ಆಂಧ್ರಪ್ರದೇಶ: ರೈಲಿನಲ್ಲಿ ಮುದ್ದಾದ ಮಗುವಿಗೆ ಜನ್ಮ ನೀಡಿದ ಮಹಿಳೆ, 8 ತಿಂಗಳಿಗೆ ಹೆರಿಗೆ

ಆಂಧ್ರಪ್ರದೇಶ: ರೈಲಿನಲ್ಲಿ ಮುದ್ದಾದ ಮಗುವಿಗೆ ಜನ್ಮ ನೀಡಿದ ಮಹಿಳೆ, 8 ತಿಂಗಳಿಗೆ ಹೆರಿಗೆ

ವಿಜಯವಾಡ, ಏಪ್ರಿಲ್ 08: ಮಹಿಳೆಯೊಬ್ಬರು ಆಂಧ್ರಪ್ರದೇಶದ ರೈಲಿನಲ್ಲಿ ಮಗು(Baby)ವಿಗೆ ಜನ್ಮ ನೀಡಿರುವ ಘಟನೆ ನಡೆದಿದೆ. ರೈಲ್ವೆ ಸಿಬ್ಬಂದಿ ಸಹಾಯಕ್ಕೆ ಬಂದ ಪರಿಣಾಮ ಹೆರಿಗೆ ಸುಸೂತ್ರವಾಗಿ ಆಗಿದ್ದು, ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಎಂಟು ತಿಂಗಳ ಗರ್ಭಿಣಿಯೊಬ್ಬರು ರೈಲು ಹತ್ತಿದರು. ಹೆರಿಗೆಗೆ ಇನ್ನೂ ಒಂದು ತಿಂಗಳು ಬಾಕಿ ಇದೆ ಎಂಬ ವಿಶ್ವಾಸ ಮತ್ತು ಅವರ ಕುಟುಂಬ ಸದಸ್ಯರು ತಮ್ಮ ಪಕ್ಕದಲ್ಲಿದ್ದಾರೆ ಎಂಬ ಧೈರ್ಯದೊಂದಿಗೆ, ಅವರು ರೈಲು ಪ್ರಯಾಣಕ್ಕೆ ಒಪ್ಪಿಕೊಂಡಿದ್ದರು. ಆದರೆ ಅಂದುಕೊಂಡಂತೆ ಎಲ್ಲವೂ ನಡೆಯದು ಎಂಬುದಕ್ಕೆ ಇದೂ ಒಂದು ನಿದರ್ಶನ.

ನಿಧಾನವಾಗಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಕುಟುಂಬದವರಿಗೂ ಭಯ ಶುರುವಾಗಿತ್ತು. ಬಳಿಕ ರೈಲಿನ ಟಿಟಿಗೆ ಕರೆ ಮಾಡಲಾಯಿತು.ಇಶಾದ್ ಮತ್ತು ತರನ್ನಮ್ ಖಾತುನ್ ಜಾರ್ಖಂಡ್ ಮೂಲದವರು. ಏಪ್ರಿಲ್ 5 ರಂದು, ಧನಬಾದ್ ಮೂಲದ ಗರ್ಭಿಣಿ, ಅವರ ಕುಟುಂಬವು ರೈಲು ಸಂಖ್ಯೆ 13352 (ಆಲಪ್ಪುಳ-ಧನಬಾದ್ ಎಕ್ಸ್‌ಪ್ರೆಸ್) ನ ಬಿ 1 ಕೋಚ್‌ನಲ್ಲಿ ಚೆನ್ನೈನಿಂದ ಧನಬಾದ್‌ಗೆ ಪ್ರಯಾಣಿಸುತ್ತಿದ್ದಾಗ ರೈಲು ಅನ್ನಾವರಂ ನಿಲ್ದಾಣವನ್ನು ದಾಟಿದ ಸ್ವಲ್ಪ ಸಮಯದ ನಂತರ ಹೆರಿಗೆ ನೋವು ಕಾಣಿಸಿಕೊಂಡಿತ್ತು.

ಅವರ ಕುಟುಂಬ ಸದಸ್ಯರು ತಕ್ಷಣ ಕರ್ತವ್ಯದಲ್ಲಿದ್ದ ಟಿಕೆಟ್ ಪರಿಶೀಲನಾ ಸಿಬ್ಬಂದಿಯನ್ನು ಸಹಾಯಕ್ಕಾಗಿ ಸಂಪರ್ಕಿಸಿದರು. ಪರಿಸ್ಥಿತಿಗೆ ತ್ವರಿತವಾಗಿ ಸ್ಪಂದಿಸಿದ ಜಿ. ಜ್ಯೋತಿ ಗರ್ಭಿಣಿಯ ಸಹಾಯಕ್ಕೆ ಬಂದರು. ಪರಿಸ್ಥಿತಿಯ ತುರ್ತುಸ್ಥಿತಿಯನ್ನು ಅರ್ಥಮಾಡಿಕೊಂಡು, ರೈಲಿಗೆ ಎಲಮಂಚಿಲಿ ನಿಲ್ದಾಣದಲ್ಲಿ ವಿಶೇಷ ನಿಲುಗಡೆ ಕಲ್ಪಿಸಲಾಯಿತು. ಆಂಬ್ಯುಲೆನ್ಸ್​ಗೆ ಕೂಡ ಕರೆ ಮಾಡಿದ್ದರು.

ಮತ್ತಷ್ಟು ಓದಿ: ಬಿಸಿಲಲ್ಲಿ ಕುಸಿದುಬಿದ್ದ ತಾಯಿ, ಯಾರ್ಯಾರನ್ನೋ ಬೇಡಿ ನೀರು ತಂದ ಮಗ, ಜನ ವಿಡಿಯೋ ಮಾಡಿದ್ರು ಸಹಾಯಕ್ಕೆ ಬರ್ಲಿಲ್ಲ

ತಾಯಿ ಮತ್ತು ನವಜಾತ ಶಿಶುವನ್ನು 108 ಆಂಬ್ಯುಲೆನ್ಸ್ ಮೂಲಕ ಎಲಮಂಚಿಲಿಯ ಸರ್ಕಾರಿ ಆಸ್ಪತ್ರೆಗೆ ಸುರಕ್ಷಿತವಾಗಿ ಕರೆದುಕೊಂಡು ಹೋಗಲಾಯಿತು. ತಾಯಿ ಮತ್ತು ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆ ಮತ್ತು ಆರೋಗ್ಯವಾಗಿದ್ದಾರೆ ಎಂದು ವರದಿಯಾಗಿದೆ. ಬೊಕಾರೊ ಎಕ್ಸ್‌ಪ್ರೆಸ್ ಅನ್ನು ಸುಮಾರು 40 ನಿಮಿಷಗಳ ಕಾಲ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು.

ಟಿಟಿಇ ಜೊತೆಗೆ, ರೈಲ್ವೆ ಸಿಬ್ಬಂದಿ ಮತ್ತು ರೈಲಿನೊಳಗಿನ ಪುರುಷ ಪ್ರಯಾಣಿಕರನ್ನು ರೈಲು ಕೋಚ್‌ನಿಂದ ಹೊರಗೆ ಕಳುಹಿಸಲಾಯಿತು, ಇದರಿಂದ ಬಿ1 ಕೋಚ್‌ನಲ್ಲಿರುವ ಮಹಿಳೆಗೆ ಸಾಮಾನ್ಯ ಹೆರಿಗೆಯಾಗುವಂತೆ ನೋಡಿಕೊಳ್ಳಲಾಯಿತು. ರೈಲಿನಲ್ಲಿರುವ ಸೌಕರ್ಯ, ಸುರಕ್ಷತೆ ಮತ್ತು ಕಡಿಮೆ ವೆಚ್ಚ ಎನ್ನುವ ಕಾರಣಕ್ಕೆ ಗರ್ಭಿಣಿಯರಿಂದ ಹಿಡಿದು ವೃದ್ಧರವೆಗೂ ಎಲ್ಲರೂ ರೈಲು ಪ್ರಯಾಣವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.

ಈ ರೈಲು ಪ್ರಯಾಣ ಎಷ್ಟು ಸುರಕ್ಷಿತವೆಂಬುದು ಈ ಘಟನೆಯಿಂದ ಮತ್ತೊಮ್ಮೆ ಸಾಬೀತಾದಂತಾಗಿದೆ. ರೈಲಿನಲ್ಲಿ ಪ್ರಯಾಣಿಸುವಾಗ, ನಾವು ಅನೇಕ ವಿಚಿತ್ರ ಘಟನೆಗಳನ್ನು ನೋಡುತ್ತೇವೆ. ಆದರೆ ಮಾನವೀಯತೆ ತೋರುವ ಘಟನೆಗಳು ಬಹಳ ಅಪರೂಪ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *