Headlines

ಆಗಸ್ಟ್ ಮಾಸಿಕ ರಾಶಿ ಭವಿಷ್ಯ: ಯಾವ ರಾಶಿಗೆ ಧನಲಾಭ, ಯಾರಿಗೆ ಉದ್ಯೋಗದಲ್ಲಿ ಪ್ರಗತಿ? – Kannada News | August 2026 Astrology: Detailed Monthly Forecast for Each Zodiac Sign’s Fortune

​ಆಗಸ್ಟ್​ ತಿಂಗಳಿನಲ್ಲಿ ಕರ್ಕಾಟಕದಲ್ಲಿ ಉಚ್ಚ ಗುರು, ಸಿಂಹದಲ್ಲಿ ಸ್ವಕ್ಷೇತ್ರ ಸೂರ್ಯ ಹಾಗೂ ಬುಧ, ಕನ್ಯಾದಲ್ಲಿ ನೀಚ ಶುಕ್ರ, ಮಿಥುನದಲ್ಲಿ ಮಂಗಳ ಮತ್ತು ಮೀನದಲ್ಲಿ ವಕ್ರ ಶನಿ-ಚಂದ್ರರ ಉಪಸ್ಥಿತಿಯು ೧೨ ರಾಶಿಗಳ ಮೇಲೆಯೂ ವಿಶಿಷ್ಟ ಪ್ರಭಾವ ಬೀರಲಿದೆ.

​ಮೇಷ ರಾಶಿ :

​ನಾಲ್ಕನೇ ಮನೆಯಲ್ಲಿ ಉಚ್ಚ ಗುರುವಿರುವುದರಿಂದ ಕುಟುಂಬದಲ್ಲಿ ನೆಮ್ಮದಿ, ಆಸ್ತಿ ಅಥವಾ ವಾಹನ ಖರೀದಿ ಯೋಗವಿದೆ. ೫ನೇ ಮನೆಯ ಸೂರ್ಯ-ಬುಧರ ಪ್ರಭಾವದಿಂದ ಶೈಕ್ಷಣಿಕ ಪ್ರಗತಿ ಹಾಗೂ ಮಕ್ಕಳಿಂದ ಶುಭವಾರ್ತೆ ಸಿಗಲಿದೆ. ಕೋಪವನ್ನು ನಿಯಂತ್ರಿಸಿ ಮತ್ತು ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ.

​ವೃಷಭ ರಾಶಿ :

​ಮೂರನೇ ಮನೆಯಲ್ಲಿ ಉಚ್ಚ ಗುರು ನಿಮ್ಮ ಸಾಹಸ ಹಾಗೂ ಧೈರ್ಯವನ್ನು ಹೆಚ್ಚಿಸುತ್ತಾನೆ. ೪ನೇ ಮನೆಯ ಸೂರ್ಯನಿಂದಾಗಿ ಸಮಾಜದಲ್ಲಿ ಗೌರವ ಹೆಚ್ಚಲಿದೆ. ಕಿರು ಪ್ರಯಾಣಗಳು ಲಾಭದಾಯಕವಾಗಿರುತ್ತವೆ. ಸಂಬಂಧಿಕರ ಜೊತೆ ಅನಗತ್ಯ ಮಾತಿನ ಚಕಮಕಿ ಬೇಡ.

​ಮಿಥುನ ರಾಶಿ :

​ಎರಡನೇ ಮನೆಯಲ್ಲಿ ಉಚ್ಚ ಗುರು ನೆಲೆಸಿರುವುದರಿಂದ ಧನಲಾಭ ಹಾಗೂ ಕುಟುಂಬದಲ್ಲಿ ಸುಖ-ಸಂತೋಷ ವೃದ್ಧಿಯಾಗಲಿದೆ. ಮೂರನೇ ಮನೆಯ ಸೂರ್ಯ ಕಾರ್ಯಕ್ಷೇತ್ರದಲ್ಲಿ ಅಪಾರ ಯಶಸ್ಸನ್ನು ತರಲಿದ್ದಾನೆ. ನಿಮ್ಮ ರಾಶಿಯಲ್ಲೇ ಮಂಗಳನಿರುವುದರಿಂದ ಆತುರದ ನಿರ್ಧಾರಗಳನ್ನು ತಡೆಯಿರಿ.

​ಕರ್ಕಾಟಕ ರಾಶಿ :

​ನಿಮ್ಮ ರಾಶಿಯಲ್ಲೇ ಉಚ್ಚ ಗುರುವಿರುವುದರಿಂದ ವ್ಯಕ್ತಿತ್ವ ವಿಕಸನ, ಧಾರ್ಮಿಕ ಚಿಂತನೆ ಹಾಗೂ ಆಂತರಿಕ ಶಾಂತಿ ದೊರೆಯಲಿದೆ. ನೂತನ ಕೆಲಸ-ಕಾರ್ಯಗಳಿಗೆ ಚಾಲನೆ ನೀಡಲು ಶ್ರೇಷ್ಠ ಸಮಯ. ಎರಡನೇ ಮನೆಯಲ್ಲಿ ಕೇತು ಇರುವುದರಿಂದ ಹಣಕಾಸಿನ ವಹಿವಾಟಿನಲ್ಲಿ ಎಚ್ಚರಿಕೆ ವಹಿಸಿ.

​ಸಿಂಹ ರಾಶಿ :

​ನಿಮ್ಮ ರಾಶಿಯಲ್ಲೇ ಸ್ವಕ್ಷೇತ್ರ ಸೂರ್ಯ ಮತ್ತು ಬುಧ ಇರುವುದರಿಂದ ನಾಯಕತ್ವ ಗುಣ, ಅಧಿಕಾರ ಮತ್ತು ಗೌರವ ಲಭಿಸಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಸಿಗಲಿವೆ. ಹನ್ನೆರಡನೇ ಮನೆಯ ಗುರುವಿನಿಂದಾಗಿ ಅನಿರೀಕ್ಷಿತ ಧಾರ್ಮಿಕ ಅಥವಾ ಪ್ರಯಾಣದ ವೆಚ್ಚಗಳು ಹೆಚ್ಚಾಗಬಹುದು.

ಇದನ್ನೂ ಓದಿ: ಆಗಸ್ಟ್ 12 ರಂದು ಸೂರ್ಯಗ್ರಹಣ; ಈ 3 ರಾಶಿಯವರಿಗೆ ಒಲಿಯಲಿದೆ ಅಪಾರ ಅದೃಷ್ಟ!

​ಕನ್ಯಾ ರಾಶಿ :

​ಹನ್ನೊಂದನೇ ಮನೆಯಲ್ಲಿ ಉಚ್ಚ ಗುರುವಿರುವುದರಿಂದ ವ್ಯಾಪಾರ-ವ್ಯವಹಾರಗಳಲ್ಲಿ ಅಪಾರ ಲಾಭ ಸಿಗಲಿದೆ. ಹಳೆಯ ಹೂಡಿಕೆಗಳಿಂದ ಶುಭ ಫಲ ನಿರೀಕ್ಷಿಸಬಹುದು. ನಿಮ್ಮ ರಾಶಿಯಲ್ಲಿ ನೀಚ ಶುಕ್ರನಿರುವುದರಿಂದ ವೈಯಕ್ತಿಕ ಸಂಬಂಧಗಳಲ್ಲಿ ತಾಳ್ಮೆ ವಹಿಸುವುದು ಅಗತ್ಯ.

​ತುಲಾ ರಾಶಿ :

​ಹತ್ತನೇ ಮನೆಯಲ್ಲಿ ಉಚ್ಚ ಗುರು ವೃತ್ತಿ ಜೀವನದಲ್ಲಿ ಶ್ರೇಷ್ಠ ಪ್ರಗತಿ ಹಾಗೂ ಬಡ್ತಿ ತಂದುಕೊಡಲಿದ್ದಾನೆ. ಹನ್ನೊಂದನೇ ಮನೆಯ ಸೂರ್ಯನಿಂದಾಗಿ ಹಿರಿಯ ಅಧಿಕಾರಿಗಳಿಂದ ಬೆಂಬಲ ಸಿಗಲಿದೆ. ಖರ್ಚುಗಳ ಮೇಲೆ ನಿಗಾ ಇರಲಿ.

​ವೃಶ್ಚಿಕ ರಾಶಿ :

​ಒಂಭತ್ತನೇ ಮನೆಯಲ್ಲಿ ಉಚ್ಚ ಗುರುವಿರುವುದರಿಂದ ದೈವಾನುಗ್ರಹ, ದೂರದ ಪ್ರಯಾಣ ಹಾಗೂ ಭಾಗ್ಯೋದಯವಾಗಲಿದೆ. ಹತ್ತನೇ ಮನೆಯ ಸೂರ್ಯ ಉದ್ಯೋಗದಲ್ಲಿ ಯಶಸ್ಸು ನೀಡಲಿದ್ದಾನೆ. ತಂದೆಯವರ ಆರೋಗ್ಯದ ಕಡೆ ಗಮನವಿರಲಿ.

​ಧನು ರಾಶಿ :

​ಒಂಭತ್ತನೇ ಮನೆಯಲ್ಲಿ ಸೂರ್ಯ ಸ್ವಕ್ಷೇತ್ರಗತನಾಗಿರುವುದರಿಂದ ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ಎಂಟನೇ ಮನೆಯ ಉಚ್ಚ ಗುರುವಿನಿಂದ ನಿಗೂಢ ಜ್ಞಾನ ಅಥವಾ ಶೋಧನೆಗಳಲ್ಲಿ ಯಶಸ್ಸು ಸಿಗಲಿದೆ. ನಾಲ್ಕನೇ ಮನೆಯಲ್ಲಿ ಶನಿ ಇರುವುದರಿಂದ ಮಾನಸಿಕ ಒತ್ತಡ ನಿರ್ವಹಣೆಗೆ ಧ್ಯಾನ ಮಾಡಿ.

​ಮಕರ ರಾಶಿ :

​ಏಳನೇ ಮನೆಯಲ್ಲಿ ಉಚ್ಚ ಗುರುವಿರುವುದರಿಂದ ದಾಂಪತ್ಯ ಜೀವನ ಮಧುರವಾಗಿರುತ್ತದೆ. ಪಾಲುದಾರಿಕೆ ವ್ಯವಹಾರಗಳಲ್ಲಿ ಲಾಭ ದೊರೆಯಲಿದೆ. ಎಂಟನೇ ಮನೆಯ ಸೂರ್ಯ-ಬುಧರ ಪ್ರಭಾವದಿಂದ ಚಾಲನೆ ಮಾಡುವಾಗ ಮತ್ತು ಆರೋಗ್ಯದ ವಿಚಾರದಲ್ಲಿ ಜಾಗ್ರತೆ ಇರಲಿ.

​ಕುಂಭ ರಾಶಿ :

​ಆರನೇ ಮನೆಯಲ್ಲಿ ಉಚ್ಚ ಗುರುವಿರುವುದರಿಂದ ಶತ್ರುಗಳ ಮೇಲೆ ಜಯ, ಸಾಲಗಳಿಂದ ಮುಕ್ತಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಲಭಿಸಲಿದೆ. ಏಳನೇ ರಾಶಿಯಲ್ಲಿ ಸೂರ್ಯ-ಕೇತು ಇರುವುದರಿಂದ ಜಂಟಿ ವ್ಯವಹಾರ ಹಾಗೂ ದಾಂಪತ್ಯದಲ್ಲಿ ಸಾಮರಸ್ಯ ಕಾಯ್ದುಕೊಳ್ಳಿ.

ಮೀನ ರಾಶಿ :

​ಐದನೇ ಮನೆಯಲ್ಲಿ ಉಚ್ಚ ಗುರುವಿರುವುದರಿಂದ ಬುದ್ಧಿವಂತಿಕೆ, ಜ್ಞಾನಾರ್ಜನೆ ಹಾಗೂ ಮಕ್ಕಳಿಂದ ಅಪಾರ ಸಂತೋಷ ಸಿಗಲಿದೆ. ಆರ್ಥಿಕ ಮೂಲಗಳು ಗಟ್ಟಿಯಾಗಲಿವೆ. ನಿಮ್ಮ ರಾಶಿಯಲ್ಲೇ ಶನಿ-ಚಂದ್ರರಿರುವುದರಿಂದ ಅನಗತ್ಯ ಆತಂಕಕ್ಕೆ ಒಳಗಾಗಬೇಡಿ, ಶಿವಾರಾಧನೆ ಮಾಡಿ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:23 pm, Fri, 31 July 26

Source link

Leave a Reply

Your email address will not be published. Required fields are marked *