ಇಸ್ರೇಲ್-ಇರಾನ್ ಸಂಘರ್ಷ:ಈ 9 ವಾಯು ಪ್ರದೇಶಗಳಲ್ಲಿ ಹಾರಾಟ ನಡೆಸದಂತೆ ವಿಮಾನಯಾನ ಸಂಸ್ಥೆಗಳಿಗೆ ಡಿಜಿಸಿಎ ಸಲಹೆ

ಇಸ್ರೇಲ್-ಇರಾನ್ ಸಂಘರ್ಷ:ಈ 9 ವಾಯು ಪ್ರದೇಶಗಳಲ್ಲಿ ಹಾರಾಟ ನಡೆಸದಂತೆ ವಿಮಾನಯಾನ ಸಂಸ್ಥೆಗಳಿಗೆ ಡಿಜಿಸಿಎ ಸಲಹೆ

ನವದೆಹಲಿ, ಮಾರ್ಚ್​ 20: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಸಂಘರ್ಷದ ಮಧ್ಯೆ, ನಾಗರಿಕ ವಿಮಾನಯಾನ ನಿರ್ದೇಶನಾಲಯ ಶುಕ್ರವಾರ(ಮಾರ್ಚ್​20) ವಿಮಾನಯಾನ ಸಂಸ್ಥೆಗಳು ಗಲ್ಫ್​ ಪ್ರದೇಶದಲ್ಲಿನ 9 ವಾಯು ಪ್ರದೇಶಗಳಲ್ಲಿ ಹಾರಾಟ ನಡೆಸದಂತೆ ವಿಮಾನಯಾನ ಸಂಸ್ಥೆಗಳಿಗೆ ಸಲಹೆ ನೀಡಿದೆ.

ಡಿಜಿಸಿಎ ವಿಮಾನಯಾನ ಸಂಸ್ಥೆಗಳು ಬಹ್ರೇನ್, ಇರಾನ್, ಇರಾಕ್, ಇಸ್ರೇಲ್, ಜೋರ್ಡಾನ್, ಕುವೈತ್, ಲೆಬನಾನ್, ಕತಾರ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಾಯುಪ್ರದೇಶಗಳನ್ನು ತಪ್ಪಿಸುವಂತೆ ಕೇಳಿಕೊಂಡಿದೆ. ಭಾರತೀಯ ವಿಮಾನಯಾನ ಸಂಸ್ಥೆಗಳು ಕೆಲವು ಷರತ್ತುಗಳಿಗೆ ಒಳಪಟ್ಟು ಒಮನ್ ಮತ್ತು ಸೌದಿ ಅರೇಬಿಯಾ ವಾಯುಪ್ರದೇಶಗಳ ಮೇಲೆ ಹಾರಾಟ ನಡೆಸಬಹುದು ಎಂದು ನಿಯಂತ್ರಕ ತಿಳಿಸಿದೆ.

ವಾಯುಪ್ರದೇಶದೊಳಗೆ FL 320 ಅಥವಾ 32,000 ಅಡಿಗಳಿಗಿಂತ ಕಡಿಮೆ ಕಾರ್ಯನಿರ್ವಹಿಸದಂತೆ ವಿಮಾನಯಾನ ಸಂಸ್ಥೆಗಳಿಗೆ ತಿಳಿಸಿದೆ. ಭಾರತೀಯ ವಿಮಾನಯಾನ ಸಂಸ್ಥೆಗಳು ಕೆಲವು ಷರತ್ತುಗಳಿಗೆ ಒಳಪಟ್ಟು ಒಮಾನ್ ಮತ್ತು ಸೌದಿ ಅರೇಬಿಯಾ ವಾಯುಪ್ರದೇಶಗಳ ಮೇಲೆ ಹಾರಾಟ ನಡೆಸಬಹುದು.
ಇರಾನ್‌ನಲ್ಲಿನ ಗುರಿಗಳ ಮೇಲೆ ಅಮೆರಿಕ ಮತ್ತು ಇಸ್ರೇಲ್ ಇತ್ತೀಚೆಗೆ ನಡೆಸಿದ ಮಿಲಿಟರಿ ದಾಳಿಗಳು ನಾಗರಿಕ ವಿಮಾನಯಾನಕ್ಕೆ ಹೆಚ್ಚಿನ ಅಪಾಯದ ವಾತಾವರಣವನ್ನು ಸೃಷ್ಟಿಸಿವೆ ಎಂದು ಡಿಜಿಸಿಎ ಹೇಳಿದೆ.

ಮತ್ತಷ್ಟು ಓದಿ: ಕತಾರ್ ಅನಿಲ ಘಟಕದ ಮೇಲಿನ ಇರಾನ್ ಘಾತಕ ದಾಳಿಯಿಂದ ಭಾರತಕ್ಕೆ ಇನ್ನೆಷ್ಟು ವರ್ಷ ಕಾಡಲಿದೆ ಅನಿಲ ಸಮಸ್ಯೆ

ಇರಾನ್ ಘೋಷಿಸಿದ ಪ್ರತೀಕಾರದ ಕ್ರಮಗಳು ಬೆದರಿಕೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ ಮತ್ತು ವಿಮಾನ ಕಾರ್ಯಾಚರಣೆಗಳಿಗೆ ಗಂಭೀರ ಅಪಾಯಗಳನ್ನುಂಟುಮಾಡುತ್ತವೆ ಎಂದು ಹೇಳಿದ್ದಾರೆ. ಈ ಸಲಹೆಯು ತಕ್ಷಣದಿಂದ ಜಾರಿಗೆ ಬರುತ್ತದೆ ಮತ್ತು ಮಾರ್ಚ್ 28 ರವರೆಗೆ ಜಾರಿಯಲ್ಲಿರುತ್ತದೆ ಎಂದು ಡಿಜಿಸಿಎ ತಿಳಿಸಿದೆ.

ಇಸ್ರೇಲ್‌ನ ಮೊಸಾದ್ ಗುಪ್ತಚರ ಸಂಸ್ಥೆಗಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಇರಾನ್‌ನಲ್ಲಿ ವ್ಯಕ್ತಿಯೊಬ್ಬನನ್ನು ಗಲ್ಲಿಗೇರಿಸಲಾಗಿದೆ ಎಂದು ಇರಾನ್‌ನ ನ್ಯಾಯಾಂಗ ಬುಧವಾರ ತಿಳಿಸಿದೆ. ನ್ಯಾಯಾಂಗದ ಮಿಜಾನ್ ಸುದ್ದಿಸಂಸ್ಥೆ ಆ ವ್ಯಕ್ತಿಯನ್ನು ಕೌರೋಶ್ ಕೀವಾನಿ ಎಂದು ಗುರುತಿಸಿದೆ.
ಆತ ಇಸ್ರೇಲ್‌ನ ಮೊಸಾದ್‌ಗೆ ಸೂಕ್ಷ್ಮ ಸ್ಥಳಗಳ ಚಿತ್ರಗಳು ಮತ್ತು ಮಾಹಿತಿಯನ್ನು ಒದಗಿಸಿದ್ದಾರೆ ಎಂದು ಆರೋಪಿಸಲಾಗಿದೆ.

ವಿಶ್ವದ ಅಗ್ರ ಮರಣದಂಡನೆಕಾರರಲ್ಲಿ ಒಂದಾದ ಇರಾನ್, ಆಗಾಗ್ಗೆ ಮುಚ್ಚಿದ ಬಾಗಿಲಿನ ವಿಚಾರಣೆಗಳಲ್ಲಿ, ವಿಶೇಷವಾಗಿ ಬೇಹುಗಾರಿಕೆ ಆರೋಪದ ಮೇಲೆ ಸಾಕಷ್ಟು ಜನರಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸುತ್ತದೆ ಮತ್ತು ಅಲ್ಲಿ ಜನರು ತಮ್ಮ ವಿರುದ್ಧದ ಪ್ರಕರಣಗಳನ್ನು ಸಂಪೂರ್ಣವಾಗಿ ಪ್ರಶ್ನಿಸಲು ಸಾಧ್ಯವಿಲ್ಲ.

ವಿಶ್ವದ ಅತ್ಯಂತ ದೊಡ್ಡ ನೈಸಿರ್ಗಿಕ ಅನಿಲ ಘಟಕ ಇದಾಗಿದೆ, ಇರಾನ್ ದಾಳಿಯಿಂದ ಕತಾರ್​ಗೆ ವಾರ್ಷಿಕ ಸುಮಾರು 20 ಬಿಲಿಯನ್ ಡಾಲರ್​​ನಷ್ಟು ಆದಾಯ ನಷ್ಟವಾಗುವ ಸಾಧ್ಯತೆ ಇದೆ. ಹಾಗೆಯೇ ವಾರ್ಷಿಕವಾಗಿ ಸುಮಾರು 12.8 ಮಿಲಿಯನ್ ಟನ್ ಎಲ್​ಎನ್​ಜಿ ಪೂರೈಕೆಯಲ್ಲಿ ಮುಂದಿನ ಮೂರರಿಂದ ಐದು ವರ್ಷಗಳವರೆಗೆ ವ್ಯತ್ಯಯಾಗಬಹುದು ಎಂದು ಅಂದಾಜಿಸಲಾಗಿದೆ.

ಇದನ್ನು ಕತಾರ್​ನ ಇಂಧನ ಇಲಾಖೆಯೇ ಖಾತ್ರಿಪಡಿಸಿದೆ, ಇದರಿಂದ ಭಾರತ, ಚೀನಾ ಸೇರಿದಂತೆ ಕೆಲವು ಏಷ್ಯಾ ಹಾಗೂ ಐರೋಪ್ಯ ರಾಷ್ಟ್ರಗಳು ಸಮಸ್ಯೆಗೆ ಈಡಾಗಬಹುದು. ಇರಾನ್​ನೊಂದಿಗೆ ಕತಾರ್ ಉತ್ತಮ ಸಂಬಂಧವನ್ನೇ ಹೊಂದಿತ್ತು. ಹೀಗಾಗಿ ಕನಸಲ್ಲಿಯೂ ಕತಾರ್​ನ ಅಂತಹ ಪ್ರಮುಖ ಘಟಕಗಳ ಮೇಲೆ ಇರಾನ್ ದಾಳಿ ಮಾಡಲಿದೆ ಎಂದು ಅಲ್ಲಿನ ಆಡಳಿತ ವ್ಯವಸ್ಥೆ ಅಂದಾಜು ಮಾಡಿರಲಿಲ್ಲ. ಹೀಗಾಗಿ ಮುಸ್ಲಿಂ ರಾಷ್ಟ್ರವೊಂದು ಈ ರೀತಿ ದಾಳಿ ಮಾಡಿದೆ ಎಂದು ಕತಾರ್ ಆಕ್ರೋಶಗೊಂಡಿದೆ. ಆದರೆ ಈ ಕೃತ್ಯವು ವಿಶ್ವದ ಪ್ರಮುಖ ರಾಷ್ಟ್ರಗಳಿಗೆ ದುಃಸ್ವಪ್ನವಾಗಿ ಕಾಡಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *