Headlines

ಈಗ ಉಳಿದಿರುವುದು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮಾತ್ರ; ಉದ್ಧವ್ ಠಾಕ್ರೆಗೆ ಅಮಿತ್ ಶಾ ಟಾಂಗ್ – Kannada News | Amit Shah takes dig at Uddhav Thackeray says There is only one Shiv Sena now led by Eknath Shinde

ಕೊಲ್ಲಾಪುರ, ಜೂನ್ 20: ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೆ ಸಂಚಲನ ಮೂಡಿದ್ದು, ಶಿವಸೇನಾ (UBT) ಮುಖ್ಯಸ್ಥ ಉದ್ಧವ್ ಠಾಕ್ರೆ (Uddhav Thackeray) ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಮಹಾರಾಷ್ಟ್ರದಲ್ಲಿ ಈಗ ಕೇವಲ ಒಂದೇ ಶಿವಸೇನೆ ಇದೆ. ಅದು ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ” ಎಂದು ಅಮಿತ್ ಶಾ ಹೇಳಿದ್ದಾರೆ. ಉದ್ಧವ್ ಠಾಕ್ರೆ ಬಣದ ಸಂಸದರು ಬಂಡಾಯದ ಹಾದಿಯಲ್ಲಿದ್ದಾರೆ ಎಂಬ ವದಂತಿಗಳ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.

ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ ಉದ್ಧವ್ ಠಾಕ್ರೆ ಬಣವನ್ನು ಲೇವಡಿ ಮಾಡಿದ ಅಮಿತ್ ಶಾ, “ಬಾಳಾಸಾಹೇಬ್ ಠಾಕ್ರೆ ಅವರ ನೈಜ ಹಿಂದೂತ್ವದ ಸಿದ್ಧಾಂತಗಳನ್ನು ಏಕನಾಥ್ ಶಿಂಧೆ ಅವರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಹೀಗಾಗಿ, ಅಧಿಕೃತ ಮತ್ತು ನಿಜವಾದ ಶಿವಸೇನೆ ಎಂದರೆ ಅದು ಶಿಂಧೆ ನೇತೃತ್ವದ ಪಕ್ಷ ಮಾತ್ರ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಜೊತೆ ವಿಲೀನಕ್ಕೆ ಉದ್ಧವ್ ಠಾಕ್ರೆ ಪ್ಲಾನ್; ಶಿವಸೇನೆಯ 6 ಬಂಡಾಯ ಸಂಸದರಿಂದ ಸ್ಪೀಕರ್‌ಗೆ ದೂರು

ಅಮಿತ್ ಶಾ ಅವರ ಈ ಹೇಳಿಕೆಯು ಕೇವಲ ರಾಜಕೀಯ ಟೀಕೆಯಾಗಿರದೆ, ಪ್ರಸ್ತುತ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಆಂತರಿಕ ರಾಜಕೀಯ ಬೆಳವಣಿಗೆಗಳ ಸ್ಪಷ್ಟ ಸೂಚನೆಯಾಗಿದೆ ಎನ್ನಲಾಗಿದೆ. ವರದಿಗಳ ಪ್ರಕಾರ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (UBT) ಬಣದ ಹಲವು ಹಾಲಿ ಸಂಸದರು ಮತ್ತು ಹಿರಿಯ ನಾಯಕರು ಅವರ ನಾಯಕತ್ವದ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಅವರೆಲ್ಲರೂ ಶೀಘ್ರದಲ್ಲೇ ಏಕನಾಥ್ ಶಿಂಧೆ ಬಣ ಅಥವಾ ಎನ್‌ಡಿಎ ಪಾಳಯವನ್ನು ಸೇರಲಿದ್ದಾರೆ ಎಂಬ ವದಂತಿಗಳು ದಟ್ಟವಾಗಿವೆ.

ಇದನ್ನೂ ಓದಿ: ಬೇರೆ ಪಕ್ಷಕ್ಕೆ ಹೋಗುವುದಿದ್ದರೆ ಮೊದಲು ರಾಜೀನಾಮೆ ಕೊಡಿ; ಶಿವಸೇನೆ ಸಂಸದರಿಗೆ ಸಂಜಯ್ ರಾವತ್ ಸವಾಲು

ಭಾರತೀಯ ಚುನಾವಣಾ ಆಯೋಗವು ಈಗಾಗಲೇ ಏಕನಾಥ್ ಶಿಂಧೆ ಬಣಕ್ಕೆ ‘ಬಿಲ್ಲು ಮತ್ತು ಬಾಣ’ ಚಿಹ್ನೆ ಹಾಗೂ ‘ಶಿವಸೇನೆ’ ಎಂಬ ಮೂಲ ಹೆಸರಿನ ಮಾನ್ಯತೆ ನೀಡಿದೆ. ಇದನ್ನು ತಮ್ಮ ಭಾಷಣದ ಮೂಲಕ ಜನರಿಗೆ ಮತ್ತೊಮ್ಮೆ ನೆನಪಿಸಿದ ಅಮಿತ್ ಶಾ, ಉದ್ಧವ್ ಠಾಕ್ರೆ ಅವರ ಪಕ್ಷವು ಈಗ ಕೇವಲ ಒಂದು ಬಣವಾಗಿ ಮಾತ್ರ ಉಳಿದಿದೆ ಎಂಬುದನ್ನು ಒತ್ತಿಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *