ಶಿರಸಿ, ಏ.28: ಕರ್ನಾಟಕದ ಸರ್ಕಾರಿ ಸಾರಿಗೆ ವ್ಯವಸ್ಥೆ ಎಷ್ಟೊಂದು ಕೆಟ್ಟೋಗಿದೆ ಎಂದರೆ ಇದಕ್ಕೆ ಉತ್ತಮ ಉದಾಹರಣೆ ಇಲ್ಲಿದೆ ನೋಡಿ. ಸರ್ಕಾರಕ್ಕೆ ತೆರಿಗೆ ಪಾವತಿಸುವ ಸಾರ್ವಜನಿಕರಿಗೆ ಸಿಗುತ್ತಿರುವ ಪ್ರತಿಫಲ ಮಾತ್ರ ಶೂನ್ಯ ಎನ್ನುವುದಕ್ಕೆ ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿಯೇ ಸಾಕ್ಷಿ. ಈ ರಸ್ತೆಯ ಸ್ಥಿತಿ ಎಷ್ಟು ಭೀಕರವಾಗಿದೆಯೆಂದರೆ, ಇದು ಹೆದ್ದಾರಿಯೋ ಅಥವಾ ಆಫ್-ರೋಡ್ ರ‍್ಯಾಲಿ ನಡೆಯುವ ಕೆಸರು ಗದ್ದೆಯೋ ಎಂಬ ಅನುಮಾನ ಮೂಡುತ್ತಿದೆ.
ಇಲ್ಲಿ ವೈರಲ್ ಆಗಿರುವ ದೃಶ್ಯಗಳಲ್ಲಿ ಕೆಎಸ್‌ಆರ್‌ಟಿಸಿ (KSRTC) ಬಸ್‌ವೊಂದು ಕೆಸರಿನಲ್ಲಿ ಸಿಲುಕಿ ಮುಂದೆ ಸಾಗಲು ಹರಸಾಹಸ ಪಡುತ್ತಿರುವುದು ಕಂಡುಬಂದಿದೆ. ಬಲಿಷ್ಠವಾದ ಸರ್ಕಾರಿ ಬಸ್‌ಗಳೇ ಈ ರಸ್ತೆಯಲ್ಲಿ ಸಂಚರಿಸಲು ಅಸಹಾಯಕವಾಗಿರುವಾಗ, ದ್ವಿಚಕ್ರ ವಾಹನಗಳು ಮತ್ತು ಸಣ್ಣ ಕಾರುಗಳ ಪರಿಸ್ಥಿತಿ ಹೇಳತೀರದು. ತುರ್ತು ಚಿಕಿತ್ಸೆಗೆ ತೆರಳುವ ಆಂಬ್ಯುಲೆನ್ಸ್‌ಗಳೂ ಇಲ್ಲಿ ಗಂಟೆಗಟ್ಟಲೆ ಸಿಲುಕಿಕೊಳ್ಳುವ ಭೀತಿ ಎದುರಾಗಿದೆ. ಈ ಬಗ್ಗೆ ಪೋಸ್ಟ್ವೊಂದನ್ನು @KarnatakaPortfolio ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ಇದನ್ನೂ ಓದಿ: ‘ಸೋಫಾ ಅಳತೆ ಮಾಡಿಕೊಡು ಬಾ’ ಎಂದು ಕರೆದು ಬರ್ಬರವಾಗಿ ಹತ್ಯೆ; ಬಾರ್ ಎದುರೇ ಯುವಕನ ತಲೆ ಮೇಲೆ ಕಲ್ಲು ಎತ್ತಿಹಾಕಿದ ಆಟೋ ಚಾಲಕ!
ಇಲ್ಲಿದೆ ನೋಡಿ ವಿಡಿಯೋ:
Public Pays, System Fails Roads Reduced to Slush and Shame
The condition of this road is absolutely shocking. This is the Sirsi–Haveri National Highway, yet it hardly resembles a highway in any sense. A KSRTC bus can be seen struggling just to move forward, battling through… pic.twitter.com/5rYWBlLneL
— Karnataka Portfolio (@karnatakaportf) April 27, 2026
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ಮಾರ್ಗದ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ ಸಾರ್ವಜನಿಕರು ರಸ್ತೆ ತೆರಿಗೆಯನ್ನು ಸರಿಯಾದ ಸಮಯದಲ್ಲಿ ಪಾವತಿಸುತ್ತಿದ್ದರೂ, ಕನಿಷ್ಠ ಗುಣಮಟ್ಟದ ರಸ್ತೆಯನ್ನು ನೀಡಲು ಸರ್ಕಾರ ವಿಫಲವಾಗಿದೆ ಎಂದು ದೂರಿದ್ದಾರೆ. ಹೊಂಡ-ಗುಂಡಿಗಳು ಹಾಗೂ ಕೆಸರಿನಿಂದಾಗಿ ಈ ರಸ್ತೆಯು ಮೃತ್ಯುಪಂಜರವಾಗಿ ಮಾರ್ಪಟ್ಟಿದೆ ಎಂದು ಹಲವು ಜನ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಕೇವಲ ನೆಪಗಳನ್ನು ಹೇಳುವುದನ್ನು ಬಿಟ್ಟು ಕೂಡಲೇ ಈ ಹೆದ್ದಾರಿಯ ದುರಸ್ತಿಗೆ ಮುಂದಾಗಬೇಕಿದೆ. ಇಲ್ಲದಿದ್ದರೆ ದೊಡ್ಡ ಮಟ್ಟದ ಅಪಘಾತ ಸಂಭವಿಸುವ ಮುನ್ನವೇ ಎಚ್ಚೆತ್ತುಕೊಳ್ಳುವುದು ಒಳಿತು ಎಂದು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿನ
Published On – 8:26 pm, Tue, 28 April 26