ಇನ್ನೇನು ಸರ್ಕಾರದ ವತಿಯಿಂದ ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮವಾಗಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರದ ವಡೇರಹಳ್ಳಿ ಬಳಿ ನಡೆದಿದೆ. ವಿಶೇಷ ಚೇತನರಿಗೆ ನೀಡಲು ಸರ್ಕಾರದ CSR ಅನುದಾನದಡಿಯಲ್ಲಿ ಟೊಯೋಟಾ ಕಂಪನಿಯ 4 ಚಕ್ರದ 32 ವಾಹನಗಳನ್ನು ಖರೀದಿಸಿ ಭೋಜರಾಜ್ ಎಂಬವರಿಗೆ ಸೇರಿದ ಗೋದಾಮಿನಲ್ಲಿ ಇಡಲಾಗಿತ್ತು. ಆದ್ರೆ, ಇಂದು (ಏಪ್ರಿಲ್ 23) ಏಕಾಏಕಿ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 4 ಚಕ್ರದ 32 ವಾಹನಗಳ ಪೈಕಿ 10 ವಾಹನಗಳು ಸುಟ್ಟು ಭಸ್ಮವಾಗಿವೆ.
Published on: Apr 23, 2026 10:29 PM