ಟ್ ಆಗಿರುವ ರಾಜ್ಯ ಸರ್ಕಾರವು ರಾಜ್ಯದ ದೇವಾಲಯಗಳಲ್ಲಿ ಭದ್ರತೆಯನ್ನು ಹೆಚ್ಚಿಸಲು ನಿರ್ಧರಿಸಿದೆ. ರಾಜ್ಯದ ಎಲ್ಲಾ ಮುಜರಾಯಿ ದೇವಾಲಯಗಳಲ್ಲಿನ ಕಾಣಿಕೆ ಹುಂಡಿಗಳಿಗೆ ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಈ ಕುರಿತಾಗಿ ಡಿಸಿಎಂ ಜಿ. ಪರಮೇಶ್ವರ್ ಮಾತನಾಡಿದ್ದು, ‘‘ರಾಜ್ಯದಲ್ಲಿ 39 ಸಾವಿರ ದೇವಸ್ಥಾನಗಳು ಮುಜರಾಯಿ ಅಡಿಯಲ್ಲಿವೆ. ಮುಜರಾಯಿಗೆ ಸೇರದ ದೇವಸ್ಥಾನಗಳೂ ಇವೆ. ಎ ದರ್ಜೆಯ ದೇವಸ್ಥಾನಕ್ಕೆ ಸಾಕಷ್ಟು ಹಣ ಬರುತ್ತೆ. ಹುಂಡಿ ಇತರೆ ಸ್ಥಳಕ್ಕೆ ಸಿಸಿಟಿಸಿ ಹಾಕಿ ಕೇಂದ್ರೀಕೃತ ಸರ್ವರ್ ಅಳವಡಿಸಬೇಕು. ಕೇಂದ್ರ ಸ್ಥಾನದಿಂದಲೇ ಮಾನಿಟರ್ ಮಾಡಬೇಕು ಎಂದು ಆದೇಶ ಮಾಡಿದ್ದೇವೆ. ದೇವಸ್ಥಾನದ ಹಣವನ್ನು ಆ ದೇವಸ್ಥಾನಕ್ಕೆ ಖರ್ಚು ಮಾಡಬೇಕು. ಅದಕ್ಕಾಗಿ ಕಾರ್ಯಕ್ರಮ ಹಾಕಿಕೊಳ್ಳುತ್ತೇನೆ. 10% ಹಣವನ್ನು ಸಿ ದರ್ಜೆಯ ದೇವಸ್ಥಾನಕ್ಕೆ ಕೊಡಬಹುದು, ಅದು ಬಿಟ್ಟರೆ ಆ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಲ್ಲ’’ ಎಂದು ಹೇಳಿದ್ದಾರೆ.
ವರದಿ: ಈರಣ್ಣ ಬಸವ
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.