Headlines

ಆರ್ಥಿಕ ಸಂಕಷ್ಟದಲ್ಲೂ ವಿದೇಶಿಗರ ನೆರವಿನ ಹಸ್ತಕ್ಕೆ ಕೈಚಾಚದ ಬೆಂಗಳೂರು ಸ್ಟಾರ್ಟಪ್; ಭಾರತದ ಮೊದಲ ಎಂಆರ್​ಐ ನಿರ್ಮಿಸಿದವನ ಕಥೆ – Kannada News | India’s first indigenous MRI stayed in the country, as its founder rejected MNC offer

ಎಂಆರ್​ಐ ಸ್ಕ್ಯಾನರ್Image Credit source: Getty Images

ಹಣಕಾಸು ಸಂಕಷ್ಟ ಬಂದಾಗ ದೇಶದ ಹಿತದ ಬಗ್ಗೆ ಯೋಚನೆ ಮಾಡುವ ಉದ್ಯಮಿಗಳು ಬಹಳ ವಿರಳ. ಇಂಥ ಅಪರೂಪದ ಆಂಟ್ರಪ್ರನ್ಯೂರ್​ಗಳಲ್ಲಿ ಒಬ್ಬರು ಅರ್ಜುನ್ ಅರುಣಾಚಲಂ. ಬೆಂಗಳೂರು ಮೂಲದ ‘ವೊಕ್ಸೆಲ್‌ಗ್ರಿಡ್ಸ್’ (Voxelgrids) ಸ್ಟಾರ್ಟಪ್​ನ ಸ್ಥಾಪಕರು. ಭಾರತದ ಮೊದಲ ಸಂಪೂರ್ಣ ದೇಶೀಯವಾಗಿ ಎಂಆರ್​ಐ ಸ್ಕ್ಯಾನರ್ ಯಂತ್ರವನ್ನು ಅಭಿವೃದ್ಧಿಪಡಿಸಿದ ಕೀರ್ತಿ ಈ ಸ್ಟಾರ್ಟಪ್​ನದ್ದು. ಬಹಳ ಸಂಕಷ್ಟ, ಹೋರಾಟಗಳಲ್ಲಿ ಎಂಆರ್​ಐ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಇವರ ಸ್ಟಾರ್ಟಪ್ ಫಂಡಿಂಗ್ ಇಲ್ಲದೇ ಹತಾಶೆಯ ಸ್ಥಿತಿಯಲ್ಲಿದ್ದಾಗ ವಿದೇಶಿಗರ ಪಾಲಾಗುವ ಅವಕಾಶ ಇತ್ತು. ಅಂಥ ಸಂದರ್ಭದಲ್ಲೂ ಎಂಎನ್​ಸಿ ಕಂಪನಿ ಒಡ್ಡಿದ ನೆರವಿನ ಹಸ್ತಕ್ಕೆ ಅರ್ಜುನ್ ಕೈ ಚಾಚಲಿಲ್ಲ. ಒಂದು ವೇಳೆ, ಒತ್ತಡಕ್ಕೆ ಸಿಲುಕಿದ್ದರೆ ಭಾರತದ ಮೊದಲ ಎಂಆರ್​ಐ ಸ್ಕ್ಯಾನರ್ ಯಂತ್ರವು ವಿದೇಶಿಗರ ಪಾಲಾಗಿ ಹೋಗುತ್ತಿತ್ತು. ಟಾಟಾ ಟ್ರಸ್ಟ್ಸ್ ಮತ್ತು ಜೋಹೋ ಸಂಸ್ಥೆಗಳು (Zoho) ಸಕಾಲಿಕವಾಗಿ ನೀಡಿದ ಫಂಡಿಂಗ್​ನಿಂದ ವೊಕ್ಸೆಲ್​ಗ್ರಿಡ್ಸ್ ಮತ್ತು ಅದರ ಎಂಆರ್​ಐ ಸ್ಕ್ಯಾನರ್​ಗೆ ಹೊಸ ಜೀವ ಸಿಕ್ಕಿತ್ತು.

ಅರ್ಜುನ್ ಅರುಣಾಚಲಂಗೆ ಲಾಭಕ್ಕಿಂತ ದೇಶವಾಸಿಗಳೇ ಮುಖ್ಯವಾದರು…

ಬೆಂಗಳೂರಿನ ‘ವೊಕ್ಸೆಲ್‌ಗ್ರಿಡ್ಸ್’, ಭಾರತದಲ್ಲಿ ಅತ್ಯಂತ ಅಗ್ಗದ ದರದಲ್ಲಿ ಲಭ್ಯವಾಗುವ ಎಂಆರ್‌ಐ ಸ್ಕ್ಯಾನರ್ ಅನ್ನು ಅಭಿವೃದ್ಧಿಪಡಿಸಿದೆ. ಅದರ ಸ್ಥಾಪಕರಾದ ಅರ್ಜುನ್ ಅರುಣಾಚಲಂ ಅವರು ಜೆಇ ಹೆಲ್ತ್‌ಕೇರ್ (GE HealthCare) ಮಾಜಿ ವಿಜ್ಞಾನಿ ಹಾಗೂ ಐಐಟಿ ಬಾಂಬೆಯ ಮಾಜಿ ಪ್ರಾಧ್ಯಾಪಕರು. ಎಂಆರ್‌ಐ ಯಂತ್ರಗಳ ಅಭಿವೃದ್ಧಿಯು ಕಠಿಣ ಹಾಗೂ ಅಪಾರ ಬಂಡವಾಳ ಬೇಡುವ ಪ್ರಕ್ರಿಯೆಯಾಗಿದೆ.

ಇದನ್ನೂ ಓದಿ: ಬಿಎಸ್ಸೆನ್ನೆಲ್ ವೈಫೈ ಯೋಜನೆ ನೀರಲ್ಲಿ ಹೋಮ; ಸಾವಿರಾರು ಕೋಟಿ ರೂ ವೆಚ್ಚಕ್ಕೆ ಬದಲಾಗಿ ಸಿಕ್ಕ ಆದಾಯ ಸೊನ್ನೆ?

ಕೋವಿಡ್-19 ಸಾಂಕ್ರಾಮಿಕದ ಅವಧಿಯಲ್ಲಿ ವೊಕ್ಸೆಲ್‌ಗ್ರಿಡ್ಸ್ ತೀವ್ರ ಹಣಕಾಸಿನ ಅಭಾವ ಎದುರಿಸುತ್ತಿದ್ದಾಗ, ಜಾಗತಿಕ ಬಹುರಾಷ್ಟ್ರೀಯ ಸಂಸ್ಥೆಯೊಂದು (MNC) ಕಂಪನಿಯನ್ನು ಖರೀದಿಸಲು ಮುಂದಾಗಿತ್ತು. ಆದರೆ, ತಮ್ಮ ಆವಿಷ್ಕಾರವು ಬಹುರಾಷ್ಟ್ರೀಯ ಕಂಪನಿಯ ವಶವಾದರೆ ಭಾರತೀಯರಿಗೆ ಅಗ್ಗದ ದರದಲ್ಲಿ ಎಂಆರ್‌ಐ ಲಭ್ಯವಾಗುವ ಆಶಯ ಹಾಳಾಗುತ್ತದೆ ಎಂದು ಅರ್ಜುನ್ ಆ ಆಫರ್ ಅನ್ನು ತಿರಸ್ಕರಿಸಿದರು.

ಟಾಟಾ ಮತ್ತು ಜೋಹೋ ನೆರವು

ರತನ್ ಟಾಟಾ ನೇತೃತ್ವದ ಟಾಟಾ ಟ್ರಸ್ಟ್ಸ್ (FISE ಮೂಲಕ) ಆರಂಭಿಕ ಹಂತದಲ್ಲಿ ಬೆಂಬಲ ನೀಡಿದರು. ನಂತರ ಶ್ರೀಧರ್ ವೆಂಬು ಅವರ ಜೋಹೋ ಕಾರ್ಪೊರೇಷನ್ ₹35 ಕೋಟಿ ಹೂಡಿಕೆ ಮಾಡುವ ಮೂಲಕ ನವೋದ್ಯಮಕ್ಕೆ ಹೊಸ ಜೀವ ನೀಡಿತು.

ಈ ಸ್ವದೇಶಿ ಎಂಆರ್‌ಐ ಸ್ಕ್ಯಾನರ್‌ನ ವಿಶೇಷತೆಗಳು

  • ಶೇ. 70ರಷ್ಟು ವೆಚ್ಚ ಕಡಿತ: ಈ ಸ್ವದೇಶಿ ಎಂಆರ್‌ಐ ತಂತ್ರಜ್ಞಾನದಿಂದಾಗಿ ಸಾರ್ವಜನಿಕರಿಗೆ ಎಂಆರ್‌ಐ ಸ್ಕ್ಯಾನಿಂಗ್ ವೆಚ್ಚ ಶೇ. 60 ರಿಂದ 70 ರಷ್ಟು ಕಡಿಮೆಯಾಗಲಿದೆ.
  • ಲಿಕ್ವಿಡ್ ಹೀಲಿಯಂ ಬೇಕಿಲ್ಲ: ಸಾಂಪ್ರದಾಯಿಕ ಎಂಆರ್‌ಐಗಳಂತೆ ಇದಕ್ಕೆ ನಿರಂತರ ದ್ರವ ಹೀಲಿಯಂ (Liquid Helium) ಅಗತ್ಯವಿಲ್ಲ. ಇದರಿಂದ ಯಂತ್ರದ ನಿರ್ವಹಣಾ ವೆಚ್ಚ ಶೇ. 40ರಷ್ಟು ಕಡಿಮೆಯಾಗುತ್ತದೆ.
  • ಹಗುರ ಮತ್ತು ಸಾಗಿಸಲು ಸುಲಭ: ಸಾಮಾನ್ಯ ಎಂಆರ್‌ಐ ಯಂತ್ರಗಳು 4 ರಿಂದ 6 ಟನ್ ತೂಕವಿದ್ದರೆ, ಇದು ಕೇವಲ 2.3 ಟನ್ ತೂಕ ಹೊಂದಿದೆ. ಇದನ್ನು ಮೊಬೈಲ್ ವ್ಯಾನ್‌ಗಳ ಮೂಲಕ ಗ್ರಾಮೀಣ ಪ್ರದೇಶಗಳಿಗೂ ಸುಲಭವಾಗಿ ಕೊಂಡೊಯ್ಯಬಹುದು.
  • ವೇಗದ ಪ್ರಕ್ರಿಯೆ: ಸಾಂಪ್ರದಾಯಿಕ ಸ್ಕ್ಯಾನರ್‌ಗಳಿಗಿಂತ 3 ರಿಂದ 4 ಪಟ್ಟು ವೇಗವಾಗಿ ಇಮೇಜಿಂಗ್ ಪ್ರಕ್ರಿಯೆ ಪೂರ್ಣಗೊಳಿಸುತ್ತದೆ.

ಇದನ್ನೂ ಓದಿ: ನಂದನ್ ನಿಲೇಕಣಿ ಪ್ರಕಾರ ಎಐ ಪರಿಣಾಮದಲ್ಲಿ ಕೆಲಸಗಳು ಎಲ್ಲಿ ಹೆಚ್ಚು ನಷ್ಟ, ಎಲ್ಲಿ ಹೆಚ್ಚು ಸೃಷ್ಟಿ?

ಭಾರತವು ಪ್ರತಿವರ್ಷ ಸುಮಾರು ₹3,500 ಕೋಟಿ ಮೌಲ್ಯದ ಎಂಆರ್‌ಐ ಯಂತ್ರಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದು, ಈ ಸ್ವದೇಶಿ ಆವಿಷ್ಕಾರವು ಆ ಆಮದು ಅವಲಂಬನೆಯನ್ನು ತಪ್ಪಿಸಿ, ದೇಶದ ಮೂಲ ಮೂಲೆಗೂ ವೈದ್ಯಕೀಯ ತಪಾಸಣೆಯನ್ನು ತಲುಪಿಸಲು ನೆರವಾಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *