ತಾಪತ್ರಯಕ್ಕೆ ಪರಿಹಾರImage Credit source: Getty Images
ಈ ತಿಂಗಳಲ್ಲಿ ಎದುರಾದ ಎದುರಾಗಲಿರುವ ತೊಂದರೆಗಳು ಯಾವುವು ಎಂದು ಸಿಂಹ ಮತ್ತು ಕನ್ಯಾ ರಾಶಿಯವರಿಗೆ ನೋಡೋಣ. ರವಿ ಹಾಗೂ ಬುಧನ ಆಧಿಪತ್ಯದ ಈ ಎರಡೂ ರಾಶಿಗಳಿಗೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಏನೆಲ್ಲ ಆಗಲಿದೆ, ಅದಕ್ಕೆ ಪರಿಹಾತವನ್ನು ವೈಯಕ್ತಿಯಕವಾಗಿಯೂ ಮಾಡಿಕೊಳ್ಳಬಹುದು.
ಸಿಂಹ ರಾಶಿ :
ಸಿಂಹ ರಾಶಿಯವರಿಗೆ ಪ್ರಸ್ತುತ ಗೋಚಾರದಲ್ಲಿ ಪ್ರಮುಖ ಗ್ರಹಗಳ ಸ್ಥಾನವು ಸವಾಲಿನ ಪರಿಸ್ಥಿತಿಯನ್ನು ತಿಳಿಸುತ್ತದೆ.
ಅಷ್ಟಮ ಶನಿಯ ಪ್ರಭಾವ :
ಮೀನ ರಾಶಿಯಲ್ಲಿ ವಕ್ರಿಯಾಗಿರುವ ಶನಿಯು ಸಿಂಹ ರಾಶಿಗೆ ೮ನೇ ಮನೆಯಲ್ಲಿದ್ದಾನೆ. ಇದು ಮಾನಸಿಕ ಒತ್ತಡ, ಕಾರ್ಯಗಳಲ್ಲಿ ಅನಿರೀಕ್ಷಿತ ಅಡೆತಡೆಗಳು, ಧನ ನಷ್ಟ ಮತ್ತು ಆರೋಗ್ಯದಲ್ಲಿ ಏರಿಳಿತಗಳನ್ನು ಉಂಟುಮಾಡಬಹುದು.
ಕೇತು ಮತ್ತು ಶುಕ್ರ :
ರಾಶಿಯಲ್ಲೇ ಕೇತು ಮತ್ತು ಶುಕ್ರ ಇರುವುದರಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಗೊಂದಲ, ಶರೀರದಲ್ಲಿ ಶಕ್ತಿ ಕುಂದುವುದು ಹಾಗೂ ಅನಗತ್ಯ ಮಾನಸಿಕ ವಿರಕ್ತಿ ಭಾವನೆ ಕಾಡಬಹುದು.
ಸಪ್ತಮ ಭಾವದಲ್ಲಿ ರಾಹು ಮತ್ತು ಚಂದ್ರ:
ಕುಂಭ ರಾಶಿಯಲ್ಲಿ ರಾಹು ಮತ್ತು ಚಂದ್ರರ ಸಂಯೋಜನೆಯಿಂದ ‘ಗ್ರಹಣ ದೋಷ’ ಉಂಟಾಗುತ್ತದೆ. ಇದು ವೈವಾಹಿಕ ಜೀವನದಲ್ಲಿ ಸಣ್ಣಪುಟ್ಟ ವಿಷಯಗಳಿಗೂ ಭಿನ್ನಾಭಿಪ್ರಾಯ, ಸಂಗಾತಿಯೊಂದಿಗೆ ಅಸಮಾಧಾನ, ಹಾಗೂ ವ್ಯಾಪಾರ-ಪಾಲುದಾರಿಕೆಯಲ್ಲಿ ತಪ್ಪು ಗ್ರಹಿಕೆಗಳಿಗೆ ಕಾರಣವಾಗಬಹುದು.
ದ್ವಾದಶ ಭಾವದಲ್ಲಿ ಸೂರ್ಯ ಮತ್ತು ಗುರು:
ರಾಶ್ಯಾಧಿಪತಿ ಸೂರ್ಯ ಹಾಗೂ ಅಸ್ತಂಗತನಾದ ಗುರು ೧೨ನೇ ಮನೆಯಲ್ಲಿ ಕರ್ಕಾಟಕ ರಾಶಿಯಲ್ಲಿದ್ದಾರೆ. ಇದರಿಂದ ಅನಗತ್ಯ ಹಾಗೂ ಅನಿರೀಕ್ಷಿತ ವೆಚ್ಚಗಳು ಹೆಚ್ಚಾಗುವುದು, ನಿದ್ರಾಹೀನತೆ ಮತ್ತು ಪ್ರಯಾಣದಲ್ಲಿ ಕ್ಲೇಶಗಳು ಎದುರಾಗಬಹುದು.
ಕನ್ಯಾ ರಾಶಿ:
ಕನ್ಯಾ ರಾಶಿಯವರಿಗೆ ಗ್ರಹಗಳ ಸ್ಥಾನಮಾನದಂತೆ ಕೆಲವು ಪ್ರಮುಖ ಕ್ಷೇತ್ರಗಳಲ್ಲಿ ಎಚ್ಚರಿಕೆ ಅಗತ್ಯ.
ಸಪ್ತಮ ಭಾವದಲ್ಲಿ ವಕ್ರ ಶನಿ:
ಮೀನ ರಾಶಿಯ ಶನಿಯು ಕನ್ಯಾ ರಾಶಿಗೆ ನೇರವಾಗಿ ೭ನೇ ಮನೆಯಲ್ಲಿದ್ದು ಲಗ್ನವನ್ನು ವೀಕ್ಷಿಸುತ್ತಾನೆ. ಇದರಿಂದ ದಾಂಪತ್ಯ ಜೀವನದಲ್ಲಿ ಕಷ್ಟ-ಮನಸ್ತಾಪಗಳು, ಸಂಗಾತಿಯ ಆರೋಗ್ಯದಲ್ಲಿ ಏರಿಳಿತ ಮತ್ತು ಹೊಸ ವ್ಯವಹಾರಿಕ ಒಪ್ಪಂದಗಳಲ್ಲಿ ವಿಳಂಬ ಉಂಟಾಗಬಹುದು.
ದ್ವಾದಶ ಭಾವದಲ್ಲಿ ಕೇತು ಮತ್ತು ಶುಕ್ರ:
೧೨ನೇ ಮನೆಯಲ್ಲಿ ಕೇತು ಮತ್ತು ಶುಕ್ರ ಇರುವುದರಿಂದ ಹಣಕಾಸಿನ ಆಸೋರಿಕೆ, ಹಿಡಿತವಿಲ್ಲದ ಖರ್ಚು, ಕಣ್ಣಿನ ತೊಂದರೆಗಳು ಹಾಗೂ ವೈಯಕ್ತಿಕ ಸುಖ-ಸಂತೋಷಗಳಲ್ಲಿ ಕೊರತೆ ಕಾಣಿಸಬಹುದು.
ಷಷ್ಠ ಭಾವದಲ್ಲಿ ರಾಹು ಮತ್ತು ಚಂದ್ರ:
೬ನೇ ಮನೆಯಲ್ಲಿ ರಾಹು-ಚಂದ್ರರ ಸಂಯೋಜನೆಯಿಂದ ರಹಸ್ಯ ಚಿಂತೆಗಳು, ಜೀರ್ಣಕ್ರಿಯೆ ಅಥವಾ ಮಾನಸಿಕ ಆತಂಕದಂತಹ ಸಮಸ್ಯೆಗಳು ಕಾಡಬಹುದು. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಸಣ್ಣಪುಟ್ಟ ಕಿರಿಕಿರಿ ಅಥವಾ ಸಾಲದ ಸುಳಿಗೆ ಸಿಲುಕುವ ಎಚ್ಚರಿಕೆ ಅಗತ್ಯ.
ಗುರು ಅಸ್ತ:
ಲಾಭ ಸ್ಥಾನದಲ್ಲಿ ಉಚ್ಚ ಗುರುವಿದ್ದರೂ, ಆತ ಸೂರ್ಯನಿಂದ ಅಸ್ತಂಗತನಾಗಿರುವುದರಿಂದ ನಿರೀಕ್ಷಿತ ಆರ್ಥಿಕ ಲಾಭಗಳು ತಕ್ಷಣಕ್ಕೆ ಸಿಗದೆ ವಿಳಂಬವಾಗಬಹುದು.
ಪರಿಹಾರಗಳು:
ಸಿಂಹ ರಾಶಿಯವರು ಶಿವನ ಆರಾಧನೆ, ಹನುಮಾನ್ ಚಾಲೀಸಾ ಪಾರಾಯಣ ಮಾಡುವುದು ಹಾಗೂ ಶನಿವಾರ ಶನಿ ದೇವರಿಗೆ ಎಳ್ಳೆಣ್ಣೆ ದೀಪ ಹಚ್ಚುವುದು ಶ್ರೇಯಸ್ಸು ಪಡೆಯುವರು.
ಕನ್ಯಾ ರಾಶಿಯವರು ವಿಷ್ಣು ಸಹಸ್ರನಾಮ ಪಠಣ, ಸುಬ್ರಹ್ಮಣ್ಯ ಸ್ವಾಮಿ ಪೂಜೆಯಿಂದ ಶುಭ ಫಲ ಪಡೆಯಬಹುದು.
– ಲೋಹಿತ್ ಹೆಬ್ಬಾರ್
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ