ಟೆಹ್ರಾನ್, ಮೇ 1: ಇರಾನ್ನಲ್ಲಿ ಇನ್ನೂ ಯುದ್ಧದ ಭೀತಿ ಕಡಿಮೆಯಾಗಿಲ್ಲ. ಇರಾನ್ನಲ್ಲಿನ (Iran War) ಪರಿಸ್ಥಿತಿ ಈಗ ಹೇಗಿದೆ ಎಂಬುದನ್ನು ತಿಳಿಯಲು ಟಿವಿ9 ತಂಡ ಟೆಹ್ರಾನ್‌ಗೆ ತೆರಳಿದೆ. ಈ ಮೂಲಕ ಇರಾನ್ನಿಂದ ನೇರ ವರದಿ ಮಾಡುತ್ತಿರುವ ಮೊದಲ ಭಾರತೀಯ ಚಾನೆಲ್ ಎಂಬ ಹೆಗ್ಗಳಿಕೆಗೆ ಟಿವಿ9 ಪಾತ್ರವಾಗಿದೆ. ಟಿವಿ9 ವರದಿಗಾರ್ತಿ ಸುಮೈರಾ ಖಾನ್ ಇರಾಕ್ ಮೂಲಕ ಟೆಹ್ರಾನ್‌ಗೆ ಆಗಮಿಸಿ ಇರಾನ್ನಿಂದಲೇ ವರದಿ ಮಾಡುತ್ತಿದ್ದಾರೆ. ರಸ್ತೆ ಮತ್ತು ಕಾಲ್ನಡಿಗೆಯ ಮೂಲಕ ಪ್ರಯಾಣಿಸಿದ ಅವರು ಫ್ರೀಡಂ ಸ್ಕ್ವೇರ್ ಬಳಿಯಿಂದ ಅಲ್ಲಿನ ಪರಿಸ್ಥಿತಿಯ ಬಗ್ಗೆ ವರದಿ ಮಾಡಿದ್ದಾರೆ.
ಟಿವಿ9 ಭಾರತ್‌ವರ್ಷ್ ವರದಿಗಾರ್ತಿ ಸುಮೈರಾ ಖಾನ್ ಟೆಹ್ರಾನ್‌ನಿಂದ ವರದಿ ಮಾಡುತ್ತಿದ್ದಾರೆ. ಸುಮೈರಾ ಫ್ರೀಡಂ ಸ್ಕ್ವೇರ್‌ನಿಂದ ಟೆಹ್ರಾನ್‌ನಲ್ಲಿನ ವಿನಾಶ ಮತ್ತು ನೆಲದ ಪರಿಸ್ಥಿತಿಗಳ ಚಿತ್ರಣವನ್ನು ಹಂಚಿಕೊಂಡಿದ್ದಾರೆ. ಟೆಹ್ರಾನ್‌ಗೆ ಅವರ ಪ್ರಯಾಣ ಸುಲಭವಾಗಿರಲಿಲ್ಲ. ಅವರು ಮೊದಲು ವಿಮಾನದ ಮೂಲಕ ಇರಾಕ್‌ಗೆ ಪ್ರಯಾಣ ಬೆಳೆಸಿದರು. ನಂತರ ಬಾಗ್ದಾದ್‌ನಿಂದ ಸುದೀರ್ಘವಾದ ಕಾರು ಪ್ರಯಾಣ ಮಾಡಿದರು. ನಂತರ ಸ್ವಲ್ಪ ದೂರ ನಡೆಯಬೇಕಾಯಿತು. ಅನೇಕ ತೊಂದರೆಗಳು ಮತ್ತು ಸವಾಲುಗಳ ಹೊರತಾಗಿಯೂ, ಸುಮೈರಾ ಖಾನ್ ಟೆಹ್ರಾನ್ ತಲುಪಿದರು.
ಸುಮೈರಾ ಅವರು ಫ್ರೀಡಂ ಸ್ಕ್ವೇರ್ ಹಲವಾರು ದಾಳಿಗಳನ್ನು ಕಂಡಿದ್ದರೂ ತಕ್ಷಣ ಅದನ್ನು ಇರಾನ್ ಮರು ನಿರ್ಮಿಸಿದೆ. ದಾಳಿಗಳು ಹೋಟೆಲ್‌ಗಳು ಮತ್ತು ಕಟ್ಟಡಗಳ ಗಾಜಿನ ಕಿಟಕಿಗಳನ್ನು ಸಹ ಹಾನಿಗೊಳಿಸಿವೆ. ಈಗಾಗಲೇ ಅವುಗಳನ್ನು ದುರಸ್ತಿ ಮಾಡಲಾಗಿದೆ. ಟೆಹ್ರಾನ್‌ನಲ್ಲಿ ಸಾಮಾನ್ಯ ಜೀವನ ಎಂದಿನಂತೆ ಮುಂದುವರೆದಿದೆ ಎಂದು ಸುಮೈರಾ ವಿವರಿಸಿದರು. ಸುಮೈರಾ ಇಂಕಿಲಾಬ್ ಬೀದಿಯಲ್ಲಿರುವ ಅಯತೊಲ್ಲಾ ಅಲಿ ಖಮೇನಿ ಅವರ ಫೋಟೋವನ್ನು ಕೂಡ ತೋರಿಸಿದರು. ಈ ಫೋಟೋ ಇರಾನಿನ ಜನರ ಚೈತನ್ಯವನ್ನು ಪ್ರತಿನಿಧಿಸುವುದರಿಂದ ಬಹಳ ಮುಖ್ಯವಾಗಿದೆ. ಅಮೆರಿಕದೊಂದಿಗಿನ ಯುದ್ಧದ ನಡುವೆ ಇರಾನ್ ಬಲವಾಗಿ ನಿಂತಿದೆ ಎಂದು ಈ ಚಿತ್ರ ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ