ಬೆಂಗಳೂರು, ಆಗಸ್ಟ್ 03: ಫಸ್ಟ್ ಲಿಸ್ಟ್ನಲ್ಲಿಯೇ ತಮ್ಮ ಹೆಸರು ಬರುವ ನಿರೀಕ್ಷೆ ಇತ್ತಾದರೂ ಆಡಿಯೋ ರಿಲೀಸ್ ಹಿನ್ನೆಲೆ ಹಿನ್ನಡೆಯಾಗಿದೆ ಎಂದು ಹಿಂದೆಯೇ ಹೇಳಿದ್ದೆ. ಎರಡನೇ ಪಟ್ಟಿಯ ಬಗ್ಗೆ ನಿರೀಕ್ಷೆ ಇತ್ತಾದರೂ ಹೈಕಮಾಂಡ್ ನಿರ್ಧಾರಕ್ಕೆ ಬದ್ಧವಾಗಿದ್ದೆ. 2028ರ ಚುನಾವಣೆಗೆ ಕೆಲಸ ಮಾಡು ಎಂದು ಪಕ್ಷ ಹೇಳಿದ್ದರೂ ತಯಾರಿದ್ದೆ. ಆದರೆ ಪಕ್ಷ ಇವತ್ತು ತನಗೆ ಜವಾಬ್ದಾರಿ ನೀಡಿದೆ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ. ವಿರೋಧಿಗಳು ಏನೇನು ಪ್ರಯತ್ನ ಮಾಡಿದರು ಎಂಬುದೆಲ್ಲ ಈಗ ಬೇಡ. ಪಕ್ಷ ನೀಡಿರುವ ಹೊಣೆಗಾರಿಕೆ ನಿಭಾಯಿಸುತ್ತೇನೆ ಎಂದವರು ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.