
ಸಿನಿಮಾ (Cinema) ಲೋಕದ ಅತ್ಯುನ್ನತ ಪ್ರಶಸ್ತಿ ಎಂದೇ ಪರಿಗಣಿಸಲ್ಪಡುವುದು ಆಸ್ಕರ್ ಅಥವಾ ಅಕಾಡೆಮಿ ಪ್ರಶಸ್ತಿ. ಈ ವರ್ಷದ ಆಸ್ಕರ್ಸ್ (Oscars 2026) ಪ್ರದಾನ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಹಾಲಿವುಡ್‌ನ ಲಾಸ್ ಏಂಜಲ್ಸ್ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿರುವ ಈ ವರ್ಣರಂಜಿತ ಕಾರ್ಯಕ್ರಮವನ್ನು ಕಣ್ಣುಂಬಿಕೊಳ್ಳಲು ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ. ಭಾರತೀಯ ಸಿನಿಮಾ ಪ್ರೇಮಿಗಳಿಗೂ ಸಹ ಆಸ್ಕರ್ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಆಸ್ಕರ್ಸ್ ಅನ್ನು ಭಾರತೀಯರು ಎಲ್ಲಿ ನೋಡಬಹುದು? ಯಾವ ಸಮಯಕ್ಕೆ ನೋಡಬಹುದು? ಮಾಹಿತಿ ಇಲ್ಲಿದೆ…
ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಮಾರ್ಚ್ 15ರ ಸಂಜೆ ಈ ಸಮಾರಂಭ ನಡೆಯಲಿದೆ. ಆದರೆ ಭಾರತ ಮತ್ತು ಅಮೆರಿಕದ ನಡುವಿನ ಸಮಯದ ವ್ಯತ್ಯಾಸದಿಂದಾಗಿ, ಭಾರತೀಯ ಪ್ರೇಕ್ಷಕರು ಮಾರ್ಚ್ 16ರ ಸೋಮವಾರ ಮುಂಜಾನೆ ಈ ಕಾರ್ಯಕ್ರಮವನ್ನು ವೀಕ್ಷಿಸಬೇಕಾಗುತ್ತದೆ. ಮಾರ್ಚ್ 16ರ ಸೋಮವಾರ ಮುಂಜಾನೆ ಭಾರತೀಯ ಕಾಲಮಾನ 5:30ಕ್ಕೆ ರೆಡ್ ಕಾರ್ಪೆಟ್ ಸಂಭ್ರಮ ಆರಂಭವಾಗಲಿದ್ದು, 6:30ರಿಂದ ಅಧಿಕೃತ ಪ್ರಶಸ್ತಿ ಪ್ರದಾನ ಸಮಾರಂಭ ಶುರುವಾಗಲಿದೆ.
ಭಾರತದಲ್ಲಿ ಆಸ್ಕರ್ ಪ್ರಸಾರದ ಅಧಿಕೃತ ಹಕ್ಕನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ (Disney+ Hotstar) ಹೊಂದಿದೆ. ಹಾಟ್‌ಸ್ಟಾರ್ ಚಂದಾದಾರರು ಮೊಬೈಲ್ ಅಥವಾ ಸ್ಮಾರ್ಟ್ ಟಿವಿಯಲ್ಲಿ ನೇರ ಪ್ರಸಾರವನ್ನು ವೀಕ್ಷಿಸಬಹುದು.
ಸ್ಟಾರ್ ನೆಟ್‌ವರ್ಕ್‌ನ ಇಂಗ್ಲಿಷ್ ಎಂಟರ್‌ಟೈನ್‌ಮೆಂಟ್ ಚಾನೆಲ್‌ಗಳಾದ ಸ್ಟಾರ್ ವರ್ಲ್ಡ್ ಅಥವಾ ಸ್ಟಾರ್ ಮೂವೀಸ್ ನಲ್ಲಿ ಈ ಕಾರ್ಯಕ್ರಮ ಪ್ರಸಾರವಾಗುವ ಸಾಧ್ಯತೆಯಿದೆ.
ಇದನ್ನೂ ಓದಿ:’ಜನ ನಾಗಯನ್‘ ಸಿನಿಮಾ: ಯಶಸ್ವಿಯಾಯ್ತು ವಿಜಯ್ ರಾಜಕೀಯ ವಿರೋಧಿಗಳ ಪ್ಲ್ಯಾನ್
ಈ ಬಾರಿಯ ಆಸ್ಕರ್ ವೇದಿಕೆಯನ್ನು ಜನಪ್ರಿಯ ಹಾಸ್ಯನಟ ಮತ್ತು ಟಾಕ್ ಶೋ ನಿರೂಪಕ ಕೋನನ್ ಒ’ಬ್ರಿಯಾನ್ ನಿರೂಪಣೆ ಮಾಡಲಿದ್ದಾರೆ. ಭಾರತದ ಯಾವುದೇ ಸಿನಿಮಾಗಳು ಈ ಬಾರಿ ಆಸ್ಕರ್ಸ್ ರೇಸಿನಲ್ಲಿ ಇಲ್ಲವಾದರೂ ನಟಿ ಪ್ರಿಯಾಂಕಾ ಚೋಪ್ರಾ ಅವರು ಈ ಬಾರಿ ಪ್ರಶಸ್ತಿ ಪ್ರದಾನ ಮಾಡಲಿರುವುದು ವಿಶೇಷ. ಈ ವರ್ಷ ‘ಒನ್ ಬ್ಯಾಟಲ್ ಆಫ್ಟರ್ ಅನದರ್’, ‘ಸಿನ್ನರ್ಸ್’ ಇನ್ನೂ ಕೆಲವು ದೊಡ್ಡ ಸಿನಿಮಾಗಳು ಈ ಬಾರಿ ಸ್ಪರ್ಧೆಯಲ್ಲಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ