ಜೈಪುರ, ಮೇ 7: ಆಪರೇಷನ್ ಸಿಂಧೂರ್ನ ಮೊದಲ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಕೇಂದ್ರ ರಕ್ಷಣಾ ಸಚಿವಾಲಯ ರಾಜನಾಥ್ ಸಿಂಗ್ (Rajnath Singh) ಇಂದು ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಜೈಪುರದಲ್ಲಿ ನಡೆದ ಜಂಟಿ ಕಮಾಂಡರ್ಗಳ ಸಮ್ಮೇಳನದ ಸಂದರ್ಭದಲ್ಲಿ 28 ನಿಮಿಷಗಳ ಈ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಲಾಗಿದೆ. 28 ನಿಮಿಷಗಳ ಈ ಸಾಕ್ಷ್ಯಚಿತ್ರವು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿನ ಭಯೋತ್ಪಾದಕ ಶಿಬಿರಗಳ ವಿರುದ್ಧ ಭಾರತದ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ಪೂರ್ತಿ ಮಾಹಿತಿ ನೀಡುತ್ತದೆ.
ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಉಪಗ್ರಹಗಳನ್ನು ಗಡಿಯಾಚೆಗಿನ ಟಾರ್ಗೆಟ್ಗಳನ್ನು ಪತ್ತೆಹಚ್ಚುವಲ್ಲಿ ಹೇಗೆ ಬಳಸಲಾಗಿತ್ತು ಎಂಬುದನ್ನು ಈ ಸಾಕ್ಷ್ಯಚಿತ್ರ ತೋರಿಸುತ್ತದೆ. ಇದು ಭಾರತದ ಮಿಲಿಟರಿ ಕಾರ್ಯಾಚರಣೆಯ ಯೋಜನಾ ಹಂತದಲ್ಲಿ ಒಳಗೊಂಡಿರುವ ಸಂಕೀರ್ಣತೆಯ ಬಗ್ಗೆಯೂ ವಿವರಗಳನ್ನು ನೀಡುತ್ತದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಈ ಸಾಕ್ಷ್ಯಚಿತ್ರದಲ್ಲಿ ಇದ್ದಾರೆ.
#WATCH | Rajasthan | Defence Minister Rajnath Singh launched a video documentary on Operation Sindoor at the Headquarters of South Western Command in Jaipur, on the first anniversary of Operation Sindoor.
(Source: Department of Military Affairs) pic.twitter.com/uZxmcXALf2
— ANI (@ANI) May 7, 2026
ಇದನ್ನೂ ಓದಿ: Video: ಪಾಕಿಸ್ತಾನಿ ಭಯೋತ್ಪಾದಕರ ವಿರುದ್ಧದ ಆಪರೇಷನ್ ಸಿಂಧೂರ್ಗೆ ಒಂದು ವರ್ಷ: ವೀಡಿಯೊ ಹಂಚಿಕೊಂಡ ಭಾರತೀಯ ಸೇನೆ
ಭಾರತದ ಆಪರೇಷನ್ ಸಿಂಧೂರ್ ಗಡಿಯುದ್ದಕ್ಕೂ ಭಯೋತ್ಪಾದಕ ಮೂಲಸೌಕರ್ಯ ಮತ್ತು ಮಿಲಿಟರಿ ಸ್ವತ್ತುಗಳ ಮೇಲೆ ಭಾರೀ ಹಾನಿಯನ್ನು ಉಂಟುಮಾಡಿತು. ಭಾರತದ ಮಟ್ಟಿಗೆ ಈ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಮಹತ್ವದ್ದಾಗಿದೆ.
#WATCH | Rajasthan | Defence Minister Rajnath Singh attends a briefing and participates in the release of a documentary on Operation Sindoor at the Headquarters of South Western Command in Jaipur, on the first anniversary of Operation Sindoor. pic.twitter.com/co7VKGCcnt
— ANI (@ANI) May 7, 2026
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಆಪರೇಷನ್ ಸಿಂಧೂರ್ ಅನ್ನು ಆಧುನಿಕ ಯುದ್ಧದ ಮಾನದಂಡ ಎಂದು ಬಣ್ಣಿಸಿದರು. ಕಳೆದ ವರ್ಷ ಮೇ 7ರಂದು, ಪಹಲ್ಗಾಮ್ ದಾಳಿಗೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನ ಮತ್ತು ಪಿಒಕೆಯಲ್ಲಿ ಭಾರತ ನಡೆಸಿದ ವೈಮಾನಿಕ ದಾಳಿಯಲ್ಲಿ 100 ಭಯೋತ್ಪಾದಕರು ಸಾವನ್ನಪ್ಪಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ