
ಪ್ರೀತಿ ಎನ್ನುವುದು ಕೇವಲ ಮನುಷ್ಯರ ನಡುವೆ ಮಾತ್ರ ಇರುವುದಿಲ್ಲ, ಅದು ಪ್ರಕೃತಿಯ ಎಲ್ಲ ಜೀವಿಗಳ ನಡುವೆಯೂ ಇರಬಹುದು ಎಂಬುದಕ್ಕೆ ಈ ವೀಡಿಯೊ ಒಂದು ಜೀವಂತ ಉದಾಹರಣೆ. ನಗರದ ಬಿಡುವಿಲ್ಲದ ರಸ್ತೆಯ ಬದಿಯಲ್ಲಿ ವಯೋವೃದ್ಧರೊಬ್ಬರು ಅಲ್ಲಿನ ಇಲಿಗಳೊಂದಿಗೆ ಅಕ್ಕರೆಯಿಂದ ಸಮಯ ಕಳೆಯುತ್ತಾ, ಅವುಗಳಿಗೆ ತಿಂಡಿ ತಿನ್ನಿಸುತ್ತಿರುವ ದೃಶ್ಯ ಎಲ್ಲರ ಹೃದಯ ಗೆಲ್ಲುತ್ತಿದೆ. ಸಾಮಾನ್ಯವಾಗಿ ಮನುಷ್ಯರನ್ನು ಕಂಡರೆ ದೂರ ಓಡುವ ಇಲಿಗಳು, ಈ ವೃದ್ಧರ ಬಳಿ ಯಾವುದೇ ಭಯವಿಲ್ಲದೆ ಬಂದು ತಿಂಡಿ ತಿನ್ನುತ್ತಿವೆ. ಇದು ಅವರು ಆ ಪ್ರಾಣಿಗಳೊಂದಿಗೆ ಬೆಳೆಸಿಕೊಂಡಿರುವ ವಿಶ್ವಾಸವನ್ನು ತೋರಿಸುತ್ತದೆ.”ನನ್ನನ್ನು ಪ್ರೀತಿಸಿದರೆ ನಾನು ನಿಮ್ಮನ್ನು ಪ್ರೀತಿಸುತ್ತೇನೆ” ಎಂಬ ಪ್ರಾಣಿಗಳ ಸಹಜ ಗುಣವನ್ನು ಈ ವೀಡಿಯೊ ಪ್ರತಿಬಿಂಬಿಸುತ್ತದೆ. ಯಾರು ಯಾರನ್ನೂ ಕೇಳದ ಈ ಜಗತ್ತಿನಲ್ಲಿ, ಕಿಲುಬು ಕಾಂಚಾಣದ ಹಂಗಿಲ್ಲದ ಈ ಪ್ರೀತಿ ಅನನ್ಯ. ಈ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದು, “ನಿಜವಾದ ಪ್ರೀತಿ ಎಂದರೆ ಇದೇ” ಎಂದು ಸಾವಿರಾರು ಜನರು ಕಾಮೆಂಟ್ ಮಾಡುತ್ತಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ