ಇರಾನ್​ಗೆ ತೈಲ ಮಾರಾಟದಿಂದ ದಿನಕ್ಕೆ 7,000 ಕೋಟಿ ರೂ ಆದಾಯ; ಇರಾನ್​ಗೂ ಭರ್ಜರಿ ಆಯಿಲ್ ಬ್ಯುಸಿನೆಸ್

ಇರಾನ್​ಗೆ ತೈಲ ಮಾರಾಟದಿಂದ ದಿನಕ್ಕೆ 7,000 ಕೋಟಿ ರೂ ಆದಾಯ; ಇರಾನ್​ಗೂ ಭರ್ಜರಿ ಆಯಿಲ್ ಬ್ಯುಸಿನೆಸ್

ನವದೆಹಲಿ, ಮಾರ್ಚ್ 26: ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇಸ್ರೇಲ್ ದೇಶಗಳು ಇರಾನ್ ವಿರುದ್ಧ ಶುರು ಮಾಡಿದ ಯುದ್ಧದಿಂದ ಯಾರಿಗೆ ಲಾಭ, ಯಾರಿಗೆ ನಷ್ಟ ಆಗುತ್ತಿದೆಯೋ ಸ್ಪಷ್ಟ ಇಲ್ಲ, ಆದರೆ ರಷ್ಯಾ ಮತ್ತು ಇರಾನ್​ನ ಆಯಿಲ್ ಬ್ಯುಸಿನೆಸ್ ಬಹಳ ಜೋರಾಗಿ ನಡೆಯುತ್ತಿದೆ. ಎರಡೂ ದೇಶಗಳು ತೈಲ ಮಾರಾಟದಿಂದ ಸಾವಿರಾರು ಕೋಟಿ ರೂ ಲಾಭ ಮಾಡುತ್ತಿವೆ. ತಂತಮ್ಮ ಯುದ್ಧ ಮುಂದುವರಿಸಲು ಈ ದೇಶಗಳಿಗೆ ಫಂಡಿಂಗ್ ಸಿಕ್ಕಂತಾಗಿದೆ.

ವಿಶ್ವದ ಶೇ. 20ಕ್ಕಿಂತಲೂ ಹೆಚ್ಚು ತೈಲ ಪೂರೈಕೆಯಾಗುವ ಹಾರ್ಮುಜ್ ಜಲಸಂಧಿಯ ಸಂಪೂರ್ಣ ನಿಯಂತ್ರಣವು ಈಗ ಇರಾನ್ ಬಳಿ ಇದೆ. ಈ ಕಿರು ಜಲಮಾರ್ಗದಲ್ಲಿ ಇರಾನ್ ಬಿಟ್ಟು ಬೇರೆ ದೇಶಗಳ ಹಡಗುಗಳು ಸಾಗುತ್ತಿಲ್ಲ. ಯುದ್ಧ ಶುರುವಾದಾಗಿನಿಂದ ತೈಲಕ್ಕೆ ಬಂದಿರುವ ಬೇಡಿಕೆಯು ಇರಾನ್​ಗೆ ಒಳ್ಳೆಯ ಬ್ಯುಸಿನೆಸ್ ತಂದಿದೆ.

ಇದನ್ನೂ ಓದಿ: ತೈಲ ಪೂರೈಕೆ ಕುರಿತು ಅಭಯ ನೀಡಿ, ವದಂತಿ ಹರಡುವವರಿಗೆ ಎಚ್ಚರಿಕೆ ಕೊಟ್ಟ ಕೇಂದ್ರ ಸರ್ಕಾರ

ಇರಾನ್ ಈಗ ದಿನಕ್ಕೆ 16 ಲಕ್ಷ ಬ್ಯಾರಲ್ ಕಚ್ಛಾ ತೈಲವನ್ನು ಮಾರುತ್ತಿದೆ. ಯುದ್ಧಕ್ಕೆ ಮುಂಚೆ ಇರಾನ್​ಗೆ ವಿವಿಧ ನಿಷೇಧಗಳನ್ನು ಹಾಕಿದ್ದ ಅಮೆರಿಕವು ಈಗ ತೈಲ ಮಾರುವಂತೆ ಇರಾನ್​ಗೆ ದುಂಬಾಲು ಬಿದ್ದಿದೆ. ಯುದ್ಧ ಮುಂದುವರಿಸಲು ಬೇಕಾದ ಫಂಡಿಂಗ್ ಅನ್ನು ಇರಾನ್​ಗೆ ಸಿಗುತ್ತಿರಬಹುದು. ಇರಾನ್​ನಿಂದ ಅತಿಹೆಚ್ಚು ತೈಲ ಪಡೆಯುತ್ತಿರುವುದು ಚೀನಾ.

ರಷ್ಯಾ ತೈಲಕ್ಕೆ ಬಹಳ ಡಿಮ್ಯಾಂಡ್

ಇರಾನ್ ಯುದ್ಧ ಶುರುವಾದ ಬಳಿಕ ರಷ್ಯಾ ತೈಲಕ್ಕೆ ವಿಪರೀತ ಬೇಡಿಕೆ ಬಂದಿದೆ. ರಷ್ಯನ್ ತೈಲ ಖರೀದಿಸಲು ಎಲ್ಲಾ ದೇಶಗಳಿಗೂ ಅಮೆರಿಕವೇ ಹಸಿರು ನಿಶಾನೆ ತೋರಿದೆ. ವರದಿ ಪ್ರಕಾರ ರಷ್ಯಾಗೆ ದಿನವೊಂದಕ್ಕೆ 760 ಮಿಲಿಯನ್ ಡಾಲರ್ ಆದಾಯವು ಸಿಗುತ್ತಿದೆ. ಅಂದರೆ, ತೈಲ ಮಾರಾಟದಿಂದ ರಷ್ಯಾ ದಿನಕ್ಕೆ 7,000 ಕೋಟಿ ರೂ ಹಣ ಗಳಿಸುತ್ತಿದೆ.

ಇದನ್ನೂ ಓದಿ: ಪೆಟ್ರೋಲ್, ಡೀಸಲ್ ಕೊರತೆ ಇಲ್ಲ, ಗಾಬರಿ ಬೇಡ: ಪೆಟ್ರೋಲಿಯಂ ಕಂಪನಿಗಳಿಂದ ಸ್ಪಷ್ಟನೆ

ಉಕ್ರೇನ್ ಯುದ್ಧ ಶುರುವಾದ ಬಳಿಕ ರಷ್ಯಾ ಮೇಲೆ ಅಮೆರಿಕ ನಿಷೇಧ ಹಾಕಿದ ಪರಿಣಾಮ ರಷ್ಯಾ ಕಡಿಮೆ ಬೆಲೆಗೆ ತೈಲ ಪೂರೈಕೆ ಮಾಡುತ್ತಿತ್ತು. ಚೀನಾ ಮತ್ತು ಭಾರತ ಹಾಗೂ ಇನ್ನೂ ಇತರ ಕೆಲ ದೇಶಗಳು ಅಗ್ಗದ ಬೆಲೆಗೆ ರಷ್ಯನ್ ತೈಲ ಪಡೆಯುತ್ತಿದ್ದವು. ಈಗ ತೈಲಕ್ಕೆ ಬೇಡಿಕೆ ಹೆಚ್ಚಿರುವುದರಿಂದ ರಷ್ಯನ್ ತೈಲ ಡಿಸ್ಕೌಂಟ್​ನಲ್ಲಿ ಸಿಗುತ್ತಿಲ್ಲ. ಹೆಚ್ಚುವರಿ ಬೆಲೆಗೆ ರಷ್ಯಾ ತನ್ನ ತೈಲವನ್ನು ಮಾರುತ್ತಿದೆ. ಭಾರತಕ್ಕೆ ಈ ಹಿಂದೆ ಸಿಗುತ್ತಿದ್ದ ಡಿಸ್ಕೌಂಟ್ ಈಗ ಇಲ್ಲ. ಚೀನಾಗೆ ನೀಡಿದ್ದ ಡಿಸ್ಕೌಂಟ್ ಅರ್ಧದಷ್ಟು ಕಡಿಮೆ ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *