Headlines

ಆಹಾರ ಸುರಕ್ಷತಾ ತಪಾಸಣೆ: ಹೋಂ ಬೇಕರ್ಸ್‌, ಟಿಫಿನ್ ಸೇವೆಗಳು, ಕ್ಲೌಡ್ ಕಿಚನ್‌ಗಳ ಮೇಲೂ ಕಣ್ಣಿಟ್ಟ FDA – Kannada News | Food Safety Crackdown: Karnataka FDA Targets Home Bakers, Cloud Kitchens & Online Tiffin Services

ಹೋಂ ಬೇಕರ್ಸ್‌, ಟಿಫಿನ್ ಸೇವೆಗಳು, ಕ್ಲೌಡ್ ಕಿಚನ್‌ಗಳ ಮೇಲೂ ಕಣ್ಣಿಟ್ಟ FDAImage Credit source: Tv9 Kannada

ಬೆಂಗಳೂರು, ಆಗಸ್ಟ್​​ 16: ಇತ್ತೀಚೆಗೆ ಬೆಂಗಳೂರಿನಲ್ಲಿ (Bengaluru) ಐಷಾರಾಮಿ ಹೋಟೆಲ್‌ಗಳು, ಕ್ಯಾಂಟೀನ್‌ಗಳು ಮತ್ತು ಆಹಾರ ಸಂಗ್ರಹ ಕೇಂದ್ರಗಳ ಮೇಲೆ ದಾಳಿ ನಡೆಸಿ ಗಮನ ಸೆಳೆದಿರುವ ಆಹಾರ ಸುರಕ್ಷತಾ ಮತ್ತು ಔಷಧ ಆಡಳಿತ (FDA) ಇಲಾಖೆ ಮನೆ ಆಧಾರಿತ ಬೇಕರ್ಸ್‌, ಟಿಫಿನ್ ಸೇವೆಗಳು, ಇನ್‌ಸ್ಟಾಗ್ರಾಂ ಮೂಲಕ ಆಹಾರ ಮಾರಾಟ ಮಾಡುವವರು, ಕ್ಲೌಡ್ ಕಿಚನ್‌ಗಳು ಹಾಗೂ ತಾತ್ಕಾಲಿಕ ಆಹಾರ ಮಳಿಗೆಗಳಲ್ಲಿನ ಆಹಾರ ಪದಾರ್ಥಗಳ ಮೇಲೂ ಕಣ್ಣಿಟ್ಟಿದೆ. ಮನೆ ಆಧಾರಿತ ಆಹಾರ ಉದ್ಯಮಗಳು ಅಗತ್ಯ ಪರವಾನಗಿ ಪಡೆದಿವೆಯೇ ಮತ್ತು ಆಹಾರ ಸುರಕ್ಷತಾ ಮಾನದಂಡಗಳನ್ನು ಪಾಲಿಸುತ್ತಿವೆಯೇ ಎಂದು ಪರಿಶೀಲನೆಗೆ ಮುಂದಾಗಿದೆ.

FSSAI ನೋಂದಣಿ ಕಡ್ಡಾಯ

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ನಿಯಮಗಳ ಪ್ರಕಾರ, ಪ್ರತಿಯೊಬ್ಬ ಆಹಾರ ಉದ್ಯಮ ನಿರ್ವಾಹಕರೂ ನೋಂದಣಿ ಅಥವಾ ಪರವಾನಗಿ ಹೊಂದಿರಬೇಕು. 2026ರ ಏಪ್ರಿಲ್ 1ರಿಂದ ಜಾರಿಯಲ್ಲಿರುವ ನಿಯಮಗಳ ಪ್ರಕಾರ, ವಾರ್ಷಿಕ ವಹಿವಾಟು ₹1.5 ಕೋಟಿವರೆಗೆ ಇದ್ದರೆ FSSAI ನೋಂದಣಿ ಸಾಕು. ₹1.5 ಕೋಟಿಯಿಂದ ₹50 ಕೋಟಿವರೆಗೆ ಇದ್ದರೆ ರಾಜ್ಯ ಪರವಾನಗಿ ಕಡ್ಡಾಯವಾಗಿರಬೇಕಿದೆ. ₹50 ಕೋಟಿಗಿಂತ ಹೆಚ್ಚು ವಹಿವಾಟು ಇದ್ದರೆ ಕೇಂದ್ರ ಪರವಾನಗಿ ಪಡೆಯಬೇಕು. ಈ ನಿಯಮಗಳು ತಾತ್ಕಾಲಿಕ ಆಹಾರ ಮಳಿಗೆಗಳಿಗೂ ಅನ್ವಯಿಸುತ್ತವೆ. ಪ್ರದರ್ಶನಗಳು, ಸಂಗೀತ ಕಾರ್ಯಕ್ರಮಗಳು, ಫ್ಲೀ ಮಾರ್ಕೆಟ್‌ಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಆಹಾರ ಮಾರಾಟ ಮಾಡುವವರೂ ಆಹಾರ ಸುರಕ್ಷತಾ ವ್ಯವಸ್ಥೆಯ ವ್ಯಾಪ್ತಿಯಲ್ಲೇ ಬರಲಿದ್ದಾರೆ.

ಇದನ್ನೂ ಓದಿ:  ಬೆಂಗಳೂರಿನ ಪ್ರಸಿದ್ಧ ಹೋಟೆಲ್‌ಗಳಿಗೆ ಶಾಕ್! 6 ಹೋಟೆಲ್​ಗಳಿಗೆ ಒಟ್ಟೂ 1.6 ಲಕ್ಷ ರೂ ಭಾರಿ ದಂಡ

ಹೋಂ ಕಿಚನ್‌ಗಳಿಗೆ ಕಠಿಣ ನೀತಿ ಅಗತ್ಯ: ಖಾದರ್

ಸಾಮಾಜಿಕ ಜಾಲತಾಣಗಳು ಮತ್ತು ಆನ್‌ಲೈನ್ ವೇದಿಕೆಗಳ ಮೂಲಕ ಆಹಾರ ಮಾರಾಟ ಮಾಡುವ ಮನೆ ಆಧಾರಿತ ಉದ್ಯಮಗಳಿಗೆ ಕಠಿಣ ನಿಯಮಗಳನ್ನು ರೂಪಿಸಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟಿದ್ದಾರೆ. ಯಾರಾದರೂ ಆನ್‌ಲೈನ್ ಅಥವಾ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಆಹಾರ ವ್ಯವಹಾರವನ್ನು ಪ್ರಚಾರ ಮಾಡುತ್ತಿದ್ದರೆ, ಅವರು ನಿಯಮಗಳ ವ್ಯಾಪ್ತಿಗೆ ಬರಬೇಕು. ಇದಕ್ಕಾಗಿ ಕಠಿಣ ನೀತಿ ರೂಪಿಸುವುದು ಉತ್ತಮ. ಈ ವಿಚಾರವನ್ನು ಪರಿಶೀಲಿಸುತ್ತೇನೆ ಎಂದು ಖಾದರ್ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *