ಕಂಗನಾ ರನೌತ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಸಿನಿಮಾ ‘ಭಾರತ ಭಾಗ್ಯ ವಿಧಾತ’ ಈ ಸಿನಿಮಾ ಮುಂಬೈ ಟೆರರಿಸ್ಟ್ ಅಟ್ಯಾಕ್ ಕುರಿತ ಕತೆಯನ್ನು ಒಳಗೊಂಡಿದೆ. ಕೆಲ ವಾರಗಳ ಹಿಂದೆ ಈ ಸಿನಿಮಾ ಬಿಡುಗಡೆ ಆಗಿತ್ತು. ಇದೀಗ ಜೀ5ನಲ್ಲಿ ಸಿನಿಮಾ ವೀಕ್ಷಿಸಬಹುದಾಗಿದೆ.
ರಶ್ಮಿಕಾ ಮಂದಣ್ಣ, ಕೃತಿ ಸನೋನ್ ಮತ್ತು ಶಾಹಿದ್ ಕಪೂರ್ ನಟಿಸಿರುವ ‘ಕಾಕ್ಟೇಲ್ 2’ ಸಿನಿಮಾ ಕಳೆದ ತಿಂಗಳು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿತ್ತು. ಇದೀಗ ಈ ಸಿನಿಮಾ ಒಟಿಟಿಗೆ ಬಂದಿದ್ದು, ನೆಟ್ಫ್ಲಿಕ್ಸ್ನಲ್ಲಿ ವೀಕ್ಷಣೆಗೆ ಲಭ್ಯವಿದೆ.
ಮಲಯಾಳಂ ನ ‘ಕತ್ತಾಲನ್’ ಸಿನಿಮಾ ಆಕ್ಷನ್ ಕತೆಯನ್ನು ಒಳಗೊಂಡಿದ್ದು, ಭರಪೂರ ಆಕ್ಷನ್ ಅನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾ ಅನ್ನು ಮನೋರಮಾ ಮ್ಯಾಕ್ಸ್ನಲ್ಲಿ ವೀಕ್ಷಿಸಬಹುದಾಗಿದೆ.
‘ಜಾನಿ ಜಂಪರ್’ ಒಂದು ಭಿನ್ನ ಕತೆಯುಳ್ಳ ಸಿನಿಮಾ. ಒಬ್ಬ ಕೇಬಲ್ ಆಪರೇಟ್ ಮಾಡುವ ಯುವಕ, ಶಾಸಕನ ಅಪಹರಣ ಪ್ರಕರಣದ ತನಿಖೆ ಮಾಡುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾವನ್ನು ಜಿಯೋ ಹಾಟ್ಸ್ಟಾರ್ನಲ್ಲಿ ವೀಕ್ಷಿಸಬಹುದಾಗಿದೆ.
ಸಂಜಯ್ ದತ್ ನಟಿಸಿರುವ ‘ಆಖ್ರಿ ಸವಾಲ್’ ಸಿನಿಮಾ ಕೆಲ ವಾರಗಳ ಹಿಂದಷ್ಟೆ ಬಿಡುಗಡೆ ಆಗಿತ್ತು. ಇದು ಆರ್ಎಸ್ಎಸ್ ಕುರಿತ ಕತೆ ಹೊಂದಿರುವ ಸಿನಿಮಾ ಆಗಿದೆ. ಆರ್ಎಸ್ಎಸ್ ಪರವಾದ ನರೇಟಿವ್ ಹೊಂದಿರುವ ಈ ಸಿನಿಮಾ ಅನ್ನು ಲಯನ್ಸ್ ಗೇಟ್ ಒಟಿಟಿಯಲ್ಲಿ ವೀಕ್ಷಿಸಬಹುದಾಗಿದೆ.
‘108 ಬೇಸ್ ಹಾಸ್ಟಿಟಲ್, ಉರಿ’, ನಿಜ ಘಟನೆಗಳನ್ನು ಆಧರಿಸಿ ನಿರ್ಮಿಸಲಾಗಿರುವ ವೆಬ್ ಸರಣಿ ಇದಾಗಿದೆ. ಇದೊಂದು ಸೈನಿಕ ಆಸ್ಪತ್ರೆಯಲ್ಲಿ ನಡೆಯುವ ಕತೆಯನ್ನು ಒಳಗೊಂಡಿದೆ. ವೆಬ್ ಸರಣಿಯನ್ನು ಜಿಯೋ ಹಾಟ್ಸ್ಟಾರ್ನಲ್ಲಿ ವೀಕ್ಷಿಸಬಹುದಾಗಿದೆ.
‘ರೀಚರ್’ ಅಥವಾ ‘ಜಾಕ್ ರೀಚರ್’ ಅಮೆಜಾನ್ ಪ್ರೈಂ ಒಟಿಟಿಯ ಬಲು ಜನಪ್ರಿಯ ವೆಬ್ ಸರಣಿ. ಈ ಆಕ್ಷನ್ ಮತ್ತು ಸಸ್ಪೆನ್ಸ್ ಭರಿತ ವೆಬ್ ಸರಣಿಯ ನಾಲ್ಕನೇ ಸೀಸನ್ ಈ ವಾರ ಬಿಡುಗಡೆ ಆಗಿದೆ. ಅಮೆಜಾನ್ ಪ್ರೈಂನಲ್ಲಿ ಇದನ್ನು ವೀಕ್ಷಿಸಬಹುದಾಗಿದೆ.






