Headlines

ಇಂದಿರಾನಗರದ ಪಾದಚಾರಿ ಮಾರ್ಗ ಅಪಾಯದಲ್ಲಿ: ಕೆನಡಾ ವ್ಯಕ್ತಿಯ ಹೇಳಿದ್ದೇನು? – Kannada News | Bengaluru Indiranagar: Unsafe Footpaths Exposed by Viral Canadian Post

ಬೆಂಗಳೂರು, ಡಿ.22: ಬೆಂಗಳೂರಿನ ದುಬಾರಿ ನಗರಗಳಲ್ಲಿ ಒಂದಾದ ಇಂದಿರಾನಗರದಲ್ಲಿ ನಡೆದ ಅಪಾಯಕಾರಿ ವಿಚಾರದ ಬಗ್ಗೆ ಕೆನಾಡ ವ್ಯಕ್ತಿಯೊಬ್ಬರು ಇನ್ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕೆನಡಾದ ಪ್ರಜೆಯೊಬ್ಬರು ತಮ್ಮ ಮಗನ ಜತೆಗೆ ಇಂದಿರಾನಗರದಲ್ಲಿ (Indiranagar footpaths) ಮುರಿದ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗಿದ್ದಾರೆ, ಇದೊಂದು ಅಪಾಯಕಾರಿ ಪುಟ್​ಪಾತ್ ಎಂದು ಕ್ಯಾಲೆಬ್ ಫ್ರೈಸೆನ್ ಹೇಳಿದ್ದಾರೆ. ಈ ವಿಡಿಯೋದಲ್ಲಿ ಅವರು ಮಗನೊಂದಿಗೆ ಇಂದಿರಾನಗರದ ಡಬಲ್ ರಸ್ತೆಯ ಉದ್ದಕ್ಕೂ ಮುರಿದ ಪಾದಚಾರಿ ಮಾರ್ಗಗಳು, ತೆರೆದ ಅಂತರಗಳು, ಅತಿಕ್ರಮಣಗಳು ಮತ್ತು ಅಸಮವಾದ ಸ್ಲ್ಯಾಬ್‌ಗಳಲ್ಲಿ ಸಂಚರಿಸುವುದನ್ನು ಕಾಣಬಹುದು.

ಬಿರುಕು ಬಿಟ್ಟ ಪಾದಚಾರಿ ದಾರಿಯಲ್ಲಿ ಸರಿಯಾದ ಸ್ಲ್ಯಾಬ್‌ಗಳು ಇಲ್ಲ. ಈ ತೆರೆದ ರಸ್ತೆಗಳಿಂದ ಕೆಟ್ಟ ವಾಸನೆಗಳು ಕೂಡ ಬರುತ್ತದೆ ಎಂದು ಈ ಪೋಸ್ಟ್​​​ನಲ್ಲಿ ಬರೆದುಕೊಂಡಿದ್ದಾರೆ. ಪಾದಚಾರಿ ರಸ್ತೆಯಲ್ಲೇ ಅಡ್ಡಲಾಗಿ ಸಸ್ಯಗಳು ಹಾಗೂ ಮರಗಳು ಬೆಳೆದುಕೊಂಡಿದೆ. ಇನ್ನು ಈ ಪಾದಚಾರಿ ರಸ್ತೆಯನ್ನು ಬಿಟ್ಟು ರಸ್ತೆಯಲ್ಲಿ ಹೋಗುವ ಎಂದರೆ ವಾಹನಗಳು ಹಿಗ್ಗಾಮುಗ್ಗಾ ಹೋಗುತ್ತದೆ. ಹಾಗೂ ಜತೆಗೆ ನನ್ನ ಮಗ ಕೂಡ ಇರುವ ಕಾರಣ ರಸ್ತೆಯಲ್ಲಿ ಹೋಗಲು ಭಯಾವಾಗಿದೆ ಎಂದು ಬರೆದುಕೊಂಡಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:

ಇಂದಿರಾನಗರ ತುಂಬಾ ದುಬಾರಿ ನಗರ, ಆದರೆ ಇಲ್ಲಿ ರಸ್ತೆಗಳು ಹಾಗೂ ಪಾದಚಾರಿ ಮಾರ್ಗಗಳು ತುಂಬಾ ಕೆಟ್ಟಾಗಿದೆ ಎಂದು ಈ ವಿಡಿಯೋದಲ್ಲಿ ಹೇಳಿದ್ದಾರೆ. ಪಾದಚಾರಿ ಮಾರ್ಗಗಳು ಸಂಚಾರ ಮಾಡಲಾಗದಷ್ಟು ಹಾನಿಯಾಗಿದೆ. ಜತೆಗೆ ಇಲ್ಲಿ ಕುಂಡಗಳಲ್ಲಿ ಇಟ್ಟಿರುವ ಸಸ್ಯಗಳು, ಮರಗಳು ಮತ್ತು ವಾಹನಗಳಿಂದ ಈ ರಸ್ತೆ ಅತಿಕ್ರಮಿಸಲ್ಪಟ್ಟಿವೆ. ದುಬಾರಿ ನಗರದಲ್ಲಿ ಒಂದಾದ ಇಂದಿರಾನಗರದ ಮೂಲಸೌಕರ್ಯಗಳ ಸ್ಥಿತಿ ಹೇಗಿದೆ ಎಂಬುದನ್ನು ಇಲ್ಲಿ ತೋರಿಸಿದ್ದಾರೆ. ಆದರೆ ಇತರ ವಿಚಾರಗಳಲ್ಲಿ ಭಾರತಕ್ಕಿಂತ ಇಂದಿರಾನಗರ ಉತ್ತಮವಾಗಿದೆ ಎಂದು ಹೇಳಿದ್ದಾರೆ. ಕನಿಷ್ಠ ಪಕ್ಷ ಇಂದಿರಾನಗರದಲ್ಲಿ ಪಾದಚಾರಿ ಮಾರ್ಗಗಳಿವೆ. ಭಾರತದ ಮಹಾನಗರಗಳಲ್ಲಿನ ಅನೇಕ ಪ್ರದೇಶಗಳ ಈ ಸೌಲಭ್ಯಗಳು ಇಲ್ಲ. ಮುಂಬರುವ ದಶಕಗಳಲ್ಲಿ ಈ ಪರಿಸ್ಥಿತಿ ಬದಲಾಗುವ ಭರವಸೆ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಈ ಭಾಗದ ಜನರಿಗೆ ಸಿಹಿಸುದ್ದಿ: 6 ವರ್ಷಗಳ ನಂತರ ಸಂಚಾರಕ್ಕೆ ಮುಕ್ತವಾಗಲಿದೆ ಈ ರಸ್ತೆ

ಇನ್ನು ಈ ವಿಡಿಯೋ ನೋಡಿ ಅನೇಕ ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ. ಇದು ತುಂಬಾ ದುಃಖಕರ ಮತ್ತು ಭಯಾನಕವಾಗಿದೆ. ನನಗೆ ಇಡೀ ವೀಡಿಯೊವನ್ನು ನೋಡಲು ಸಾಧ್ಯವಿಲ್ಲ ಎಂದು ಒಬ್ಬರು ಹೇಳಿದ್ದಾರೆ. ಮತ್ತೊಬ್ಬರು ನಾನು ಪ್ರತಿದಿನ ಈ ಫುಟ್‌ಪಾತ್‌ಗಳಲ್ಲಿ ನಡೆಯುತ್ತೇನೆ, ಆದರೆ ನಾನು ಅವುಗಳಿಗೆ ಎಷ್ಟು ಒಗ್ಗಿಕೊಂಡಿದ್ದೇನೆಂದರೆ ನನಗೆ ಇದರ ಬಗ್ಗೆ ಗಮನವೇ ಇರಲಿಲ್ಲ ಎಂದು ಹೇಳಿದ್ದಾರೆ. ದಯವಿಟ್ಟು ಇಲ್ಲಿ ನಡೆಯಬೇಡಿ ಎಂದು ಕೆಲವು ನೆಟ್ಟಿಗರು ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:14 am, Mon, 22 December 25

Source link

Leave a Reply

Your email address will not be published. Required fields are marked *