Headlines

ಇರಾನ್​ನ ಬುಶೆಹರ್ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ಅಮೆರಿಕ ದಾಳಿ – Kannada News | US Airstrike Hits Iran City Bushehr Nuclear Power Plant

ಟೆಹ್ರಾನ್, ಜುಲೈ 9: ಅಮೆರಿಕ ಮತ್ತು ಇರಾನ್ (Iran War) ನಡುವಿನ ಯುದ್ಧವು ಮತ್ತೊಮ್ಮೆ ಆರಂಭವಾಗಿದೆ. ಇರಾನ್‌ನ ಬುಶೆಹರ್ ಪರಮಾಣು ವಿದ್ಯುತ್ ಸ್ಥಾವರವನ್ನು (Bushehr Nuclear Power Plant) ಟಾರ್ಗೆಟ್ ಮಾಡಿಕೊಂಡು ಅಮೆರಿಕ ಭೀಕರ ವೈಮಾನಿಕ ದಾಳಿ ನಡೆಸಿದೆ ಎಂದು ಇರಾನ್ ಗಂಭೀರ ಆರೋಪ ಮಾಡಿದೆ. ಇರಾನ್ ಸರ್ಕಾರಿ ಮೂಲಗಳ ಪ್ರಕಾರ, ಬುಶೆಹರ್ ನಗರದಲ್ಲಿರುವ ಇರಾನ್‌ನ ಏಕೈಕ ಸಕ್ರಿಯ ಪರಮಾಣು ವಿದ್ಯುತ್ ಸ್ಥಾವರದ ಬಳಿ ಅಮೆರಿಕದ ಪಡೆಗಳು ವೈಮಾನಿಕ ದಾಳಿ ನಡೆಸಿವೆ. ಜಾಗತಿಕವಾಗಿ ಅತ್ಯಂತ ಸೂಕ್ಷ್ಮ ಎಂದು ಪರಿಗಣಿಸಲಾಗಿರುವ ಈ ಪರಮಾಣು ನೆಲೆಯನ್ನೇ ಅಮೆರಿಕ ಗುರಿಯಾಗಿಸಿಕೊಂಡಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಕಳೆದ ಕೆಲವು ದಿನಗಳಿಂದ ಉಭಯ ದೇಶಗಳ ನಡುವೆ ಯುದ್ಧ ನಿಲ್ಲಿಸಲು ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆಗಳು ನಡೆಯುತ್ತಿದ್ದವು. ಆದರೆ, ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಮೇಲಿನ ದಾಳಿ ಮತ್ತು ಅದಕ್ಕೆ ಪ್ರತಿಯಾಗಿ ಅಮೆರಿಕ ನಡೆಸುತ್ತಿರುವ ಸರಣಿ ದಾಳಿಗಳಿಂದಾಗಿ, ಇಷ್ಟು ದಿನಗಳ ಕಾಲ ನಡೆಸಲಾಗಿದ್ದ ಕದನ ವಿರಾಮ ಮತ್ತು ಶಾಂತಿ ಒಪ್ಪಂದದ ಮಾತುಕತೆಗಳು ಈಗ ಮುಕ್ತಾಯವಾಗಿದೆ. ತನ್ನ ಪರಮಾಣು ಸ್ಥಾವರವನ್ನು ಗುರಿಯಾಗಿಸಿಕೊಂಡಿರುವುದಕ್ಕೆ ಇರಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಅಂತಾರಾಷ್ಟ್ರೀಯ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹೇಳಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *