ಆಟ ಆಡೋ ವಯಸ್ಸಲ್ಲಿ ಇಡೀ ಸಂಸಾರದ ಜವಾಬ್ದಾರಿ!: ತಂಗಿ-ತಮ್ಮಂದಿರಿಗಾಗಿ ಬಾಲ್ಯವನ್ನೇ ತ್ಯಾಗ ಮಾಡಿದ 9ನೇ ತರಗತಿ ಬಾಲಕಿ

ಕೆಲವರಿಗೆ ಬಾಲ್ಯ ಸವಿಯುವ ಮುನ್ನವೇ ಅನಿವಾರ್ಯವಾಗಿ ದೊಡ್ಡವರಾಗಬೇಕಾದ ಪರಿಸ್ಥಿತಿ ಎದುರಾಗುತ್ತದೆ ಎಂಬ ಮಾತಿಗೆ ಇಲ್ಲೊಂದು ಜೀವಂತ ಸಾಕ್ಷಿಯಿದೆ. ಓದುವ, ಗೆಳೆಯರೊಂದಿಗೆ ಆಟ ಆಡುವ ವಯಸ್ಸಿನಲ್ಲಿಯೇ ವಿಧಿಯ ಕ್ರೂರ ಆಟಕ್ಕೆ ಸಿಲುಕಿ, ತನ್ನ ಮೂವರು ಪುಟ್ಟ ಒಡಹುಟ್ಟಿದವರ (Siblings) ತಾಯಿಯಾಗಿ ಇಡೀ ಕುಟುಂಬವನ್ನು ಮುನ್ನಡೆಸುತ್ತಿದ್ದಾಳೆ 9ನೇ ತರಗತಿಯ ವಿದ್ಯಾರ್ಥಿನಿ ಅಸ್ಮಿತಾ ತಮಾಂಗ್. ತನ್ನ ವಯಸ್ಸನ್ನು ಮೀರಿದ ಜವಾಬ್ದಾರಿಯನ್ನು ಆಕೆ ಹೊತ್ತುಕೊಂಡಿದ್ದಾಳೆ. ಕೇವಲ ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ಅಸ್ಮಿತಾಗೆ ಈಗ ಮನೆಯೇ ಒಂದು ದೊಡ್ಡ ಪಾಠಶಾಲೆ. ಹೆತ್ತವರು ಇಲ್ಲದ ಕಾರಣ ಆಕೆಯ ಹೆಗಲಿಗೆ ಇಡೀ ಮನೆಯ ಜವಾಬ್ದಾರಿ ಬಿದ್ದಿದೆ. ಬೆಳಿಗ್ಗೆ ಎದ್ದ ತಕ್ಷಣ ತನ್ನ ಮೂವರು ಪುಟ್ಟ-ಪುಟ್ಟ ತಂಗಿ-ತಮ್ಮಂದಿರಿಗೆ ಅಡುಗೆ ಮಾಡುವುದು, ಅವರನ್ನು ಶಾಲೆಗೆ ಸಿದ್ಧಪಡಿಸುವುದು, ಮನೆಯ ಕೆಲಸಗಳನ್ನು ಮುಗಿಸುವುದು ಅಸ್ಮಿತಾಳ ದಿನಚರಿ. ಇಷ್ಟೆಲ್ಲಾ ಕಷ್ಟಗಳ ನಡುವೆಯೂ ಆಕೆ ತನ್ನ ಓದನ್ನು ಮಾತ್ರ ಎಲ್ಲೂ ಕೈಬಿಟ್ಟಿಲ್ಲ. ಒಂದು ಕೈಯಲ್ಲಿ ತನ್ನ ಪುಟ್ಟ ತಂಗಿಯನ್ನು ಕೈಯಲ್ಲಿ ಹಿಡಿದು, ಮತ್ತೊಂದು ಕೈಯಲ್ಲಿ ಪುಸ್ತಕ ಹಿಡಿದು ಆಕೆ ಸಾಗುತ್ತಿರುವ ಹಾದಿ ನಿಜಕ್ಕೂ ಶ್ಲಾಘನೀಯ.ಮಕ್ಕಳು ಅಳುತ್ತಾ ಹಠ ಹಿಡಿದರೆ ಕೋಪಗೊಳ್ಳುವ ಪೋಷಕರಿರುವ ಇಂದಿನ ಜಗತ್ತಿನಲ್ಲಿ, ಅಸ್ಮಿತಾ ತನಗಾಗಿ ಏನನ್ನೂ ಕೇಳುತ್ತಿಲ್ಲ. ತನಗೆ ಸಿಗದ ಬಾಲ್ಯ ತನ್ನ ಒಡಹುಟ್ಟಿದವರಿಗಾದರೂ ಸಿಗಲಿ ಎಂಬುದು ಆಕೆಯ ಆಶಯ. ಹಸಿವು, ಬಡತನ ಮತ್ತು ಜವಾಬ್ದಾರಿಯ ನಡುವೆ ಆಕೆಯ ಮುಗ್ಧ ಬಾಲ್ಯ ಎಲ್ಲೋ ಕಳೆದುಹೋಗಿದೆ. ಆಕೆಯ ಕಣ್ಣುಗಳಲ್ಲಿ ಭವಿಷ್ಯದ ಕನಸುಗಳಿಗಿಂತ ಹೆಚ್ಚಾಗಿ, “ನಾಳೆ ನನ್ನ ತಂಗಿ-ತಮ್ಮಂದಿರಿಗೆ ಏನು ಮಾಡಬೇಕು?” ಎಂಬ ಆತಂಕವೇ ಎದ್ದು ಕಾಣುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಾಲಕಿಯ ಹೋರಾಟದ ಕಥೆ ಭಾರಿ ವೈರಲ್ ಆಗುತ್ತಿದ್ದು, “ಈ ಪುಟ್ಟ ಹುಡುಗಿಯ ಧೈರ್ಯದ ಮುಂದೆ ನಮ್ಮ ಕಷ್ಟಗಳೆಲ್ಲಾ ತೃಣ ಸಮಾನ. ಈಕೆಗೆ ಸರ್ಕಾರ ಹಾಗೂ ದಾನಿಗಳು ನೆರವಾಗಬೇಕು” ಎಂದು ನೆಟ್ಟಿಗರು ಭಾವುಕರಾಗಿ ಒತ್ತಾಯಿಸುತ್ತಿದ್ದಾರೆ. ಇನ್ನು ಈ ವಿಡಿಯೋ ನೇಪಾಳದಿಂದ ವೈರಲ್​ ಆಗಿದೆ ಎಂದು ಹೇಳಲಾಗುತ್ತಿದೆ. ಎಕ್ಸ್​​​ನಲ್ಲಿ ಈ ಬಗ್ಗೆ ಭಾರೀ ವೈರಲ್​​ ಆಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *