ಇರಾನ್ ಮೇಲೆ ಪರಮಾಣು ದಾಳಿ ನಡೆಸುತ್ತಾ ಅಮೆರಿಕ? ಶ್ವೇತಭವನ ಹೇಳಿದ್ದೇನು?

ಇರಾನ್ ಮೇಲೆ ಪರಮಾಣು ದಾಳಿ ನಡೆಸುತ್ತಾ ಅಮೆರಿಕ? ಶ್ವೇತಭವನ ಹೇಳಿದ್ದೇನು?

ವಾಷಿಂಗ್ಟನ್, ಏಪ್ರಿಲ್ 7: ಇರಾನ್ ಒಪ್ಪಂದ ಮಾಡಿಕೊಳ್ಳದಿದ್ದರೆ ಇಡೀ ನಾಗರಿಕತೆಯು ಇಂದು ರಾತ್ರಿ ಕೊನೆಗೊಳ್ಳುತ್ತದೆ ಎಂದು ಡೊನಾಲ್ಡ್ ಟ್ರಂಪ್ (Donald Trump) ಇಂದು ಸಂಜೆ ಬೆದರಿಕೆ ಹಾಕಿದ್ದರು. ಡೊನಾಲ್ಡ್ ಟ್ರಂಪ್ ಅವರ ಈ ಹೇಳಿಕೆ ಇರಾನ್ ಮೇಲಿನ ಪರಮಾಣು ದಾಳಿಯ ಭಯವನ್ನು ಮತ್ತೆ ಮುನ್ನೆಲೆಗೆ ತಂದಿತ್ತು. ಇದರ ನಡುವೆ ಒಪ್ಪಂದ ಮಾಡಿಕೊಳ್ಳಲು ಟ್ರಂಪ್ ನೀಡಿದ ಗಡುವು ಕೊನೆಗೊಳ್ಳುವ ಮೊದಲೇ ಯುಎಸ್ ಮಿಲಿಟರಿ ಇರಾನ್‌ನ ಪ್ರಮುಖ ತೈಲ ಕೇಂದ್ರವಾದ ಖಾರ್ಗ್ ದ್ವೀಪದ ಮೇಲೆ ದಾಳಿ ಮಾಡಿತ್ತು. ಕದನವಿರಾಮಕ್ಕೆ ಒಪ್ಪದಿದ್ದರೆ ಅಮೆರಿಕ ಇರಾನ್ ಮೇಲೆ ಪರಮಾಣು ದಾಳಿ ನಡೆಸುತ್ತದೆಯೇ? ಎಂಬ ಬಗ್ಗೆ ಶ್ವೇತಭವನ ಸ್ಪಷ್ಟನೆ ನೀಡಿದೆ.

ಮಧಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಇರಾನ್ ವಿರುದ್ಧ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವ ಬಗ್ಗೆ ಹರಡಿರುವ ಸುದ್ದಿಗಳನ್ನು ಶ್ವೇತಭವನ ಇಂದು ನಿರಾಕರಿಸಿದೆ. ನಿಗದಿಪಡಿಸಿದ ಗಡುವಿನೊಳಗೆ ಇರಾನ್ ಆಯಕಟ್ಟಿನ ನಿರ್ಣಾಯಕ ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲು ವಿಫಲವಾದರೆ ಇಡೀ ನಾಗರಿಕತೆಯು ಸಾಯುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಟು ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳ ನಂತರ ಈ ಸ್ಪಷ್ಟೀಕರಣ ಬಂದಿದೆ.

ಇದನ್ನೂ ಓದಿ: ಒಪ್ಪಂದ, ಶರಣಾಗತಿ ಅಥವಾ ಅತ್ಯಂತ ಮಾರಕ ದಾಳಿ? ಇರಾನ್​ಗೆ ಟ್ರಂಪ್ ಗಡುವು, ವಿನಾಶಕ್ಕೆ ಕ್ಷಣಗಣನೆ

“ನಮ್ಮ ನಾಯಕರು ನೀಡಿದ ಯಾವ ಹೇಳಿಕೆಗಳೂ ಪರಮಾಣು ದಾಳಿಯ ಸಾಧ್ಯತೆಯನ್ನು ಸೂಚಿಸುವುದಿಲ್ಲ” ಎಂದು ಅಮೆರಿಕದ ಶ್ವೇತಭವನ ಹೇಳಿದೆ.
ಟ್ರೂತ್ ಸೋಶಿಯಲ್ ಬಗ್ಗೆ ಟ್ರಂಪ್ ಈ ಬಗ್ಗೆ ಬರೆದಿದ್ದಾರೆ. “ಇಡೀ ನಾಗರಿಕತೆಯು ಇಂದು ರಾತ್ರಿ ಸಾಯುತ್ತದೆ, ಮತ್ತೆಂದೂ ಇರಾನ್​ನ ಜನರು ಹಿಂತಿರುಗುವುದಿಲ್ಲ. ಆ ರೀತಿ ಆಗಬೇಕೆಂದು ನಾನು ಬಯಸುವುದಿಲ್ಲ. ಆದರೆ ಆ ರೀತಿ ಆಗುವ ಸಾಧ್ಯತೆಯೂ ಇಲ್ಲದಿಲ್ಲ” ಎಂದು ಟ್ರಂಪ್ ಎಚ್ಚರಿಸಿದ್ದರು.

ಇದನ್ನೂ ಓದಿ: ಇಂದು ರಾತ್ರಿ ಇಡೀ ದೇಶವೇ ನಾಶವಾಗುತ್ತದೆ; ಗಡುವು ಸಮೀಪಿಸುತ್ತಿದ್ದಂತೆ ಇರಾನ್​ಗೆ ಟ್ರಂಪ್ ಬೆದರಿಕೆ

“ಇಂದು ರಾತ್ರಿ ಏನಾಗಲಿದೆ ಎಂಬುದು ಯಾರಿಗೂ ತಿಳಿದಿಲ್ಲ. ಈ ರಾತ್ರಿ ಪ್ರಪಂಚದ ದೀರ್ಘ ಮತ್ತು ಸಂಕೀರ್ಣ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಕ್ಷಣಗಳಲ್ಲಿ ಒಂದಾಗಲಿದೆ. 47 ವರ್ಷಗಳ ಸುಲಿಗೆ, ಭ್ರಷ್ಟಾಚಾರ ಮತ್ತು ಸಾವು ಅಂತಿಮವಾಗಿ ಕೊನೆಗೊಳ್ಳುತ್ತದೆ. ಇರಾನ್‌ನ ಜನರನ್ನು ದೇವರು ಆಶೀರ್ವದಿಸಲಿ!” ಎಂದು ಟ್ರಂಪ್ ಹೇಳಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *