Headlines

ಇಂದಿನ ದಿನ ಭವಿಷ್ಯ: ಸಿಂಹ, ಧನುಸ್ಸಿಗೆ ಅದೃಷ್ಟವೋ ಅದೃಷ್ಟ; ಮೇಷ ಹಾಗೂ ಮೀನ ರಾಶಿಯವರ ಫಲ ಹೇಗಿದೆ? – Kannada News | Zodiac Signs: Astrologer Dr. Basavaraj Guruji on Effects for 8th July 2026

ಬೆಂಗಳೂರು, ಜು.8: ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ದ್ವಾದಶ ರಾಶಿಗಳ ಫಲಾನುಫಲಗಳನ್ನು ನೀಡಿದ್ದಾರೆ. ಈ ದಿನ ಪರಾಭವನಾಮ ಸಂವತ್ಸರ, ಉತ್ತರಾಯಣ, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಅಷ್ಟಮಿ, ರೇವತಿ ನಕ್ಷತ್ರ, ಅತಿಗಂಡ ಯೋಗ, ಕೌಲವ ಕರಣ ಇರಲಿದೆ. ರಾಹುಕಾಲ ಮಧ್ಯಾಹ್ನ 12:23 ರಿಂದ 1:59 ರವರೆಗೆ ಇರುತ್ತದೆ. ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲವು ಬೆಳಗ್ಗೆ 10:48 ರಿಂದ 12:24 ರವರೆಗೆ ಇರಲಿದೆ. ಇಂದು ರವಿ ಮಿಥುನ ರಾಶಿಯಲ್ಲಿ, ಚಂದ್ರ ಮೀನ ರಾಶಿಯಲ್ಲಿ, ಬುಧನ ನಕ್ಷತ್ರವಾದ ರೇವತಿಯಲ್ಲಿ ಸಂಚರಿಸಲಿದ್ದಾನೆ. ಇಂದು ಕಾಲಾಷ್ಟಮಿ ಆಗಿದ್ದು, ಸಂಧ್ಯಾಕಾಲದಲ್ಲಿ ಕಾಲಭೈರವನ ಪೂಜೆ ವಿಶೇಷ. ಲಿಂಗಾಂಬುದೇಶ್ವರ ರಥೋತ್ಸವ ಮತ್ತು ಮಲ್ಲಾರಿ ದೀಕ್ಷಿತರ ಪುಣ್ಯದಿನವೂ ಆಗಿದೆ. ಮೇಷ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿದ್ದು, ವೃತ್ತಿಯಲ್ಲಿ ಸಣ್ಣಪುಟ್ಟ ಕಿರಿಕಿರಿ ಸಾಧ್ಯ. ವೃಷಭ ರಾಶಿಯವರು ಆತುರದ ನಿರ್ಧಾರಗಳನ್ನು ತ್ಯಜಿಸಬೇಕು. ಮಿಥುನ ರಾಶಿಯವರಿಗೆ ಬುಧನ ನಕ್ಷತ್ರದಲ್ಲಿ ಚಂದ್ರ ಸಂಚಾರದಿಂದ ಹಣಕಾಸಿನ ವಿಚಾರದಲ್ಲಿ ಶುಭ. ಕರ್ಕಾಟಕ ರಾಶಿಯವರು ಮಾತಿನಲ್ಲಿ ಜಾಗ್ರತೆ ವಹಿಸಬೇಕು. ಸಿಂಹ ರಾಶಿಯವರಿಗೆ ಅದೃಷ್ಟವೇ ಅದೃಷ್ಟ. ಕನ್ಯಾ ರಾಶಿಯವರಿಗೆ ಶತ್ರುಗಳು ಮಿತ್ರರಾಗುತ್ತಾರೆ. ತುಲಾ ರಾಶಿಯವರಿಗೆ ಆರು ಗ್ರಹಗಳ ಶುಭಫಲದಿಂದ ಆಸೆಗಳು ಈಡೇರುತ್ತವೆ. ವೃಶ್ಚಿಕ ರಾಶಿಯವರಿಗೆ ಉದ್ಯೋಗದಲ್ಲಿ ಶುಭ, ಆದರೆ ಆರೋಗ್ಯದಲ್ಲಿ ಜಾಗ್ರತೆ. ಧನುಸ್ಸು ರಾಶಿಯವರಿಗೆ ಅದೃಷ್ಟವೇ ಅದೃಷ್ಟ, ಹಣಕಾಸಿಗೆ ತೊಂದರೆ ಇಲ್ಲ. ಮಕರ ರಾಶಿಯವರಿಗೆ ಹೊಸ ಹೂಡಿಕೆಯಿಂದ ಲಾಭ. ಕುಂಭ ರಾಶಿಯವರಿಗೆ ಮಾತಿನ ವೈಖರಿ ಚೆನ್ನಾಗಿರುತ್ತದೆ, ಪೂರ್ವಿಕರ ಆಸ್ತಿಯಿಂದ ಶುಭ. ಮೀನ ರಾಶಿಯವರಿಗೆ ಆರು ಗ್ರಹಗಳ ಶುಭಫಲ, ಆರೋಗ್ಯ ಉತ್ತಮ. ಎಲ್ಲರಿಗೂ ಒಳಿತಾಗಲಿ ಎಂದು ಗುರೂಜಿ ಹಾರೈಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *