ಬೆಂಗಳೂರು, ಜೂ.20: ರಾಜ್ಯದಲ್ಲಿ ನಿರಂತರವಾಗಿ ಬೀಸುತ್ತಿರುವ ತಂಪು ಗಾಳಿ ಮತ್ತು ಮಳೆಯ ಕಾರಣದಿಂದಾಗಿ ವಾತಾವರಣದಲ್ಲಿದ್ದ ಧೂಳಿನ ಕಣಗಳು ಮತ್ತು ಮಾಲಿನ್ಯಕಾರಕಗಳು ಗಣನೀಯವಾಗಿ ಕಡಿಮೆಯಾಗಿವೆ. ಪರಿಣಾಮವಾಗಿ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಗಾಳಿಯ ಗುಣಮಟ್ಟ ‘ಉತ್ತಮ’ (Good) ಹಾಗೂ ‘ತೃಪ್ತಿಕರ’ (Satisfactory) ಮಟ್ಟದಲ್ಲಿದೆ.
ಸಿಲಿಕಾನ್ ಸಿಟಿಯ ಹೆಬ್ಬಾಳ, ಸಿಲ್ಕ್ ಬೋರ್ಡ್, ಜಯನಗರ ಮತ್ತು ಮೈಸೂರು ರಸ್ತೆ ಸೇರಿದಂತೆ ಎಲ್ಲಾ ಪ್ರಮುಖ ವಲಯಗಳಲ್ಲಿ ಗಾಳಿಯು ಅತ್ಯಂತ ಶುದ್ಧವಾಗಿದೆ. ಯಾವುದೇ ಆರೋಗ್ಯದ ಅಪಾಯಗಳಿಲ್ಲ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಾಜ್ಯದಲ್ಲೇ ಅತ್ಯಂತ ಸ್ವಚ್ಛ ಹಾಗೂ ಶುದ್ಧ ಗಾಳಿ ದಾಖಲಾಗಿದೆ. ಇನ್ನು ಕರಾವಳಿ ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ವಾಯು ಮಾಲಿನ್ಯ ಶೂನ್ಯ ಮಟ್ಟಕ್ಕೆ ಕುಸಿದಿದೆ. ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಧೂಳಿನ ವಾತಾವರಣವಿದ್ದರೂ ಗಾಳಿಯ ಗುಣಮಟ್ಟ ನಿಯಂತ್ರಣದಲ್ಲಿದೆ.
ಕರ್ನಾಟಕದ ಪ್ರಮುಖ ನಗರಗಳ ಇಂದಿನ ವಾಯು ಗುಣಮಟ್ಟ
| ನಗರ / ಜಿಲ್ಲೆ | ಇಂದಿನ AQI ಮಟ್ಟ | ಗಾಳಿಯ ಗುಣಮಟ್ಟದ ಸ್ಥಿತಿ (Status) |
| ಕೊಪ್ಪಳ | 44 | ಅತ್ಯಂತ ಉತ್ತಮ (Good) |
| ಬಳ್ಳಾರಿ | 18 | ಅತ್ಯಂತ ಉತ್ತಮ (Good) |
| ದಾವಣಗೆರೆ | 51 | ತೃಪ್ತಿಕರ (Satisfactory) |
| ಚಿಕ್ಕಮಗಳೂರು | 58 | ತೃಪ್ತಿಕರ (Satisfactory) |
| ಚಾಮರಾಜನಗರ | 62 | ತೃಪ್ತಿಕರ (Satisfactory) |
| ಶಿವಮೊಗ್ಗ | 67 | ತೃಪ್ತಿಕರ (Satisfactory) |
| ವಿಜಯಾಪುರ | 69 | ತೃಪ್ತಿಕರ (Satisfactory) |
| ತುಮಕೂರು | 71 | ತೃಪ್ತಿಕರ (Satisfactory) |
| ಗೌರಿಬಿದನೂರು / ಚಿಕ್ಕಬಳ್ಳಾಪುರ | 84 | ಸಾಧಾರಣ (Moderate) |
| ರಾಮನಗರ | 84 | ಸಾಧಾರಣ (Moderate) |
| ಹುಬ್ಬಳ್ಳಿ – ಧಾರವಾಡ | 82 – 131 | ಸಾಧಾರಣದಿಂದ ಕಳಪೆ (Moderate to Poor) |
ಪ್ರಸುತ್ತ ವಾಯು ಗುಣಮಟ್ಟವು ಮನುಷ್ಯರು ಹಾಗೂ ಪ್ರಾಣಿಗಳಿಗೆ ಸಂಪೂರ್ಣ ಸುರಕ್ಷಿತವಾಗಿದೆ. ಉಸಿರಾಟದ ಸಮಸ್ಯೆ ಅಥವಾ ಅಸ್ತಮಾ ಇರುವವರು ಕೂಡ ಮುಕ್ತವಾಗಿ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದು. ಬಳ್ಳಾರಿ, ಕೊಪ್ಪಳ ಮತ್ತು ಕರಾವಳಿಯ ಮಂಗಳೂರು ಭಾಗಗಳಲ್ಲಿ ವಾಯು ಮಾಲಿನ್ಯ ಅತ್ಯಂತ ಕನಿಷ್ಠ ಮಟ್ಟದಲ್ಲಿದ್ದು, ಹಸಿರು ವಲಯದಲ್ಲಿದೆ. ಉತ್ತರ ಕರ್ನಾಟಕದ ಈ ಭಾಗದಲ್ಲಿ ಕೈಗಾರಿಕಾ ಪ್ರದೇಶ ಹಾಗೂ ಧೂಳಿನ ವಾತಾವರಣದ ಕಾರಣದಿಂದಾಗಿ ಗಾಳಿಯ ಗುಣಮಟ್ಟ ಸ್ವಲ್ಪ ‘ಕಳಪೆ’ (Poor) ಮಟ್ಟ ತಲುಪಿದೆ. ಅಸ್ತಮಾ ಅಥವಾ ಅಲರ್ಜಿ ಸಮಸ್ಯೆ ಇರುವವರು ಮುಂಜಾಗ್ರತೆ ವಹಿಸುವುದು ಒಳಿತು.
ಇದನ್ನೂ ಓದಿ: ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆ; ಬೆಂಗಳೂರಿನಲ್ಲಿ ವೀಕೆಂಡ್ ಕೂಲ್ ಕೂಲ್
ಹುಬ್ಬಳ್ಳಿ – ಧಾರವಾಡದಲ್ಲಿ ರಸ್ತೆ ಕಾಮಗಾರಿಗಳು, ಕಟ್ಟಡ ನಿರ್ಮಾಣದ ಧೂಳು ಮತ್ತು ಹೆದ್ದಾರಿಯಲ್ಲಿ ಸಂಚರಿಸುವ ಭಾರಿ ವಾಹನಗಳ ಹೊಗೆಯಿಂದ ಅಲ್ಲಿನ ಗಾಳಿ ಗುಣಮಟ್ಟದಲ್ಲಿ ಸ್ವಲ್ಪ ವ್ಯಾತ್ಯಾಸ ಕಾಣುಬಹುದು. ಕಲಬುರಗಿಯಲ್ಲಿ ಸಿಮೆಂಟ್ ಕಾರ್ಖಾನೆಗಳ ಧೂಳು ಮತ್ತು ಪ್ರಸ್ತುತ ಇರುವ ಒಣ ಹವಾಮಾನದ ಗಾಳಿಯಿಂದ ಅಲ್ಲಿಯೂ ಗಾಳಿಯ ಗುಣಮಟ್ಟದಲ್ಲಿ ಕಳಪೆ ಕಾಣಿಸಬಹುದು. ಮಾಲಿನ್ಯ ಹೆಚ್ಚಿರುವ ಕೈಗಾರಿಕಾ ವಲಯಗಳಲ್ಲಿ ಓಡಾಡುವಾಗ N95 ಮಾಸ್ಕ್ ಧರಿಸುವುದು ಗಾಳಿಯಲ್ಲಿನ ಸೂಕ್ಷ್ಮ ಕಣಗಳನ್ನು (PM 2.5) ತಡೆಯಲು ನೆರವಾಗುತ್ತದೆ. AQI ಮಟ್ಟ 100 ದಾಟಿರುವ ಪ್ರದೇಶಗಳಲ್ಲಿ ಮುಂಜಾನೆಯ ವಾಕಿಂಗ್ ಅಥವಾ ಹೊರಾಂಗಣ ವ್ಯಾಯಾಮಗಳನ್ನು ಮಾಡಬೇಡಿ. ಮನೆಯ ಒಳಗೇ ಯೋಗ ಅಥವಾ ಲಘು ವ್ಯಾಯಾಮ ಮಾಡಿ ಎಂಬ ಎಚ್ಚರಿಕೆಯನ್ನು ಕೂಡ ನೀಡಲಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 7:29 am, Sat, 20 June 26