Headlines

ಅಲ್ಪ ಹೂಡಿಕೆ; ಮೆಚ್ಯೂರಿಟಿಗೆ 35 ಲಕ್ಷ ರೂವರೆಗೆ ಗಳಿಕೆ; ಇದು ಪೋಸ್ಟ್ ಆಫೀಸ್ ಆರ್​ಪಿಎಲ್​ಐ ಯೋಜನೆಯ ಕೊಡುಗೆ – Kannada News | Post Office Gram Suraksha Yojana gives long term wealth creation alongwith life insurance cover

ಪೋಸ್ಟ್ ಆಫೀಸ್​ನಲ್ಲಿ (Post Office) ಹಲವು ಸ್ಕೀಮ್​ಗಳಿವೆ, ಹಲವು ಹೂಡಿಕೆ ಆಯ್ಕೆಗಳಿವೆ. ಪೋಸ್ಟ್ ಆಫೀಸ್​ಗಳು ಜನರ ವಿಶ್ವಾಸವನ್ನು ಈಗಲೂ ಉಳಿಸಿಕೊಂಡು ಬರುತ್ತಿದೆ. ಅಂಚೆ ಕಚೇರಿ ಸ್ಕೀಮ್​ಗಳನ್ನು ಪಡೆಯಲು ಜನರು ಈಗಲೂ ಕೂಡ ಕ್ಯೂ ನಿಂತಿರುವುದನ್ನು ಕಾಣಬಹುದು. ಎಲ್ಲಾ ವಯೋಮಾನದವರಿಗೆ ಸೂಕ್ತವಾಗುವ ಯೋಜನೆಗಳಿವೆ. ಸ್ಮಾಲ್ ಸೇವಿಂಗ್ಸ್ ಸ್ಕೀಮ್​ಗಳಿಗೆ (Small Savings Schemes) ಹೆಸರುವಾಸಿಯಾದ ಅಂಚೆ ಕಚೇರಿಯಲ್ಲಿ ಸೇವಿಂಗ್ಸ್ ಕಮ್ ಇನ್ಷೂರೆನ್ಸ್ ಯೋಜನೆಯೂ ಇದೆ. ಅದು ಗ್ರಾಮ್ ಸುರಕ್ಷಾ ಯೋಜನೆ (Gram Suraksha Yojana) .

ಏನಿದು ಗ್ರಾಮ ಸುರಕ್ಷಾ ಯೋಜನೆ?

ಬಹಳ ಕಡಿಮೆ ಹೂಡಿಕೆಯ ಅಗತ್ಯ ಇರುವ ಈ ಯೋಜನೆಯು ಜನರಿಗೆ ಇನ್ಷೂರೆನ್ಸ್ ಮತ್ತು ದೀರ್ಘಾವಧಿ ಲಾಭದ ಅನುಕೂಲಗಳನ್ನು ನೀಡುತ್ತದೆ. ಗ್ರಾಮೀಣ ಪೋಸ್ಟಲ್ ಲೈಫ್ ಇನ್ಷೂರೆನ್ಸ್ ಸ್ಕೀಮ್ ಅಡಿಯಲ್ಲಿ ಗ್ರಾಮ್ ಸುರಕ್ಷಾ ಯೋಜನೆಯನ್ನು ಆಫರ್ ಮಾಡಲಾಗುತ್ತದೆ. ಮಧ್ಯಮ ವರ್ಗದವರಿಗೆ ದೀರ್ಘಾವಧಿಯಲ್ಲಿ ಹಣಕಾಸು ಸುರಕ್ಷತೆ ಒದಗಿಸಲು ಈ ಯೋಜನೆ ಸಹಾಯವಾಗಬಲ್ಲುದು.

ಇದನ್ನೂ ಓದಿ: ಭಾರತದಲ್ಲಿ ಹಣ ಇದೆ, ಆದರೆ, ‘ಅದು’ ಇಲ್ಲವಂತೆ; ಅಮೆರಿಕಕ್ಕೆ ವಲಸೆ ಹೋದ ಬೆಂಗಳೂರಿನ ಸ್ಟಾರ್ಟಪ್ ಸಂಸ್ಥಾಪಕಿ

ಯೋಜನೆಗೆ ಅರ್ಹತೆ, ವಯಸ್ಸು ಇತ್ಯಾದಿ ಮಾಹಿತಿ

ಪೋಸ್ಟ್ ಆಫೀಸ್​ನ ಗ್ರಾಮ್ ಸುರಕ್ಷಾ ಯೋಜನೆಯಲ್ಲಿ ಕೆಲ ಅರ್ಹತಾ ನಿಯಮಗಳಿವೆ. ಈ ಸ್ಕೀಮ್ ಪಡೆಯಲು ಕನಿಷ್ಠ ವಯಸ್ಸು 19 ವರ್ಷ ಆಗಿರಬೇಕು. ಗರಿಷ್ಠ ವಯಸ್ಸು 55 ವರ್ಷ.

ಇದರಲ್ಲಿ ಕನಿಷ್ಠ ಖಾತ್ರಿ ಮೊತ್ತದ ಅಥವಾ ಮಿನಿಮಮ್ ಅಶೂರ್ಡ್ ಹಣ 10,000 ರೂ ಇದೆ. ಹೀಗಾಗಿ, ಕಡಿಮೆ ಆದಾಯದ ಕುಟುಂಬಗಳೂ ಕೂಡ ಯೋಜನೆಯನ್ನು ಪಡೆಯಲು ಸಾಧ್ಯವಾಗಬಹುದು. ಈ ಯೋಜನೆಯಲ್ಲಿ 10 ಲಕ್ಷ ರೂವರೆಗೆ ಲೈಫ್ ಇನ್ಷೂರೆನ್ಸ್ ಕವರೇಜ್ ಅನ್ನು ಪಡೆಯುವ ಅವಕಾಶ ಇರುತ್ತದೆ. 10 ಲಕ್ಷ ರೂವರೆಗೆ ಅಶೂರ್ಡ್ ಅಮೌಂಟ್ ಇದೆ.

ಇದನ್ನೂ ಓದಿ: ಆರ್ಥಿಕತೆಗಳನ್ನು ನುಂಗುವ ಎಐ ಮಾಡಲ್​ಗಳು: ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲ ಕಳವಳ

35 ಲಕ್ಷ ರೂ ಹಣ ಹೇಗೆ?

ನೀವು ಮಿನಿಮಮ್ ಅಶೂರ್ಡ್ ಮೊತ್ತವಾಗಿ 10 ಲಕ್ಷ ರೂ ಆಯ್ಕೆ ಮಾಡಿಕೊಂಡರೆ, ಮೆಚ್ಯೂರಿಟಿ ವೇಳೆ 35 ಲಕ್ಷ ರೂ ಪಡೆಯಬಹುದು. ತಿಂಗಳಿಗೆ ನೀವು ಕಟ್ಟುವುದು 1,400 ರೂಗಿಂತ ಕಡಿಮೆ ಇರುತ್ತದೆ. ಆದರೆ, 19ರ ವಯಸ್ಸಿನಲ್ಲಿ ಹೂಡಿಕೆ ಆರಂಭಿಸಿ 60ರ ವಯಸ್ಸಿನವರೆಗೂ ಕಟ್ಟಬೇಕು. 80ರ ವಯಸ್ಸಿನಲ್ಲಿ ಮೆಚ್ಯೂರ್ ಆಗಿ 35 ಲಕ್ಷ ರೂ ಪೇಔಟ್ ಸಿಗುತ್ತದೆ. ಅಷ್ಟು ವರ್ಷ ನೀವು ಕಟ್ಟುವ ಪ್ರೀಮಿಯಮ್ ಸುಮಾರು 6-7 ಲಕ್ಷ ರೂ ಇರುತ್ತದೆ. ಅಲ್ಲಿಯವರೆಗೆ ಇನ್ಷೂರೆನ್ಸ್ ಕವರೇಜ್ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *