Headlines

ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಪ್ರಧಾನಿ ಮೋದಿಗೆ ಕೊಲೆ ಬೆದರಿಕೆ – Kannada News | PM Narendra Modi Gets Death Threat Ahead Of Australia Visit

ನವದೆಹಲಿ, ಜುಲೈ 4: ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರ ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ, ಫೇಸ್‌ಬುಕ್‌ನಲ್ಲಿ ಅವರಿಗೆ ಕೊಲೆ ಬೆದರಿಕೆ ಹಾಕಿರುವ ವಿಷಯ ಬೆಳಕಿಗೆ ಬಂದಿದ್ದು, ಆಸ್ಟ್ರೇಲಿಯಾ ಅಧಿಕಾರಿಗಳು ಈ ಕುರಿತು ತನಿಖೆ ಆರಂಭಿಸಿದ್ದಾರೆ. ‘ದಿ ಆಸ್ಟ್ರೇಲಿಯಾ ಟುಡೇ’ ವರದಿಯ ಪ್ರಕಾರ, ಜುಲೈ 9ರಂದು ಮೆಲ್ಬೋರ್ನ್‌ನ ಮಾರ್ವೆಲ್ ಸ್ಟೇಡಿಯಂನಲ್ಲಿ ಆಯೋಜಿಸಲಾದ ಮೆಲ್ಬೋರ್ನ್ ಮೀಟ್ಸ್ ಮೋದಿ ಕಾರ್ಯಕ್ರಮವನ್ನು ಪ್ರಚಾರ ಮಾಡುವ ಫೇಸ್‌ಬುಕ್ ಪೋಸ್ಟ್‌ನ ಕಾಮೆಂಟ್ ವಿಭಾಗದಲ್ಲಿ ಈ ಬೆದರಿಕೆ ಕಾಣಿಸಿಕೊಂಡಿದೆ.

ಜೀವ ಬೆದರಿಕೆ ಎಲ್ಲಿ ಮತ್ತು ಹೇಗೆ ಬಂದಿತು?:

ಜುಲೈ 9ರಂದು ಮೆಲ್ಬೋರ್ನ್‌ನ ಮಾರ್ವೆಲ್ ಸ್ಟೇಡಿಯಂನಲ್ಲಿ ಭಾರತೀಯ ವಲಸಿಗರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ. ಇದಕ್ಕಾಗಿ ಮೆಲ್ಬೋರ್ನ್ ಮೀಟ್ಸ್ ಮೋದಿ (Melbourne Meets Modi) ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಪ್ರಚಾರಕ್ಕಾಗಿ ಹಾಕಲಾಗಿದ್ದ ಫೇಸ್‌ಬುಕ್ ಪೋಸ್ಟ್‌ನ ಕಾಮೆಂಟ್ ವಿಭಾಗದಲ್ಲಿ ಈ ಬೆದರಿಕೆ ಸಂದೇಶ ಕಾಣಿಸಿಕೊಂಡಿದೆ.

ಇದನ್ನೂ ಓದಿ: ಜುಲೈ 6ರಿಂದ 3 ದೇಶಗಳಿಗೆ ಮೋದಿ ಪ್ರವಾಸ; 4 ದಶಕದ ಬಳಿಕ ನ್ಯೂಜಿಲೆಂಡ್​ಗೆ ಭಾರತದ ಪ್ರಧಾನಿ ಭೇಟಿ

ಬೆದರಿಕೆ ಸಂದೇಶದಲ್ಲೇನಿತ್ತು?:

ಅಬು ಮುಸ್ತಫಾ ಎಂಬ ಹೆಸರಿನ ಫೇಸ್‌ಬುಕ್ ಖಾತೆಯಿಂದ ಅರೇಬಿಕ್ ಮತ್ತು ಇಂಗ್ಲಿಷ್‌ನಲ್ಲಿ ಕಾಮೆಂಟ್ ಮಾಡಲಾಗಿದ್ದು, “ಕಾರ್ಯಕ್ರಮ ನಡೆಯುವಾಗ ಸ್ಟೇಡಿಯಂನ ಮೇಲ್ಛಾವಣಿಯನ್ನು ಮುಚ್ಚಿಡುವುದು ಸೂಕ್ತ, ಇಲ್ಲದಿದ್ದರೆ ಅವರು ಆಸ್ಟ್ರೇಲಿಯಾದಲ್ಲೇ ತಮ್ಮ ಸಾವನ್ನು ಕಾಣಬೇಕಾಗುತ್ತದೆ” ಎಂದು ಬರೆಯಲಾಗಿದೆ. ಈ ಸಂದೇಶವು ಸ್ಟೇಡಿಯಂನಲ್ಲಿ ದಾಳಿ ನಡೆಸುವ ಮುನ್ಸೂಚನೆಯಂತೆ ಇರುವುದರಿಂದ ಭದ್ರತಾ ಸಂಸ್ಥೆಗಳು ಅಲರ್ಟ್ ಆಗಿವೆ. ತನಿಖಾಧಿಕಾರಿಗಳು ಈ ಕಾಮೆಂಟ್ ಹಾಕಲಾದ ಫೇಸ್‌ಬುಕ್ ಖಾತೆಯ ಐಪಿ ವಿಳಾಸವನ್ನು ಈಗಾಗಲೇ ಪತ್ತೆಹಚ್ಚಿದ್ದು, ಆರೋಪಿಯ ಪತ್ತೆಗೆ ಜಾಲ ಬೀಸಿದ್ದಾರೆ.

ಆಸ್ಟ್ರೇಲಿಯನ್ ಫೆಡರಲ್ ಪೊಲೀಸ್ ಭದ್ರತೆ:

ಆಸ್ಟ್ರೇಲಿಯಾದ ಫೆಡರಲ್ ಪೊಲೀಸರು ಮತ್ತು ಗುಪ್ತಚರ ಸಂಸ್ಥೆಗಳು ಈ ಬೆದರಿಕೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಪ್ರಧಾನಿ ಮೋದಿಯವರ ಸುರಕ್ಷತೆಗಾಗಿ ಹೈ-ಸೆಕ್ಯೂರಿಟಿ ವ್ಯವಸ್ಥೆಯನ್ನು ಕಲ್ಪಿಸುತ್ತಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿಯಿಂದ ಜೋಧ್‌ಪುರ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಉದ್ಘಾಟನೆ

ಪ್ರಧಾನಿ ಮೋದಿಯವರ ಪ್ರವಾಸದ ವೇಳಾಪಟ್ಟಿ:

ಪ್ರಧಾನಿ ನರೇಂದ್ರ ಮೋದಿ ಜುಲೈ 8ರಿಂದ 10ರವರೆಗೆ ಆಸ್ಟ್ರೇಲಿಯಾದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಅವಧಿಯಲ್ಲಿ ಅವರು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೊಂದಿಗೆ ವಾರ್ಷಿಕ ನಾಯಕರ ಶೃಂಗಸಭೆಯಲ್ಲಿ ಭಾಗವಹಿಸಿ ದ್ವಿಪಕ್ಷೀಯ ಹಾಗೂ ಕಾರ್ಯತಂತ್ರದ ಮಾತುಕತೆಗಳನ್ನು ನಡೆಸಲಿದ್ದಾರೆ. ಇದರ ಜೊತೆಗೆ ಮೆಲ್ಬೋರ್ನ್‌ನಲ್ಲಿ ಸುಮಾರು 30,000ಕ್ಕೂ ಹೆಚ್ಚು ಭಾರತೀಯ ಮೂಲದ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *